newsfirstkannada.com

ಅಡ್ಡಾದಿಡ್ಡಿ ಚಾಲನೆ.. 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಸ್ಕೂಲ್​ ಬಸ್​​, ಕಾರ್​​ ಮಧ್ಯೆ ಭೀಕರ ಅಪಘಾತ!

Share :

Published June 28, 2024 at 8:23pm

  ಕಾರು, ಬಸ್ ನಡುವಿನ​ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

  ಕಮಲಾಪುರ ಉಪನಗರದ ಪರಕಾಲ ಹುಜೂರಾಬಾದ್ ಹೆದ್ದಾರಿಯಲ್ಲಿ ಘಟನೆ!

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅಪಘಾತದ ವಿಡಿಯೋ

ಅಮರಾವತಿ: 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್​​ ಪಲ್ಟಿಯಾಗಿರೋ ಘಟನೆ ವಾರಂಗಲ್ ಜಿಲ್ಲೆಯ ಕಮಲಾಪುರ ಉಪನಗರದ ಪರಕಾಲ ಹುಜೂರಾಬಾದ್ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೌದು, ಶಾಲಾ ಬಸ್​ವೊಂದು ಹೆದ್ದಾರಿಯಲ್ಲಿ ಟರ್ನ್ ಮಾಡುತ್ತಿತ್ತು. ಇದೇ ವೇಳೆ ವೇಗವಾಗಿ ಬಂದ ಬಸ್​​ವೊಂದು ಏಕಾಏಕಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಹಾಗೂ ಬಸ್​​ ಪಲ್ಟಿ ಹೊಡೆದು ಬಿದ್ದಿದೆ. ಇನ್ನು, ಕಾರಿನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಕೂಡಲೇ ಗಾಯಗೊಂಡ ಮೂವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಏಕಶಿಲಾ ಶಾಲೆಯ ವಿದ್ಯಾರ್ಥಿಗಳು ಯಾವುದೇ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಶಾಲಾ ಬಸ್ಸಿನಲ್ಲಿದ್ದ ಇಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಕಾರು ಅತಿವೇಗದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಇದೇ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿದ್ಯಾರ್ಥಿಗಳು ದೇವರ ದಯೆಯಿಂದ ಪಾರಾಗಿದ್ದಾರೆ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಡ್ಡಾದಿಡ್ಡಿ ಚಾಲನೆ.. 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಸ್ಕೂಲ್​ ಬಸ್​​, ಕಾರ್​​ ಮಧ್ಯೆ ಭೀಕರ ಅಪಘಾತ!

https://newsfirstlive.com/wp-content/uploads/2024/06/bus-accident3.jpg

Load More