newsfirstkannada.com

ವೈಚಾರಿಕ ಸಾಹಿತಿಗಳು 15ಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ..

Share :

18-08-2023

  ವೈಚಾರಿಕ ಸಾಹಿತಿಗಳು, ಲೇಖಕರಿಗೆ ಮತ್ತೆ ಜೀವ ಬೆದರಿಕೆ

  ಬುದ್ಧಿಜೀವಿ ಸಾಹಿತಿಗಳಿಗೆ ಬಂದ ಬೆದರಿಕೆ ಪತ್ರದಲ್ಲೇನಿದೆ?

  ರಕ್ಷಣೆಗಾಗಿ ಸರ್ಕಾರದ ಮೊರೆ ಹೋದ ಸಾರಸ್ವತ ಲೋಕ!

ರಾಜ್ಯದಲ್ಲಿ ಮತ್ತೊಮ್ಮೆ ಸಾಹಿತಿಗಳಿಗೆ ಬೆದರಿಕೆ ಒಡ್ಡಲಾಗಿದೆ. ಅನಾಮಧೇಯ ಹೆಸರಿನಡಿ ಮೊನ್ನೆ ಬಂಜಗೆರೆ ಜಯಪ್ರಕಾಶ್​ಗೆ ಪತ್ರ ಬಂದಿದೆ. ಈ ಕುರಿತು ಸಾಹಿತಿಗಳು ಗೃಹ ಸಚಿವರ ಭೇಟಿಗೆ ಸಮಯ ಕೇಳಿದ್ದಾರೆ. ಸಂಶೋಧಕ ಎಂ.ಎಂ.ಕಲಬುರ್ಗಿ.. ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಇನ್ನೂ ಜನಮಾನಸದಿಂದ ದೂರವಾಗಿಲ್ಲ. ವೈಚಾರಿಕ ರಾಮಯ್ಯನ ಅವಧಿಯಲ್ಲೇ ನಡೆದ ಈ ಎರಡೂ ಹತ್ಯೆ ಇಂದಿಗೂ ನಿಗೂಢ. ಈಗ ಮತ್ತೆ ಸಿದ್ದು ಸರ್ಕಾರ ಆರಂಭದಲ್ಲೇ ಪ್ರಗತಿಪರ ಲೇಖಕರಿಗೆ ಜೀವ ಬೆದರಿಕೆ ಶುರುವಾಗಿದೆ. ಲೇಖಕರು, ಸಾಹಿತಿಗಳು ಸೇರಿ 15ಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ಬರೆಯಲಾಗಿದೆ.

ವೈಚಾರಿಕ ಸಾಹಿತಿಗಳು, ಲೇಖಕರಿಗೆ ಮತ್ತೆ ಜೀವ ಬೆದರಿಕೆ!

ಕಲ್ಬುರ್ಗಿ, ಗೌರಿ ಲಂಕೇಶ್ ಬಳಿಕ ಈಗ ಮತ್ತೆ ಕಳೆದೊಂದು ವರ್ಷದಿಂದ ಜೀವ ಬೆದರಿಕೆ ಬಂದಿರುವುದು ಬುದ್ಧಿಜೀವಿಗಳು ಆತಂಕಗೊಂಡಿದ್ದಾರೆ. ಕೋಮುವಾದ, ಜಾತಿವಾದ, ಮೌಢ್ಯ ವಿರೋಧಿ ನಿಲುವುಳ್ಳ ಪ್ರಗತಿಪರ ಚಿಂತಕರಿಗೆ ಪತ್ರದ ಮೂಲಕ ಬೆದರಿಸುವ ಕಾರ್ಯ ಶುರುವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ, ಸಾಹಿತಿಗಳು, ಬುದ್ಧಿಜೀವಿಗಳು ಭದ್ರತೆಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ. ಕೆ. ಮರಳಸಿದ್ದಪ್ಪ ಎಸ್.ಜಿ ಸಿದ್ದರಾಮಯ್ಯ, ವಸುಂದರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿ 15ಕ್ಕೂ ಹೆಚ್ಚು ಸಾಹಿತಿಗಳಿಗೆ ಕಳೆದ ಒಂದು ವರ್ಷದಿಂದ ಬೆದರಿಕೆ ಪತ್ರ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಬೆದರಿಕೆ ಪತ್ರ ವಿಚಾರ ಗಂಭೀರವಾಗಿ ಪರಿಗಣಿಸಬೇಕು. ಬೆದರಿಕೆ ಪತ್ರ ಬರೆದವರನ್ನ ಪತ್ತೆ ಮಾಡಿ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.

ಸಹಿಷ್ಣು ಹಿಂದೂ ಹೆಸರಿನಲ್ಲಿ ಬಂದ ಬೆದರಿಕೆ ಪತ್ರದಲ್ಲೇನಿದೆ?

ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್​​ ಬಗ್ಗೆ ಮಾಧ್ಯಮ ಬಳಿ ಮಾತನಾಡಿ ಅಂತ ಒತ್ತಾಯಿಸಿರುವ ಅನಾಮಧೇಯ ವ್ಯಕ್ತಿ, ಮಾಧ್ಯಮಗಳ ಮುಂದೆ ಮುಸ್ಲಿಂರ ಕೃತ್ಯಗಳ ಬಗ್ಗೆ ಖಂಡಿಸಿ ಅಂತ ಹೇಳಿದ್ದಾನೆ. ಆದಷ್ಟು ಬೇಗ ಎಲ್ಲಾ ಬುದ್ಧಿಜೀವಿಗಳ ಶವಯಾತ್ರೆ ನಡೆಯಲಿದೆ ಎಂದು ಬೆದರಿಕೆ ಒಡ್ಡಿದ್ದು, ಬಂಜಗೇರೆ ಜಯಪ್ರಕಾಶ್​ ನಿಮ್ಮ ಜೊತೆ ಇನ್ನೂ 61 ಜನ ಬರಲಿದ್ದಾರೆ ಅಂತ ಪತ್ರದಲ್ಲಿ ಹೇಳಲಾಗಿದೆ. ನಿನ್ನ ಮತ್ತು ನಿಮ್ಮವರ ಪ್ರಾಣ ಭಯಾನಕತೆ, ಭೀಕರತೆ ಇರಲಿದೆ ಎಂದು ಬರೆಯಲಾಗಿದೆ. ನಮ್ಮ ಪ್ರಶ್ನೆಗೆ ಉತ್ತರ ಕೊಡಿ ಇಲ್ಲವಾದ್ರೆ, ಪ್ರಾಣಬಿಡಲು ರೆಡಿಯಾಗಿ ಅಂತ ಬೆದರಿಸಲಾಗಿದೆ. ಒಟ್ಟಾರೆ, ಕರ್ನಾಟಕದ ಲೇಖಕರು ಹಾಗೂ ಸಾಹಿತಿಗಳಿಗೆ ಬೆದರಿಕೆ ಹಾಕಲಾಗಿದ್ದು, ಸರ್ಕಾರ ಕೂಡ ಎಚ್ಚೆತ್ತುಕೊಂಡು ಭದ್ರತೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈಚಾರಿಕ ಸಾಹಿತಿಗಳು 15ಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ..

https://newsfirstlive.com/wp-content/uploads/2023/08/Life-threatening.jpg

Load More