newsfirstkannada.com

×

ಗಣೇಶ ವಿಸರ್ಜನೆ ವೇಳೆ ಅವಘಡ; ತಂದೆ, ಮಗ ಸೇರಿ ಮೂವರು ಸಾವು

Share :

Published September 15, 2024 at 6:30pm

    ಗ್ರಾಮದಲ್ಲಿ ಗಣೇಶ ಉತ್ಸವ ಸಂಭ್ರಮದಿಂದ ನೆರವೇರಿತ್ತು

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಂದ ಪರಿಶೀಲನೆ

    ಗಣೇಶ ವಿಗ್ರಹ ವಿಸರ್ಜನೆ ಮಾಡುವಾಗ ನಡೆದ ದುರ್ಘಟನೆ

ತುಮಕೂರು: ಗಣೇಶನ ವಿಸರ್ಜನೆ ಮಾಡುವಾಗ ನೀರಿನಲ್ಲಿ ಮುಳುಗಿ ತಂದೆ, ಮಗ ಹಾಗೂ ಓರ್ವ ಯುವಕ ಸಾವನ್ನಪ್ಪಿದ್ದಾರೆ. ಈ ಘಟನೆ ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ.

ಗ್ರಾಮದ ರೇವಣ್ಣ (ತಂದೆ), ಇವರ ಮಗ ಶರತ್ ಹಾಗೂ ದಯಾನಂದ್ ಎನ್ನುವ ಯುವಕ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಗಣೇಶ ಉತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಗಿತ್ತು. ಬಳಿಕ ಮೆರವಣಿಗೆ ಮಾಡಿದ ನಂತರ ಗಣೇಶನನ್ನು ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಕೆರೆಯ ನೀರಿನಲ್ಲಿ ಮುಳುಗಿ ತಂದೆ, ಮಗ ಹಾಗೂ ಯುವಕ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: SBIನಲ್ಲಿ 1000ಕ್ಕೂ ಅಧಿಕ ಹುದ್ದೆಗಳು ಕಾಲ್​ಫಾರ್ಮ್.. ಬ್ಯಾಂಕ್​ನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ

ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡುವಾಗ ಈ ದುರ್ಘಟನೆ ನಡೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಟಿ, ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣೇಶ ವಿಸರ್ಜನೆ ವೇಳೆ ಅವಘಡ; ತಂದೆ, ಮಗ ಸೇರಿ ಮೂವರು ಸಾವು

https://newsfirstlive.com/wp-content/uploads/2024/09/TMK_GANESH_NEW.jpg

Load More