newsfirstkannada.com

ಇದು ಭಾರತದ ಅತೀ ದೊಡ್ಡ ಕನಸಿನ ಯಾನ.. ಚಂದ್ರನ ಸ್ಪರ್ಶಿಸುವ ಲ್ಯಾಂಡರ್​​ ವಿಕ್ರಂ ಮೇಲೆ ನೂರೆಂಟು ಭರವಸೆ..!

Share :

14-07-2023

  ಚಂದ್ರಯಾನ 2 ವೈಫಲ್ಯದ ಬಳಿಕ ಚಂದ್ರಯಾನ-3 ಹಾರಲು ಸಿದ್ಧ

  ಬರೋಬ್ಬರಿ 600 ಕೋಟಿ ಮೊತ್ತದ ಚಂದ್ರಯಾನ-3 ಯೋಜನೆ

  ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದ್ದಾನೆ ‘ಲ್ಯಾಂಡರ್​ ವಿಕ್ರಂ’

ಭಾರತದ ಕನಸನ್ನು ಹೊತ್ತು ಸಾಗಲು ಚಂದ್ರಯಾನ-3 ನೌಕೆ ರೆಡಿಯಾಗಿ ನಿಂತಿದೆ. ಇಂದು ಮಧ್ಯಾಹ್ನ 02:35ಕ್ಕೆ ಸರಿಯಾಗಿ ಚಂದ್ರಯಾನ-3 ಉಡಾವಣೆಯಾಗಲಿದ್ದು, ಐತಿಹಾಸಿಕ ಸಾಧನೆಗೆ ಭಾರತ ಸನ್ನದ್ಧವಾಗಿದೆ. ಅಂದಹಾಗೆಯೇ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವಂತೆ ಇಸ್ರೋ ವಿಜ್ಞಾನಿಗಳು ಯೋಜನೆ ಕೈಗೊಂಡಿದ್ದಾರೆ

ಭಾರತದ ಕನಸು ನನಸಾಗುವ ಸಮಯ

ಚಂದ್ರಯಾನ 2 ವೈಫಲ್ಯದ ಬಳಿಕ ಚಂದ್ರಯಾನ-3 ನೌಕೆ ಹಾರಲು ಸಿದ್ದವಾಗಿದೆ. ಒಂದು ವೇಲೆ ಇದು ಯಶಸ್ವಿಯಾದರೆ, ಭಾರತ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಲಿದೆ. ಮಾತ್ರವಲ್ಲದೆ, ಚಂದ್ರನಲ್ಲಿ ಲ್ಯಾಂಡರ್ ಇಳಿಸಿದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
2ನೇ ವೈಫಲ್ಯದಿಂದ ಎಚ್ಚೆತ್ತುಕೊಂಡ ಭಾರತ ವಿಜ್ಞಾನಿಗಳು ಚಂದ್ರಯಾನ-3ಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದಾರೆ. ಹೀಗಾಗಿ ಸೌತ್ ಪೋಲ್​ನಲ್ಲಿ ಸಂಶೋಧನೆ ಮಾಡುವ ಗುರಿಯನ್ನು ಭಾರತಹೊಂದಿದೆ.

ಬಹಳಷ್ಟು ದೇಶ ಸೌತ್ ಪೋಲ್​ನಲ್ಲಿ ಲ್ಯಾಂಡರ್ ಇಳಿಸಲು ಯತ್ನ ನಡೆಸಿತ್ತು. ಆದರೆ ದಕ್ಷಿಣ ಧ್ರುವ ಕಠಿಣವಾದ, ಕನಿಷ್ಠ ಉಷ್ಣಾಂಶ ಇರುವ ಪ್ರದೇಶವಾಗಿದೆ. ಯಾವುದೇ ದೇಶ ಕೂಡ ಇದುವರೆಗೂ ಯಶಸ್ವಿಯಾಗಿಲ್ಲ. ಹೀಗಾಗಿ ಭಾರತದ ಚಂದ್ರಯಾನ-3 ನೌಕೆಯ ಬಗ್ಗೆ ಭಾರೀ ಕುತೂಹಲ ಕೆರಳಿದೆ.

₹600 ಕೋಟಿ ಮೊತ್ತದ ಪ್ರಾಜೆಕ್ಟ್

ಚಂದ್ರಯಾನ-3ಗೆ ವಿಜ್ಞಾನಿಗಳು ಬರೋಬ್ಬರಿ 600 ಕೋಟಿ ಮೊತ್ತವನ್ನು ಖರ್ಚು ಮಾಡಿದ್ದಾರೆ. ಈ ಪ್ರಾಜೆಕ್ಟ್​​ಗಾಗಿ ಜಿಎಸ್ಎಲ್​ವಿ-ಎಂಕೆ-3 ಲಾಂಚಿಂಗ್ ವೆಹಿಕಲ್ ಬಳಕೆ ಮಾಡಲಾಗಿದೆ. ಇನ್ನು ಮಿಷನ್​ನ ತೂಕ 3,900 ಕೆಜಿ, 3 ಕಮ್ಯುನಿಕೇಷನ್ಸ್ ಘಟಕ ನಿರ್ಮಿಸಲಾಗಿದೆ.

ಇದರೊಂದಿಗೆ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮೆಷಿನ್, ಪ್ರೊಪಲ್ಷನ್ ಅಂತರಿಕ್ಷ ನೌಕೆಯು ನಭದತ್ತ ಚಿಮ್ಮಲು ಸಹಾಯ ಮಾಡಲಿದೆ. ಬಳಿಕ ಚಂದ್ರನ ಮೇಲ್ಮೈ ಭಾಗದಲ್ಲಿ ಮೆಷಿನ್ ಲ್ಯಾಂಡರ್ ಇಳಿಯುತ್ತದೆ.

ಲಾಂಚ್ ವೆಹಿಕಲ್ ಮಾರ್ಕ್-111

ಚಂದ್ರಯಾನಕ್ಕೆ ಆಂಧ್ರಪ್ರದೇಶದಿಂದ ಭಾರತದ ಮೂರನೇ ನೌಕೆ ಹೊರಡಲು ಸಜ್ಜಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ಮಾಡಲಿದ್ದಾರೆ. ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲಿದ್ದಾರೆ. ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್​ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಭಾರತದ ಅತೀ ದೊಡ್ಡ ಕನಸಿನ ಯಾನ.. ಚಂದ್ರನ ಸ್ಪರ್ಶಿಸುವ ಲ್ಯಾಂಡರ್​​ ವಿಕ್ರಂ ಮೇಲೆ ನೂರೆಂಟು ಭರವಸೆ..!

https://newsfirstlive.com/wp-content/uploads/2023/07/Chandrayan-3-1.jpg

Load More