newsfirstkannada.com

ರೋಹಿತ್ ಗ್ಯಾಂಗ್ ಮುಂದೆ 3 ಮಹಾ ಸವಾಲು.. ಬೆರಳು ಕೊಟ್ರೆ ಅಂಗೈಯನ್ನೇ ನುಂಗ್ತಾರೆ ಇವರು..!

Share :

Published June 17, 2024 at 2:46pm

    ಜೂನ್​​ 19 ರಿಂದ ಸೂಪರ್​​​​-8 ದಂಗಲ್​

    ನಿರಾಯಾಸವಾಗಿ ಭಾರತ ಸೂಪರ್​​​-8ಗೆ ಎಂಟ್ರಿ

    ಸೂಪರ್​​​-8ನಲ್ಲಿ ಭಾರತಕ್ಕೆ ರಿಯಲ್ 'ಟೆಸ್ಟ್​​'

ಟೀಮ್ ಇಂಡಿಯಾ ನಿರಾಯಾಸವಾಗಿ ಸೂಪರ್​​​-8ಗೆ ಎಂಟ್ರಿಕೊಟ್ಟಿದೆ. ಆದ್ರೆ ಸೆಮಿಫೈನಲ್​ ಹಾದಿ ಅಂದುಕೊಂಡಷ್ಟು ಸುಲಭವಿಲ್ಲ. ಭಾರತಕ್ಕೆ ರಿಯಲ್ ಚಾಲೆಂಜ್​ ಇರೋದೇ ಮುಂದಿನ ಹಂತದಲ್ಲಿ. ವಿಭಿನ್ನವಾದ ಸವಾಲಿಗೆ ಸಜ್ಜಾಗಬೇಕಿದೆ. ಹಾಗಾದ್ರೆ ಮಾತ್ರ ಗ್ರೂಪ್​​​​​ ಸ್ಟ್ರೇಜ್​ನ ಜಬರ್ದಸ್ತ್​ ಪರ್ಫಾಮೆನ್ಸ್​​ ಸೂಪರ್​​​​​-8 ರಲ್ಲಿ ರಿಪೀಟ್ ಆಗೋಕೆ ಸಾಧ್ಯ. ಅಂದಹಾಗೇ ರೋಹಿತ್​ ಶರ್ಮಾ ಪಡೆ ಮುಂದಿರೋ ಚಾಲೆಂಜಸ್​ಗಳೇನು ?

ಸೂಪರ್​​​-8ನಲ್ಲಿ ಭಾರತಕ್ಕೆ ರಿಯಲ್ ಟೆಸ್ಟ್​
ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಗೆ ಸೂಪರ್​​​​​​-8 ಟಿಕೆಟ್​​ ಖಾತ್ರಿಯಾಗಿದೆ. ಗ್ರೂಪ್​ ಸ್ಟೇಜ್​​ನಲ್ಲಿ ಧೂಳೆಬ್ಬಿಸಿ ನಿರಾಯಾಸವಾಗಿ ಸೂಪರ್​​​​​-8ಗೆ ಪ್ರವೇಶಿಸಿದೆ. ಜೂನ್​​​ 19 ರಿಂದ ಮುಂದಿನ ಹಂತದ ಪಂದ್ಯಗಳು ಆರಂಭಗೊಳ್ಳಲಿದ್ದು, ಭಾರತಕ್ಕೆ ರಿಯಲ್ ಟೆಸ್ಟ್​ ಶುರುವಾಗಲಿದೆ. ರೋಹಿತ್​ ಶರ್ಮಾ ಅಂಡ್ ಗ್ಯಾಂಗ್​ ಇಲ್ಲಿ ಸ್ವಲ್ಪವು ಮೈ ಮರೆಯುವಂತಿಲ್ಲ. ಯಾಕಂದ್ರೆ ಸೂಪರ್​​​-8ನಲ್ಲಿ ವಿಶ್ವದ ಬಲಾಢ್ಯ ತಂಡಗಳನ್ನು ಎದುರಿಸಬೇಕಿದೆ. ಮೆನ್​ ಇನ್​ ಬ್ಲೂ ಪಡೆಗೆ ಸೂಪರ್​​​-8 ಹಂತದಲ್ಲಿ ಕಠಿಣಾತಿ ಕಠಿಣ ಸವಾಲುಗಳಿವೆ. ಒಂದೊಂದು ಸವಾಲು ಭಿನ್ನ-ವಿಭಿನ್ನ. ಇಂತಹ ಅಗ್ನಿಪರೀಕ್ಷೆಯ ಚಕ್ರವ್ಯೂಹ ಬೇಧಿಸಿದರಷ್ಟೇ ಟೀಮ್​​ ಇಂಡಿಯಾಗೆ ಸೆಮಿಫೈನಲ್​ ಬಾಗಿಲು ತೆರೆಯಲಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿಂದೆ ಓರ್ವ PSI ನೆರಳು..? ಏನಿದು ಶಾಕಿಂಗ್ ವಿಚಾರ..?

ಚಾಲೆಂಜ್​​ ನಂ.1:
ಟೀಮ್ ಇಂಡಿಯಾ ಜೂನ್​ 20 ರಂದು ನಡೆಯುವ ಸೂಪರ್​​​-8 ಮೊದಲ ಪಂದ್ಯದಲ್ಲೆ ಡೇಂಜರಸ್​ ಅಪ್ಘಾನಿಸ್ತಾನ ತಂಡವನ್ನ ಎದುರಿಸಲಿದೆ. ಹೇಳಿ ಕೇಳಿ ಅಪ್ಘನ್​​​​​​ ತಂಡದಲ್ಲಿ ಟಾಪ್​​​​ ಕ್ಲಾಸ್ ಸ್ಪಿನ್ನರ್​ಗಳಿದ್ದಾರೆ. ರಶೀದ್ ಖಾನ್ ಹಾಗೂ ನೂರ್​ ಅಹ್ಮದ್​​​ಗೆ ಬೆರಳು ಕೊಟ್ರೆ ಅಂಗೈಯನ್ನೆ ನುಂಗಬಲ್ಲರು. ಸಾಲದೆಂಬಂತೆ ಫರೂಕಿ ಅನ್ನೋ ಮ್ಯಾಚ್ ವಿನ್ನಿಂಗ್ ಬೌಲರ್ ಬೇರೆ. ಜೊತಗೆ ಬ್ಯಾಟಿಂಗ್​​​​​​​ ವಿಭಾಗ ಕೂಡ ಬಲಿಷ್ಠವಾಗಿದೆ. ಇಂತಹ ಸಮತೋಲನದ ತಂಡದೊಂದಿಗೆ ಸೆಣಸಾಡಲು ಭಾರತ ತಂಡ ಪಕ್ಕಾ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯುವ ಅಗತ್ಯವಿದೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ಚಾಲೆಂಜ್​​ ನಂ.2:
ಭಾರತಕ್ಕೆ ಸೂಪರ್​​​​​-8ನ ಎರಡನೇ ಬಿಗ್ ಚಾಲೆಂಜ್ ಅಂದ್ರೆ ಬಾಂಗ್ಲಾದೇಶ. ಬಾಂಗ್ಲಾ ಭಾರತದ ವಿರುದ್ಧ ಸುಲಭವಾಗಿ ಮಣಿಯುವ ತಂಡವಲ್ಲ. ಚಾನ್ಸ್ ಸಿಕ್ರೆ ಸೋಲಿನ ರುಚಿ ತೋರಿಸೋಕೆ ತಯಾರಿರುತ್ತೆ. ಇಂತಹ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್​ಗಳ ದಂಡಿದೆ. ತಸ್ಕಿನ್ ಅಹ್ಮದ್​​​, ಮುಸ್ತಫಿಜುರ್​ ರೆಹಮಾನ್​ರಂತ ವಿಶ್ವದರ್ಜೆಯ ವೇಗಿಗಳ ಬಲವಿದೆ. ಪಂದ್ಯದ ಗತಿಯನ್ನೆ ಬದಲಿಸುವ ಟಿ20 ಸ್ಪೆಷಲಿಸ್ಟ್​​​ಗಳಿದ್ದಾರೆ. ಸೋ ಭಾರತಕ್ಕೆ ಬಾಂಗ್ಲಾ ಸಂಹಾರವಂತೂ ಸುಲಭವಿಲ್ಲ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ಚಾಲೆಂಜ್​​ ನಂ.3
ಭಾರತ ತಂಡ ಸೂಪರ್​​​​​-8 ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನ ಎದುರಿಸಲಿದೆ. ಇಲ್ಲಿ ಟಫ್​​ ಫೈಟ್​​ ಇದ್ದೆ ಇದೆ. ಯಾಕಂದ್ರೆ ಸುಲಭವಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸಿಸ್​ ತಂಡದ್ದಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ವಿಶ್ವದರ್ಜೆಯ ಆಟಗಾರರಿದ್ದಾರೆ. ಮಿಚೆಲ್​​​ ಮಾರ್ಷ್​, ಕ್ಯಾಮರೂನ್ ಗ್ರೀನ್​​, ಗ್ಲೆನ್​​ ಮ್ಯಾಕ್ಸ್​​​ವೆಲ್ ಹಾಗೂ ಮಾರ್ಕಸ್​ ಸ್ಟೋಯ್ನಿಸ್​ರಂತ ಸ್ಟಾರ್​ ಆಲ್​ರೌಂಡರ್​ಗಳಿದ್ದಾರೆ. ಅಲ್ಲದೇ ವಿಧ್ವಂಸಕ ಬ್ಯಾಟರ್ಸ್​, ನಡುಕ ಹುಟ್ಟಿಸುವ ಫಾಸ್ಟ್ ಬೌಲರ್ಸ್​, ಖೆಡ್ಡಾಗೆ ಕೆಡವುವ ಸ್ಪಿನ್ನರ್ಸ್​ ತಂಡದಲ್ಲಿದ್ದಾರೆ. ಇಂತಹ ಬಲಾಢ್ಯ ತಂಡದೆದುರು ಭಾರತ ತಂಡ ಶಕ್ತಿಮೀರಿ ಹೋರಾಟ ನಡೆಸಬೇಕಿದೆ.

ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

ಒಟ್ಟಿನಲ್ಲಿ ಆರಂಭದಲ್ಲೇ ಹೇಳಿದಂತೆ ಟೀಮ್ ಇಂಡಿಯಾಗೆ ಸೂಪರ್​​​​​​-8 ನಲ್ಲಿ ಕಠಿಣ ಸವಾಲು ಇದೆ. ಈ ಮೂರು ಬಿಗ್​ ಚಾಲೆಂಜಸ್​ಗಳನ್ನ ರೋಹಿತ್​​​​​​​​​​ ಶರ್ಮಾ ಪಡೆ ಹೇಗೆ ಮೆಟ್ಟಿ ನಿಲ್ಲುತ್ತೆ? ಗ್ರೂಪ್​​ ಸ್ಟೇಜ್​ನಂತೆ, ಸೂಪರ್​​​​-8 ನಲ್ಲೂ ಚಿಂದಿ ಪರ್ಫಾಮೆನ್ಸ್​ ನೀಡುತ್ತಾ? ಕಾದು ನೋಡಬೇಕು.

ಇದನ್ನೂ ಓದಿ:ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್​​ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್ ಗ್ಯಾಂಗ್ ಮುಂದೆ 3 ಮಹಾ ಸವಾಲು.. ಬೆರಳು ಕೊಟ್ರೆ ಅಂಗೈಯನ್ನೇ ನುಂಗ್ತಾರೆ ಇವರು..!

https://newsfirstlive.com/wp-content/uploads/2024/06/ROHIT_SHARMA_KOHLI.jpg

Load More