ಒಬ್ಬ ತಹಶೀಲ್ದಾರ್ ಅಜಿತ್ ರೈ ಬಳಿ ಅಗಣಿತ ಸಂಪತ್ತು
ಸಿಕ್ಕ ಸಂಪತ್ತಿಗೆ ದಾಖಲೆ ನೀಡದ ತಹಶೀಲ್ದಾರ್ ಅಜಿತ್ ರೈ
ಲಕ್ಷ ಲಕ್ಷ ಹಣ, ಚಿನ್ನಾಭರಣ, ಕೋಟಿ ಮೌಲ್ಯದ ವಸ್ತು ಪತ್ತೆ
ಬೆಂಗಳೂರು: ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 11 ಕಡೆ ದಾಳಿ ನಡೆಸಿದ್ದರು. ಈಗಲೂ ಕೆಲವೆಡೆ ಪರಿಶೀಲನೆ ಮುಂದುವರಿದಿದೆ. 30 ಗಂಟೆ 15ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಒಬ್ಬ ಆಫೀಸರ್ ಮೇಲೆ ದಾಳಿ ಮಾಡಿ ತನಿಖೆ ನಡೆಸಿದರು. ಈ ವೇಳೆ ಲಕ್ಷ ಲಕ್ಷ ಹಣ, ಕೋಟಿ ಕೋಟಿ ಬೆಲೆ ಬಾಳೋ ಆಸ್ತಿ ಸಿಕ್ಕಿದೆ. ಬೆಂಗಳೂರಿನಲ್ಲಿ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತಾ ದಾಳಿಯಲ್ಲಿ ಪತ್ತೆಯಾದ ಸಂಪತ್ತು ಪ್ರತಿಯೊಬ್ಬರನ್ನೂ ನಿಬ್ಬೆರಗುಗೊಳಿಸುವಂತಿದೆ.
ಅಜಿತ್ ರೈ. ಹುದ್ದೆಯಲ್ಲಿ ತಹಶೀಲ್ದಾರ್. ಅಕ್ರಮ ಆಸ್ತಿ, ಆದಾಯಕ್ಕಿಂತ ಹೆಚ್ಚು ಗಳಿಕೆ ಹೊಂದಿದ್ದಾರೆ ಅನ್ನೋ ಆರೋಪ ಹೊತ್ತಿರೋ ಈ ಅಧಿಕಾರಿ ಮನೆಗೆ ಬೆಳಗ್ಗೆ 4.30ಕ್ಕೆ ಬಂದ ಲೋಕಾಯುಕ್ತ ಅಧಿಕಾರಿಗಳು ಬರೋಬ್ಬರಿ 30 ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಕೊನೆಗೆ ಅಜಿತ್ ರೈ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
ರಾಜ್ಯದ ಹಲವೆಡೆ ತಹಶೀಲ್ದಾರ್ ಅಜಿತ್ ರೈ ಮನೆಗಳು ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ನಿರಂತರ ಪರಿಶೀಲನೆ ಬಳಿಕ ಅರೆಸ್ಟ್ ಮಾಡಿದ್ದಾರೆ. ತನಿಖೆಗೆ ಸರಿಯಾಗಿ ಸ್ಪಂದಿಸದೇ, ಮನೆಯಲ್ಲಿ ಸಿಕ್ಕ ದಾಖಲೆಗಳಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ನೀಡದೇ ಇದ್ದುದರಿಂದ ಬಂಧನ ಮಾಡಲಾಗಿದೆ.
ಅಜಿತ್ ಮನೆಯಲ್ಲಿ ಸಿಕ್ಕಿದ್ದೇನು?
ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಅಜಿತ್ ರೈ ಮನೆಯಲ್ಲಿ ದೊಡ್ಡಬಳ್ಳಾಪುರದ ಕಲ್ಲೂರು ಸಮೀಪವಿರುವ 98 ಎಕರೆ ಭೂಮಿಯ ದಾಖಲೆ ಪತ್ರಗಳು ಲಭ್ಯವಾಗಿದ್ಯಂತೆ. ಈ ಜಾಗ ಬರೋಬ್ಬರಿ 300 ಕೋಟಿ ಬೆಲೆ ಬಾಳಲಿದ್ದು, ಇಲ್ಲಿ ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ಅಜಿತ್ ಯೋಜನೆ ರೂಪಿಸಿದ್ರು ಎನ್ನಲಾಗ್ತಿದೆ. ವರ್ಷಕ್ಕೆ ಒಂದು ಕೋಟಿಗೂ ಅಧಿಕ ಇನ್ ಕಂ ಹೊಂದಿರುವ ಅಜಿತ್ ರೈ ಇಷ್ಟೆಲ್ಲಾ ಆಸ್ತಿ ಮಾಡಿದ್ದು ಹೇಗೆ ಅನ್ನೋದು ಸದ್ಯ ಅಧಿಕಾರಿಗಳ ಪ್ರಶ್ನೆ.
ಆದಾಯದ ಜೊತೆಗೆ ಪತ್ತೆಯಾದ ವಸ್ತುಗಳ ಲೆಕ್ಕ ಹಾಕ್ತಿದ್ರೆ ಯಾವುದಕ್ಕೂ ಟ್ಯಾಲಿ ಆಗ್ತಾನೇ ಇಲ್ಲ. ಇತ್ತ ಅಜಿತ್ ಹೆಸರಿನ ಮೂರು ಬ್ಯಾಂಕ್ ಅಕೌಂಟ್ಗಳನ್ನ ಫ್ರೀಜ್ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇನ್ನೂ ಈ ದಾಳಿ ಬಗ್ಗೆ ಪ್ರತಿಕ್ರಿಸಿರೋ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಇದು 4 ವರ್ಷದ 40 ಪರ್ಸೆಂಟ್ನಿಂದ ಆಗಿರಬಹುದು ಎಂದು ಬಿಜೆಪಿಯನ್ನ ಟೀಕಿಸಿದ್ದಾರೆ.
ಅದೇನೇ ಇರಲಿ ಸಾಮಾನ್ಯವಾಗಿ ರೇಡ್ ಮುಗಿದ ನಂತರ ನೋಟಿಸ್ ನೀಡಿ ವಿಚಾರಣೆ ಕರೆಯುವ ಲೋಕಾಯುಕ್ತ ಅಧಿಕಾರಿಗಳು. ಅಜಿತ್ನನ್ನ ಸ್ಪಾಟ್ನಲ್ಲೇ ಅರೆಸ್ಟ್ ಮಾಡಿಕೊಂಡು ಕರೆದೊಯ್ದಿದ್ದಾರೆ ಅಂದ್ರೆ ಈತನ ಅಕ್ರಮ ಆಸ್ತಿ ಅದೆಷ್ಟಿರಬಹುದು ಅಲ್ಲವೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ