ಲಿಂಗಾಯತ, ಎಸ್ಸಿ-ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಥಾನ ಕಲ್ಪಿಸಿ!
ಡಿಕೆ ಶಿವಕುಮಾರ್ ಹೊತ್ತ ನಂಬರ್ 2 ಬ್ಯಾಡ್ಜ್ ಮೇಲೆ ಹಲವು ನಾಯಕರು ಕಣ್ಣು
ಬಹಳಷ್ಟು ಜನಕ್ಕೆ ಡಿಸಿಎಂ ಅಲ್ಲ, ಸಿಎಂ ಆಗುವ ಅರ್ಹತೆ ಇದೆ- ಪ್ರಿಯಾಂಕ್ ಖರ್ಗೆ!
ರಾಜ್ಯ ರಾಜಕೀಯದಲ್ಲಿ ಡಿಸಿಎಂ ಸ್ಥಾನಕ್ಕಾಗಿ ಸಂಘರ್ಷವೊಂದು ಜನ್ಮ ತಾಳಿದೆ. ಡಿ.ಕೆ.ಶಿವಕುಮಾರ್ ಜೊತೆ ಮತ್ತೆ 3 ಡಿಸಿಎಂ ಸ್ಥಾನಕ್ಕೆ ಸಚಿವರು ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ಗೆ ಪತ್ರ ಬರೆಯಲು ಸಚಿವ ಕೆ.ಎನ್. ರಾಜಣ್ಣ ಮುಂದಾಗಿದ್ದು, ಸಂಚಲನ ಸೃಷ್ಟಿಸಿದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ನಲ್ಲಿ ಅಂತರ್ ಕಲಹ ಸೃಷ್ಟಿಯಾಗಿದೆ. ಡಿಕೆ ಶಿವಕುಮಾರ್ ಹೊತ್ತ ನಂಬರ್ 2 ಬ್ಯಾಡ್ಜ್ ಮೇಲೆ ಹಲವು ನಾಯಕರು ಕಣ್ಣು ನೆಟ್ಟಿದ್ದಾರೆ. ಸರ್ಕಾರ ರಚನೆಯ ಕಸರತ್ತಿನ ವೇಳೆ ಕತ್ತೆತ್ತಿ ನಡೆದ ಜಗಳದ ಬಳಿಕ ಎಲ್ಲವೂ ಶಾಂತವಾಗಿದೆ ಅನ್ನೋಷ್ಟರಲ್ಲಿ ವಿರಸಕ್ಕೆ ನಾಂದಿ ಹಾಡಲಾಗಿದೆ. ಈ ಸಮರಸದ ನಡುವೆ ಡಿಸಿಎಂ ಪಟ್ಟಕ್ಕಾಗಿ ಸಚಿವ ಕೆ.ಎನ್ ರಾಜಣ್ಣ ಸಿಡಿಸಿದ ಅದೊಂದು ಬಾಂಬ್.
ಡಿಕೆ ಶಿವಕುಮಾರ್ ಜತೆ ಇನ್ನೂ ಮೂವರಿಗೆ ಡಿಸಿಎಂ ಸ್ಥಾನ ನೀಡಿ
ಲೋಕಸಭೆ ನೆಪದಲ್ಲಿ ಹೈಕಮಾಂಡ್ಗೆ ಪತ್ರ ಬರೆಯಲು ತಯಾರಿ!
ಸಿಎಂ ಸಿದ್ದರಾಮಯ್ಯರನ್ನೇ ಓವರ್ರೈಟ್ ಮಾಡುತ್ತಿರುವ ಡಿಸಿಎಂ ಡಿಕೆಶಿಗೆ ಹೊಸ ಚಳುವಳಿ, ತಳಮಳ ಸೃಷ್ಟಿಸ್ತಿದೆ. ಡಿ.ಕೆ. ಶಿವಕುಮಾರ್ ಜೊತೆ ಮತ್ತೆ ಮೂವರು ನಾಯಕರಿಗೆ ಡಿಸಿಎಂ ಸ್ಥಾನ ನೀಡುವಂತೆ ಬೇಡಿಕೆ ಮಂಡನೆ ಆಗಿದೆ. ಸಹಕಾರ ಕ್ಷೇತ್ರದ ಪ್ರಬಲ ನಾಯಕ, ಸಿಎಂ ಆಪ್ತ ಬಣದ ಸಚಿವ ಕೆ.ಎನ್ ರಾಜಣ್ಣ, ಈ ಬಗ್ಗೆ ಹೈಕಮಾಂಡ್ಗೆ ಪತ್ರ ಬರೆಯಲು ಮುಂದಾಗಿರೋದು ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ್ದಾರೆ. ಇನ್ನೂ ಮೂರು ಡಿಸಿಎಂ ಸ್ಥಾನಗಳ ಸೃಷ್ಟಿಗೆ ಸಚಿವರು ಆಗ್ರಹಿಸ್ತಿದ್ದಾರೆ. ವೀರಶೈವ ಲಿಂಗಾಯತ, ಎಸ್ಸಿ-ಎಸ್ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಥಾನ ಕಲ್ಪಿಸಿ ಅಂತ ಬೇಡಿಕೆ ಮಂಡಿಸಿದ್ದಾರೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಡಿಸಿಎಂ ಸ್ಥಾನ ನೀಡಿ ಎನ್ನುತ್ತಿರುವ ಸಚಿವರು, ಲೋಕಸಭೆ ಎಲೆಕ್ಷನ್ನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಇದು ಅನುಕೂಲ ಅಂತ ವಾದಿಸಿದ್ದಾರೆ. ಇದಕ್ಕೆ ಕಳೆದ ವಿಧಾನಸಭೆ ಚುನಾವಣೆಯನ್ನ ಎಕ್ಸಾಂಪಲ್ ನೀಡಿರುವ ಸಚಿವರು, ಜಾತಿ ಸಮೀಕರಣದಿಂದಲೇ ಕಾಂಗ್ರೆಸ್ ಜಯಭೇರಿ ಬಾರಿಸಿದೆ ಅಂತ ಹೇಳುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ಗೆ ಕೆ.ಎನ್. ರಾಜಣ್ಣ ಪತ್ರ ಬರೆಯಲು ಮುಂದಾಗಿದ್ದಾರೆ. ಡಿಸಿಎಂ ಸ್ಥಾನದ ಬಗ್ಗೆ ತಗಾದೆ ಎತ್ತಿದ್ದು ಇದೇ ಮೊದಲಲ್ಲ. ಕಳೆದ ಎರಡು ತಿಂಗಳ ಹಿಂದೆ ಗೃಹ ಸಚಿವ ಪರಮೇಶ್ವರ್ ಕೂಡ ಈ ಸ್ಥಾನದ ಬಗ್ಗೆ ಪರೋಕ್ಷವಾಗಿ ಬೇಡಿಕೆ ಮಂಡಿಸಿದ್ದರು. ಪರಮೇಶ್ವರ್ ಮಾತಿಗೆ ಸಚಿವ ಎಂ.ಬಿ. ಪಾಟೀಲ್ ಸಹ ದನಿಗೂಡಿಸಿದ್ದರು. ಮೊನ್ನೆ ಮೊನ್ನೆಯಷ್ಟೇ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಇದೇ ರೀತಿ ಒತ್ತಾಯ ಮಾಡಿದ್ದರು.
ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ ರಾಜಣ್ಣ ನಡೆ!
ಮುನಿಯಪ್ಪ ಸಪೋರ್ಟ್, ಸುರೇಶ್ ಸೈಲೆಂಟ್, ಖರ್ಗೆ ಗರಂ
ಮೂರು ಡಿಸಿಎಂ ಹುದ್ದೆ ಬಗ್ಗೆ ರಾಜಣ್ಣ ನೀಡಿದ ಹೇಳಿಕೆ ಬಗ್ಗೆ ಅವರೇ ಉತ್ತರ ನೀಡಬೇಕು ಅಂತ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಸಚಿವ ರಾಜಣ್ಣ ಸರ್ಕಾರ ನಡೆಸ್ತಿರೋದು ಕಾಲೆಳೆದರೇ ಸಚಿವ ಪ್ರಿಯಾಂಕ್ ಖರ್ಗೆ ವರ್ಷನ್ ಬೇರೆ ಇದೆ. ಹೈಕಮಾಂಡ್ ಮುಂದೆ ಡಿಸಿಎಂ ಪ್ರಸ್ತಾವನೆ ಇಲ್ಲ. ಬಹಳಷ್ಟು ಜನಕ್ಕೆ ಡಿಸಿಎಂ ಅಲ್ಲ, ಸಿಎಂ ಆಗುವ ಅರ್ಹತೆ ಇದೆ ಅಂತ ಗರಂ ಆಗಿದ್ದಾರೆ. ಇತ್ತ ಮುನಿಯಪ್ಪ ಇದು ಹೈಕಮಾಂಡ್ ತೀರ್ಮಾನ ಅಂತ ಹೇಳಿದ್ದಾರೆ. ಒಟ್ಟಾರೆ, ಬಿಕೆಹೆಚ್ ಮೂಲಕ ಉರುಳಿಸಿದ ತೆರೆಮರೆಯ ದಾಳ ಈಗ ತಿರುಗುಬಾಣ ಆಗುವ ಲಕ್ಷಣ ಗೋಚರಿಸ್ತಿದೆ. ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲೂ ಸಿದ್ಧಾಸ್ತ್ರ ಪ್ರಯೋಗ ಆಗಿತ್ತು. ಈಗ ಅದೇ ಪ್ರಯೋಗ ಸರ್ಕಾರದ ನಂಬರ್ 2 ಸ್ಥಾನದ ಮೇಲೆ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ