newsfirstkannada.com

ಗಡಿಯಲ್ಲಿ ಪಾಕ್‌ ಉಗ್ರರ ಅಟ್ಟಹಾಸ; ಮೂವರು ಯೋಧರ ವೀರ ಮರಣದ ಬೆನ್ನಲ್ಲೇ ಮತ್ತೊಬ್ಬ ಸೈನಿಕ ನಾಪತ್ತೆ

Share :

15-09-2023

    ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವುದು ಏನು..?

    ಕಳೆದ 3 ದಿನಗಳಿಂದ ಉಗ್ರರನ್ನು ಬೇಟಿಯಾಡುತ್ತಿರುವ ಯೋಧರು

    ದಟ್ಟಾರಣ್ಯ, ಗನ್ ಸೌಂಡ್​, ಪೊಲೀಸರು, ಯೋಧರಿಂದ ಬೇಟೆ.!

ಶ್ರೀನಗರ: ಕಾಶ್ಮೀರದ ಅನಂತನಾಗ್‌ನಲ್ಲಿ ಪಾಕ್‌ ಭಯೋತ್ಪಾದಕರ ವಿರುದ್ಧ ಎನ್​ಕೌಂಟರ್ ಕಾರ್ಯಾಚರಣೆ ನಡೀತಿದೆ. ಗುಂಡಿನ ಕಾಳಗದಲ್ಲಿ ಸೆಪ್ಟೆಂಬರ್ 13ರಂದು ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಇಂದು ಮತ್ತೆ ಓರ್ವ ಸೈನಿಕ ನಾಪತ್ತೆಯಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಾಯೋ ಮುನ್ನ ಮನೆಯವರ ಕಾಲ್ ಕಟ್ ಮಾಡಿ ಬ್ಯುಸಿ ಎಂದಿದ್ದ ಕರ್ನಲ್; ಮನ್ಪ್ರೀತ್ ಸಿಂಗ್ ಮನೆಯಲ್ಲಿ ಆಕ್ರಂದನ

ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ಪಂಜಾಬ್​ನ ಮೊಹಾಲಿಯ ಕರ್ನಲ್ ಮನ್‌ಪ್ರೀತ್ ಸಿಂಗ್, ಹರಿಯಾಣದ ಮೇಜರ್ ಆಶಿಶ್ ಧೋಂಚಕ್ ಮತ್ತು ಕಾಶ್ಮೀರದ ಡಿಎಸ್​ಪಿ​ ಹಿಮನ್ಯುನ್ ಮುಜಾಮಿಲ್ ಭಟ್ ಅವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಯೋಧರು ಆಗಿದ್ದು ಇನ್ನೊಬ್ಬರು ಜಮ್ಮುಕಾಶ್ಮೀರದ ಪೊಲೀಸ್ ಆಫೀಸರ್ ಆಗಿದ್ದಾರೆ. ಇಂದು ಯೋಧರೊಬ್ಬರು ನಾಪತ್ತೆಯಾಗಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದಿದೆ. ಇನ್ನು ಮೊನ್ನೆ ಸೇನೆಯ ಹೆಣ್ಣು ಶ್ವಾನ ಸಹ ಉಗ್ರರ ದಾಳಿಯಿಂದ ಸಾವನ್ನಪ್ಪಿತ್ತು.

ಸೆಪ್ಟೆಂಬರ್ 12 ರಿಂದ ಅನಂತನಾಗ್ ಮತ್ತು ರಾಜೌರಿ ವ್ಯಾಪ್ತಿಯಲ್ಲಿ ಬರುವ ಕೋಕರ್ನಾಗ್ ಎನ್ನುವ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೈನಿಕರು ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ಉಗ್ರರನ್ನು ಬೇಟೆಯಾಡುತ್ತಿದ್ದಾರೆ. ಗರೋಲ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು ಸದ್ಯ ಕೋಕರ್ನಾಗ್ ದಟ್ಟ ಅರಣ್ಯದಲ್ಲಿ ಉಗ್ರರ ಮೇಲೆ ಫೈರಿಂಗ್ ನಡೆಸಲಾಗುತ್ತಿದೆ. ನ್ಯೂ ಜನರೇಶನ್​ನ ಹೆರಾನ್ ಡ್ರೋನ್‌ ಸೇರಿದಂತೆ, ವೆಪನ್ಸ್​ಗಳನ್ನ ಈ ಎನ್​ಕೌಂಟರ್​ನಲ್ಲಿ ಬಳಸಲಾಗುತ್ತಿದ್ದು ದಾಳಿಯಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಡಿಯಲ್ಲಿ ಪಾಕ್‌ ಉಗ್ರರ ಅಟ್ಟಹಾಸ; ಮೂವರು ಯೋಧರ ವೀರ ಮರಣದ ಬೆನ್ನಲ್ಲೇ ಮತ್ತೊಬ್ಬ ಸೈನಿಕ ನಾಪತ್ತೆ

https://newsfirstlive.com/wp-content/uploads/2023/09/JAMMU_KASHMIR_Soldier.jpg

Load More