ಸಚಿವರ ಬಳಿ ನ್ಯಾಯ ಕೇಳಲು ಹೋದವರಿಗೆ ಧಮ್ಕಿ ಹಾಕಿದ ಆರೋಪ
ದಲಿತರ ಮೇಲೆ ದೌರ್ಜನ್ಯ, ವಂಚನೆ, ಹಲ್ಲೆ ಪ್ರಕರಣದ ದೂರು ದಾಖಲು
ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಹೇಳಿದ್ದೇನು?
ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರು ನ್ಯಾಯ ಕೇಳಲು ಹೋದವರಿಗೆ ಧಮ್ಕಿ ಹಾಕಿದ ಆರೋಪಕ್ಕೆ ಗುರಿಯಾಗಿದ್ದಾರೆ. ದಲಿತರ ಮೇಲಿನ ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಆಸ್ತಿ ಕಬಳಿಕೆ ಆರೋಪದಲ್ಲಿ ಸಚಿವ ಡಿ. ಸುಧಾಕರ್ ವಿರುದ್ಧ FIR ಕೂಡ ದಾಖಲಾಗಿದೆ. ಇದು ಜಾಮೀನು ರಹಿತ ಪ್ರಕರಣವಾದ್ರೂ ಕಾನೂನು ಕ್ರಮ ಜರುಗಿಸಿಲ್ಲ. ಆವಾಜ್ ಹಾಕಿರುವ ವಿಡಿಯೋ ಬಹಿರಂಗವಾಗಿದ್ರೂ ಇನ್ನೂ ಸಚಿವ ಸುಧಾಕರ್ ಅವರ ಬಂಧನವಾಗಿಲ್ಲ.
ಸಚಿವ ಡಿ. ಸುಧಾಕರ್ ಅವರ ಈ ದೌರ್ಜನ್ಯ ಪ್ರಕರಣವನ್ನ ನ್ಯೂಸ್ ಫಸ್ಟ್ ಚಾನೆಲ್ ಮೊದಲು ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಡಿ. ಸುಧಾಕರ್ ಅವರು ನ್ಯೂಸ್ ಫಸ್ಟ್ ಚಾನೆಲ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನೇರಪ್ರಸಾರದಲ್ಲಿ ಮಾತನಾಡಿದ ಸಚಿವರು ಇದು ಎಷ್ಟೋ ವರ್ಷಗಳ ಹಿಂದಿನ ವಿಡಿಯೋ. ಇದು ಎಡಿಟೆಡ್ ವಿಡಿಯೋ ಎನ್ನುತ್ತಾ ಚರ್ಚೆಯ ಮಧ್ಯೆಯೇ ಉತ್ತರಿಸಲಾಗದೇ ಎದ್ದು ಹೋಗಿದ್ದಾರೆ.
ಇದನ್ನೂ ಓದಿ: ‘ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೇನೆ’- ನ್ಯಾಯ ಕೇಳಲು ಹೋದವರಿಗೆ ಸಚಿವ ಡಿ. ಸುಧಾಕರ್ ಧಮ್ಕಿ
ನ್ಯೂಸ್ ಫಸ್ಟ್ ಚಾನೆಲ್ ಸಚಿವ ಡಿ.ಸುಧಾಕರ್ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೋವನ್ನು ಪ್ರಸಾರ ಮಾಡಿದೆ. ಈ ವಿಡಿಯೋ ಬಗ್ಗೆ ಕೇಳಿದ್ದಕ್ಕೆ ಅವರು ನನ್ನ ವಿರುದ್ಧದ ಆರೋಪದಲ್ಲಿ ಸತ್ಯವಿಲ್ಲ. ನಾನು ಜೈನ ಧರ್ಮದಲ್ಲಿ ಹುಟ್ಟಿದ್ದೇನೆ. ಅಹಿಂಸಾ ತತ್ವದಲ್ಲಿ ನಡೆಯುವವನು ನಾನು. ಇದು ತಂತ್ರಜ್ಞಾನದ ಯುಗ, ಎಡಿಟೆಡ್ ವಿಡಿಯೋ. ನಾನು ಎಂದಿಗೂ ಅಹಿಂಸಾ ತತ್ವ ನಂಬಿದ್ದೇನೆ. ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ ಎನ್ನುತ್ತಾ ಧಮ್ಕಿ ಹಾಕಿದ ಆರೋಪಗಳನ್ನು ತಳ್ಳಿ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ