newsfirstkannada.com

‘ನಾವು ಬದುಕಿದ್ದೇ ಪವಾಡ’- ರೈಲು ದುರಂತದಲ್ಲಿ ಬದುಕುಳಿದವರು ಬಿಚ್ಚಿಟ್ಟ ಕರಾಳ ಸತ್ಯ!

Share :

03-06-2023

    ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಕುಟುಂಬ

    ರೈಲು ದುರಂತದಲ್ಲಿ ಬದುಕುಳಿದವರು ಬಿಚ್ಚಿಟ್ಟ ಕರಾಳ ಸತ್ಯ!

    ಒಡಿಶಾ ರೈಲು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆ

ಕೋಲ್ಕತ್ತಾ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಸಮೀಪ ನಡೆದ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೂ 280ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ಅವಘಡದಲ್ಲಿ ಸುಮಾರು 900ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಹಲವರಿಗಾಗಿ ರಕ್ಷಣಾ ಕಾರ್ಯಾಚಾರಣೆ ಮುಂದುವರಿದೆ. ಈ ಘೋರ ದುರಂತದಿಂದ ಬದುಕಿ ಬಂದ ಪಶ್ಚಿಮ ಬಂಗಾಳದ ಒಂದೇ ಕುಟುಂಬದ ಮೂವರು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯ ಮಹಿಸಾದಾಲ್​​ನಲ್ಲಿರೋ ಮಲುಬಾಸನ್​​ ಎಂಬ ಗ್ರಾಮದ​ ಒಂದೇ ಕುಟುಂಬದ ಮೂವರು ಬದುಕುಳಿದವರು. ಸುಬ್ರೋತೋ ಪಾಲ್​​, ದೆಬೋಶ್ರೀ ಪಾಲ್ ಎಂಬ ದಂಪತಿ ಮತ್ತವರ ಮಗ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಹೇಗೋ ರೈಲು ದುರಂತದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಮಾತಾಡಿದ ಸುಬ್ರೋತೋ ಪಾಲ್, ನಮ್ಮ ಮಗನನ್ನು ಚೆನ್ನೈನಲ್ಲಿರೋ ವೈದ್ಯರನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದೆವು. ಖರಗ್​ಪುರ ರೈಲ್ವೇ ನಿಲ್ದಾಣದಿಂದಲೇ ನಾವು ಚೆನ್ನೈ ಹೊರಟಿದ್ದೆವು. ಬಾಲಸೋರ್ ಟ್ರೈನ್​​ ಸ್ಟೇಷನ್​ ಬಳಿಕ ಸ್ವಲ್ಪ ದೂರ ಬರುತ್ತಿದ್ದಂತೆ ರೈಲು ಅಲುಗಾಡಲು ಶುರುವಾಯಿತು​. ಇಡೀ ಕಂಪಾರ್ಟ್​ಮೆಂಟ್​​ ತುಂಬಾ ಹೊಗೆ ಕಾಣಿಸಿಕೊಳ್ಳಲು ಆರಂಭವಾಯ್ತು. ನಮ್ಮಿಂದ ಏನು ನೋಡಲಾಗಲಿಲ್ಲ. ಯಾರೋ ಸ್ಥಳೀಯರು ಬಂದು ನಮ್ಮನ್ನು ಎಳೆದು ಟ್ರೈನ್​​ನಿಂದ ಹೊರಗೆ ಹಾಕಿದಂತಾಯ್ತು. ದೇವರೆ ನಮಗೆ 2ನೇ ಜೀವ ಕೊಟ್ಟರು. ಹೇಗೋ ಬದುಕಿ ಉಳಿದೆವು. ಆದರೆ, ಈ ಘೋರ ದುರಂತದಿಂದ ಬದುಕಿದ್ದೇ ಪವಾಡ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾವು ಬದುಕಿದ್ದೇ ಪವಾಡ’- ರೈಲು ದುರಂತದಲ್ಲಿ ಬದುಕುಳಿದವರು ಬಿಚ್ಚಿಟ್ಟ ಕರಾಳ ಸತ್ಯ!

https://newsfirstlive.com/wp-content/uploads/2023/06/Train-Accident-2.jpg

Load More