ಮೂವರ ಸ್ಥಿತಿ ಗಂಭೀರ.. ಇನ್ನೂ 5 ದಿನ ಅಬ್ಸರ್ವೇಷನ್
ಅಗ್ನಿ ಅವಘಡದ ಬಗ್ಗೆ ಚೀಫ್ ಇಂಜಿನಿಯರ್ ಏನಂದ್ರು?
ಹಲವು ಅನುಮಾನಗಳಿಗೆ ಕಾರಣವಾಗಿದೆ ಅಗ್ನಿ ಅವಘಡ
ರಾಜ್ಯರಾಜಧಾನಿಯ ಬಿಬಿಎಂಪಿ ಕಚೇರಿಯಲ್ಲಿ ಧಗಧಗಿಸಿದ್ದ ಬೆಂಕಿಯ ಜ್ವಾಲೆ 9 ಜನರನ್ನ ನರಳಾಡುವಂತೆ ಮಾಡಿದೆ. ಈ ಪೈಕಿ ಮೂರು ಜನರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಮೂವರನ್ನ ಬಂಧಿಸಿರೋ ಪೊಲೀಸರು ಅಗ್ನಿಯ ಅಸಲಿ ಸತ್ಯವನ್ನ ಕೆದಕಲು ಮುಂದಾಗಿದ್ದಾರೆ.
‘ಅಗ್ನಿ ಅವಘಡಕ್ಕೆ ನಿರ್ಲ್ಯಕ್ಷವೇ ಕಾರಣ’
ಬಿಬಿಎಂಪಿಯ ಅಗ್ನಿ ಅವಘಡದ ಬಗ್ಗೆ ಮಾತನಾಡಿದ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್, ಘಟನೆಗೆ ನೌಕರರ ನಿರ್ಲಕ್ಷ್ಯವೇ ಪ್ರಮುಖ ಕಾರಣ ಅಂತ ತಿಳಿಸಿದ್ದಾರೆ. ಬೆಂಕಿ ದುರಂತದಲ್ಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಗಾಯಾಳುಗಳ ಸ್ಥಿತಿ ಗಭೀರವಾಗಿದೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಾದ ರಮೇಶ್ ಕೃಷ್ಣ ಮಾಹಿತಿ ನೀಡಿ ಯಾರ ಸ್ಥಿತಿಯೂ ಸದ್ಯಕ್ಕೆ ಡೇಂಜರ್ ಇಲ್ಲಾ ಅನ್ನೋ ಭರವಸೆ ನೀಡಿದ್ದಾರೆ.
ಅಗ್ನಿ ಪ್ರಕರಣ ಸಂಬಂಧ ಮೂವರು ಅರೆಸ್ಟ್
ಬಿಬಿಎಂಪಿ ಅಗ್ನಿ ದುರಂತಕ್ಕೆ ಸಂಬಂಧ ಪಟ್ಟಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣದಾಖಲಾಗಿತ್ತು. ಕಾರ್ಯ ಪಾಲಕ ಇಂಜಿನಿಯರ್ ಆನಂದ್, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಸ್ವಾಮಿ ಹಾಗೂ ಸಿಬ್ಬಂದಿ ಸುರೇಶ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ರು.. ಕರ್ತವ್ಯ ನಿರ್ವಹಣೆ ವೇಳೆ ನಿರ್ಲಕ್ಷ್ಯ ತೋರಿದ ಆರೋಪದಡಿ ಸದ್ಯ ಈ ಮೂವರನ್ನ ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಒಟ್ನಲ್ಲಿ ಬಿಬಿಎಂಪಿ ಅಗ್ನಿ ದುರಂತ ನೌಕರರ ನರಳಾಟದ ಜೊತೆ ಹಲವು ಅನುಮಾನಗಳಿಗೂ ಕಾರಣವಾಗಿದೆ.. ಸದ್ಯ ಪೊಲೀಸರು ಬಂಧಿಸಿರೋ ಮೂವರಿಂದ ಘಟನೆಗೆ ಅಸಲಿ ಕಾರಣ ಏನು ಅನ್ನೋ ಸತ್ಯ ಹೊರಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ