ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆ ಕಾರ್ಯಾಚರಣೆ
ಕಾಶ್ಮೀರದ ಗಡಿಯಲ್ಲಿ ನಿರಂತರ ಎನ್‌ಕೌಂಟರ್, ಗುಂಡಿನ ಕಾಳಗ
ಡ್ರೋನ್‌ಗಳಲ್ಲಿ ಉಗ್ರರನ್ನು ಕಳಿಸುತ್ತಿರುವ ಪಾಕ್ ಲಷ್ಕರ್ ಇ ತೋಯ್ಬಾ
ಶ್ರೀನಗರ: ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿದ ವೀರಯೋಧರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಜಮ್ಮು, ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿದ್ದು, ಇದುವರೆಗೂ ಮೂವರು ಭಯೋತ್ಪಾದಕರ ಹತರಾಗಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ಕಾಶ್ಮೀರದ ಗಡಿ ಪ್ರದೇಶದಲ್ಲಿ ನಿರಂತರ ಎನ್‌ಕೌಂಟರ್ ನಡೆಯುತ್ತಿದೆ. ಕಳೆದ ಗುರುವಾರ ಎನ್ಕೌಂಟರ್ನಲ್ಲಿ 19 ರಾಷ್ಟ್ರೀಯ ರೈಫಲ್ ಘಟಕದ ಕಮಾಂಡರ್ಗಳಾದ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದು, ಮೂವರು ಉಗ್ರರನ್ನು ಬಲಿ ಪಡೆದಿವೆ.
ಅನಂತ್‌ನಾಗ್ ಜಿಲ್ಲೆಯ ಕೋಕರ್ನಾಗ್ ಅರಣ್ಯದಲ್ಲಿ ಎನ್‌ಕೌಂಟರ್ ಕಾರ್ಯಾಚರಣೆ ನಡೆದಿತ್ತು. ಇದೀಗ ಬಾರಾಮುಲ್ಲಾ, ಉರಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಉಗ್ರಗಾಮಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂತಹ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕಾಶ್ಮೀರದ ಕಿಶ್ತವಾರ್‌ನ 13 ಮಂದಿ ಉಗ್ರರನ್ನು ಘೋಷಿತ ಅಪರಾಧಿಗಳು ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ 13 ಮಂದಿಯ ಆಸ್ತಿ ಪಾಸ್ತಿ ಜಪ್ತಿ ಮಾಡಿದೆ.
ಇದನ್ನೂ ಓದಿ: ಭಯೋತ್ಪಾದಕರ ಬೇಟೆಗಿಳಿದಿದ್ದ ಭಾರತೀಯ ಸೇನೆ; ಗುಂಡೇಟಿಗೆ 3 ಯೋಧರು ಹುತಾತ್ಮರಾದ ಕಥೆ
ಡ್ರೋನ್ ಬಳಸಿ ಉಗ್ರರನ್ನು ಕಳಿಸುತ್ತಿರುವ ಪಾಕ್
ಗಡಿಯಲ್ಲಿ ಗುಂಡಿನ ಚಕಮಕಿಗೆ ಕಾರಣವಾಗಿರುವ ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಡ್ರೋನ್ ಬಳಸಿ ಭಾರತಕ್ಕೆ ಉಗ್ರರನ್ನು ಕಳಿಸುತ್ತಿದೆ. ಪಂಜಾಬ್‌ಗೆ ಡ್ರೋನ್ ಮೂಲಕವೇ ಓರ್ವ ಉಗ್ರ ಬಂದಿಳಿದಿದ್ದಾನೆ ಎಂದು ಇಂಟಲಿಜೆನ್ಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಪಂಜಾಬ್‌ಗೆ ಡ್ರೋನ್‌ನಲ್ಲಿ ಬಂದ ಉಗ್ರನನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಲಷ್ಕರ್ ಇ ತೋಯ್ಬಾ ತನ್ನನ್ನು ಭಾರತದೊಳಕ್ಕೆ ಕಳಿಸಿದೆ. ಎಲ್‌ಇಟಿ ಹಣ ನೀಡಿದೆ ಎಂದು ಉಗ್ರ ಹೇಳಿದ್ದಾನೆ. ಇದುವರೆಗೂ ಭಾರತಕ್ಕೆ ಡ್ರಗ್ಸ್, ಶಸ್ತ್ರಾಸ್ತ್ರ ಸಾಗಿಸಲು ಡ್ರೋನ್ ಬಳಸುತ್ತಿದ್ದ ಪಾಕ್, ಉಗ್ರಗಾಮಿ ಸಂಘಟನೆಗಳು ಈಗ ಜಮ್ಮು ಕಾಶ್ಮೀರ, ಪಂಜಾಬ್ ಗಡಿಗಳಲ್ಲಿ ಡ್ರೋನ್ ಮೂಲಕವೇ ಉಗ್ರರನ್ನು ರವಾನೆ ಮಾಡುತ್ತಿದೆ.
ಪಾಕಿಸ್ತಾನದ ಶಹಕರ್ ಘರ್‌ನಲ್ಲಿ ಡ್ರೋನ್‌ಗಳ ಮೂಲಕ ಉಗ್ರರನ್ನು ಭಾರತಕ್ಕೆ ಕಳಿಸುವ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಸುಮಾರು 70 ಕೆಜಿ ತೂಕ ಹೊರುವ ಸಾಮರ್ಥ್ಯ ಇರುವ ಈ ಡ್ರೋನ್‌ಗಳಿವೆ. 70 ಕೆಜಿಗಿಂತ ಕಡಿಮೆ ತೂಕ ಇರುವ ಉಗ್ರರನ್ನು ಡ್ರೋನ್‌ಗೆ ಕಟ್ಟಿ ಭಾರತದೊಳಕ್ಕೆ ರವಾನೆ ಮಾಡಲಾಗುತ್ತಿದೆ. ಸುಮಾರು 60 ಕಿಲೋಮೀಟರ್ ದೂರದವರೆಗೂ ಚಲಿಸುವ ಡ್ರೋನ್‌ಗಳು ಇವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ