ವೀಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಯ್ತಾ ಅಂತರಪಟ ಸೀರಿಯಲ್
ಇನ್ನೂ 3 ದಿನಗಳಲ್ಲಿ ಬರಲಿದೆ ಬಿಗ್ ರಿಯಾಲಿಟಿ ಶೊ ಬಿಗ್ಬಾಸ್
ಇಷ್ಟು ಬೇಗ ಗುಡ್ ಬೈ ಹೇಳಲು ಸಜ್ಜಾಯ್ತಾ ಈ ಧಾರಾವಾಹಿಗಳು?
ಇನ್ನೂ 3 ದಿನಗಳಲ್ಲಿ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಆಗಮನವಾಗಲಿದೆ. ಹೀಗಾಗಿ ಕಲರ್ಸ್ ಕನ್ನಡದ ಟಾಪ್ 3 ಧಾರಾವಾಹಿಗಳ ಕೊನೆ ದಿನದ ಶೂಟಿಂಗ್ ನಡೆಯುತ್ತಿವೆ. ಅದರಲ್ಲೂ ಅಂತರಪಟ ಧಾರಾವಾಹಿ ಮುಕ್ತಾಯವಾಗ್ತಿದೆ. ಒಂದುವರೆ ವರ್ಷದ ಜರ್ನಿಗೆ ವಿದಾಯ ಹೇಳ್ತಿದೆ ಸೀರಿಯಲ್ ತಂಡ. ಈಗಾಗಲೇ ಅಂತರಪಟ ಸೀರಿಯಲ್ ಶೂಟಿಂಗ್ ಮುಕ್ತಾಯವಾಗಿದ್ದು, ಈ ವಾರ ಕೊನೆ ಸಂಚಿಕೆ ಪ್ರಸಾರವಾಗಲಿದೆ.
ಇದನ್ನೂ ಓದಿ: BIGG BOSS 11 ಶುರುವಾಗಲು ದಿನಗಣನೆ.. ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ ಆ ಹೇಳಿಕೆ!
ಆರಾಧನಾ ಪಾತ್ರ ಮಾಡ್ತಿರೋ ನಟಿ ತನ್ವಿ ಬಾಲರಾಜ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸುಂದರವಾದ ನೆನಪುಗಳನ್ನ ಕಟ್ಟಿಕೊಟ್ಟಿದ್ದಕ್ಕೆ ಸಹ ಕಲಾವಿದರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ ಅಂತರಪಟ ಮುಕ್ತಾಯಕ್ಕೆ ಕಾರಣ ಬಿಗ್ಬಾಸ್ ಸೀಸನ್ 11.
ಇದೇ ಸೆಪ್ಟಂಬರ್ 29ರಿಂದ ಬಿಗ್ಬಾಸ್ ಸೀಸನ್ 11 ಶುರುವಾಗ್ತಿದೆ. ಹೀಗಾಗಿ ರೇಟಿಂಗ್ ಕಡಿಮೆ ಇರೋ ಧಾರಾವಾಹಿಗಳನ್ನ ಮುಕ್ತಾಯ ಮಾಡಲಾಗ್ತಿದೆ. ಈ ಲಿಸ್ಟ್ನಲ್ಲಿ ನನ್ನ ದೇವ್ರು, ಕೆಂಡಸಂಪಿಗೆ ಕೂಡ ಸೇರಿಕೊಂಡಿವೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸ್ವಪ್ನಾ ಕೃಷ್ಣ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸತ್ಯ ಹಾಗೂ ಅಂತರಪಟ ಎರಡು ಸೀರಿಯಲ್ ಮುಕ್ತಾಯವಾಗಿದ್ದು, ಮುಂದಿನ ಪ್ರಾಜೆಕ್ಟ್ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇದೆ.
ಈ ವಾರ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ಇದ್ದು, ಇನ್ನೇರಡು ಸೀರಿಯಲ್ ಮುಕ್ತಾಯವಾಗೋದಿದೆ. ಬಿಗ್ಬಾಸ್ ಹಿನ್ನೆಲೆಯಲ್ಲಿ ಇನ್ನು ಏನೇನೆಲ್ಲಾ ಬದಲಾವಣೆ ಆಗಲಿದೆ ಅಂತ ಕಾದು ನೋಡಬೇಕಿದೆ. ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ಬಿಗ್ಬಾಸ್ಗೆ ಯಾರೆಲ್ಲಾ ಹೋಗಬಹುದು ಅನ್ನೋ ಸ್ಟಾರ್ ನಟ, ನಟಿಯರ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನೂ ಕೆಲವೇ 3 ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ