newsfirstkannada.com

ಗಣಪತಿ ಮೂರ್ತಿಯನ್ನು ಮುಳುಗಿಸೋ ಆಟ; ಮನೆ ಮುಂದಿನ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

Share :

26-08-2023

    ಮನೆಯಲ್ಲಿ ಆಟವಾಡುತ್ತ ಬಾಯಿಯಲ್ಲಿ ಬಿದ್ದ ಮಗು

    ಬಾವಿಗೆ ಮಣ್ಣು ಹಾಕಲು ಮುಂದಾದಗ ಕಾಲು ಜಾರಿದೆ

    ಮಗು ಕಾಣುತ್ತಿಲ್ಲವೆಂದು ಬಡಾವಣೆಯವರೆಲ್ಲ ಹುಡುಕಾಟ

ಉತ್ತರ ಕನ್ನಡ: ಗಣಪತಿ ಮೂರ್ತಿಯೆಂದು ಮಣ್ಣನ್ನು ಬಾವಿಗೆ ಹಾಕುವಾಗ ಕಾಲು ಜಾರಿ ಬಿದ್ದ ಮೂರು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದಿದೆ.

ಸ್ಥುಥಿ (3) ಮೃತಪಟ್ಟ ಮಗು. ಮನೆಯ ಅಂಗಳದಲ್ಲಿಯೇ ಆಟವಾಡುತ್ತಿದ್ದ ಸ್ಥುಥಿ ಗಣಪತಿ ಮೂರ್ತಿ ಎಂದು ಮಣ್ಣನ್ನ ಬಾವಿಯಲ್ಲಿ ಹಾಕಲು ಮುಂದಾಗಿದ್ದಳು. ಈ ವೇಳೆ ಕಾಲು ಜಾರಿ ಬಾವಿಯ ನೀರಿಗೆ ಬಿದ್ದಿದ್ದಾಳೆ. ಇದನ್ನು ಯಾರು ಕೂಡ ನೋಡಿಲ್ಲ.

ಮಗು ಕಾಣೆಯಾಗಿದೆ ಎಂದು ಪೋಷಕರು, ಸ್ಥಳೀಯರೆಲ್ಲ ಸೇರಿ ಮನೆಗಳನ್ನು ಹಾಗೂ ಇಡೀ ಬಡಾವಣೆಯನ್ನು ಸುತ್ತಾಡಿ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಸಿಕ್ಕಿಲ್ಲ. ಕೊನೆಗೆ ಬಾವಿಯಲ್ಲಿ ಇಣುಕಿ ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಪತಿ ಮೂರ್ತಿಯನ್ನು ಮುಳುಗಿಸೋ ಆಟ; ಮನೆ ಮುಂದಿನ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

https://newsfirstlive.com/wp-content/uploads/2023/08/KARWARA_BABY.jpg

Load More