newsfirstkannada.com

ಅನ್ಯಕೋಮಿನ ವ್ಯಕ್ತಿ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಕೇಸ್​​; ಮೂವರು ಅರೆಸ್ಟ್​

Share :

22-08-2023

    ಅನ್ಯಕೋಮಿನ ವ್ಯಕ್ತಿ ಮೇಲೆ ತಲವಾರು ದಾಳಿಗೆ ಯತ್ನ

    ಕೇವಲ 24 ಗಂಟೆಯಲ್ಲಿ ಆರೋಪಿಗಳಿಗೆ ಪೊಲೀಸ್​ ಬಲೆ

    ಕೇಸ್​ ಸಂಬಂಧ ಮೂವರು ಅರೆಸ್ಟ್​, ತೀವ್ರ ವಿಚಾರಣೆ..!

ಮಂಗಳೂರು: ಅನ್ಯಕೋಮಿನ ವ್ಯಕ್ತಿ ಮೇಲೆ ತಲವಾರು ದಾಳಿಗೆ ಯತ್ನಿಸಿದ್ದ ಕೇಸ್​ ಸಂಬಂಧ ಮೂವರು ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್‌ ಬರ್ಮನ್‌ (24), ಅವಿನಾಶ್ (24) ಬಂಧಿತ ಆರೋಪಿಗಳು ಎಂದು ಕಾವೂರು ಪೋಲಿಸರು ತಿಳಿಸಿದ್ದಾರೆ.

ಏನಿದು ಘಟನೆ..?

ಇತ್ತೀಚೆಗೆ ಮಂಗಳೂರು ಹೊರವಲಯದ ಕಾವೂರು ಎಂ.ವಿ ಶೆಟ್ಟಿ ಕಾಲೇಜು ಬಳಿ ಅನ್ಯಕೋಮಿನ ವ್ಯಕ್ತಿ ಮೇಲೆ ತಂಡವೊಂದು ತಲವಾರು ದಾಳಿಗೆ ಯತ್ನಿಸಿತ್ತು. ಸ್ಕೂಟಿಯಲ್ಲಿ ಬಂದ ಕಿಡಿಗೇಡಿಗಳು ಅಡ್ಡಗಟ್ಟಿ ಅನ್ಯ ಕೋಮಿನ ವ್ಯಕ್ತಿ ಮೇಲೆ ತಲವಾರು ಬೀಸಿದ್ದರು. ಈ ವೇಳೆ ವ್ಯಕ್ತಿ ತಪ್ಪಿಸಿಕೊಂಡರೂ ಮುಖಕ್ಕೆ ಗಾಯವಾಗಿತ್ತು.

ಇನ್ನು, ಈ ಕೇಸ್​ ತನಿಖೆ ತೀವ್ರಗೊಳಿಸಿದ ಪೊಲೀಸರು ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕಾವೂರು ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ತಲವಾರು & ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅನ್ಯಕೋಮಿನ ವ್ಯಕ್ತಿ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಕೇಸ್​​; ಮೂವರು ಅರೆಸ್ಟ್​

https://newsfirstlive.com/wp-content/uploads/2023/08/Arrest.jpg

Load More