newsfirstkannada.com

×

ಬದುವಿಗೆ ಬೆಂಕಿ ಇಟ್ಟಿದ್ದಕ್ಕೆ ರೈತನನ್ನೇ ಬೆಂಕಿಗೆಸೆದ ಸಹೋದರರು; ಮುಂದೇನಾಯ್ತು?

Share :

Published August 16, 2023 at 8:13am

Update August 16, 2023 at 8:20am

    ಜಮೀನುಗಳ ಮಧ್ಯದ ಬದುವಿಗೆ ಬೆಂಕಿ ಹಚ್ಚಿದ್ದ ರೈತ

    ರೈತನನ್ನು ಬೆಂಕಿಗೆ ಎಸೆದ ಇಬ್ಬರು ಸಹೋದರರು

    ಚಿತ್ರದುರ್ಗದ ಸೊಂಡೇಕೊಳ ಗ್ರಾಮದಲ್ಲಿ ನಡೆದ ಘಟನೆ

ಚಿತ್ರದುರ್ಗ: ಜಮೀನು ಬದುವಿಗೆ ಬೆಂಕಿ ಇಟ್ಟಿದ್ದನ್ನ ಪ್ರಶ್ನಿಸಿದ ಹಿನ್ನೆಲೆ ವ್ಯಕ್ತಿಯನ್ನೇ ಬೆಂಕಿಗೆ ಎತ್ತಿ ಬಿಸಾಕಿದ ಘಟನೆ  ಚಿತ್ರದುರ್ಗ ತಾಲೂಕಿ ಸೊಂಡೇಕೊಳ ಗ್ರಾಮದಲ್ಲಿ ನಡೆದಿದೆ. ದುರುಳರ ಕ್ರೌರ್ಯಕ್ಕೆ ಬೆಂಕಿಗೆ ಬಿದ್ದ ರೈತ ಶಿವಕುಮಾರ್(56) ಸುಟ್ಟು ಗಾಯಗೊಂಡಿದ್ದಾರೆ.

ಶಿವಕುಮಾರ್ ಜಮೀನು ಪಕ್ಕದಲ್ಲೇ ನಿಜಲಿಂಗಪ್ಪ, ಗೋಪಾಲಪ್ಪ ಎಂಬವರ ಜಮೀನು ಇದೆ. ಇಬ್ಬರ ಜಮೀನುಗಳ ಮಧ್ಯದ ಬದುವಿಗೆ ರೈತ ಶಿವಕುಮಾರ್ ಬೆಂಕಿ ಹಾಕಿದ್ದರು. ಅದರೆ ಇದೇ ವಿಚಾರಕ್ಕೆ ನಿಜಲಿಂಗಪ್ಪ, ಗೋಪಾಲಪ್ಪ ಸಹೋದರರು ಬೆಂಕಿಗೆ ಬೆಂಕಿಗೆ ಎಸೆದಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

ಈ ಹಿಂದೆ ಗೋಪಾಲಪ್ಪ, ನಿಜಲಿಂಗಪ್ಪ ಸಹೋದರರು ಬದುವಿಗೆ ಬೆಂಕಿ ಇಟ್ಟಿದ್ದರು. ಈ ವೇಳೆ ಶಿವಕುಮಾರ್​​ಗೆ ಸೇರಿದ್ದ ಅಡಿಕೆ ಹಾಗೂ ತೆಂಗಿನ‌ ಮರ ನಾಶವಾಗಿತ್ತು. ಸದ್ಯ ಬೆಂಕಿಯ ಕೆನ್ನಾಲಿಗೆಗೆ ರೈತ ಶಿವಕುಮಾರ್ ಮೈ-ಕೈ ಎಲ್ಲಾ ಸುಟ್ಟುಕೊಂಡಿದೆ. ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬದುವಿಗೆ ಬೆಂಕಿ ಇಟ್ಟಿದ್ದಕ್ಕೆ ರೈತನನ್ನೇ ಬೆಂಕಿಗೆಸೆದ ಸಹೋದರರು; ಮುಂದೇನಾಯ್ತು?

https://newsfirstlive.com/wp-content/uploads/2023/08/Fire.jpg

Load More