newsfirstkannada.com

ಭದ್ರಾ ನದಿಯಲ್ಲಿ ದಾರುಣ ಘಟನೆ.. ತೆಪ್ಪ ಮುಳುಗಿ ಮೂವರು ಪ್ರವಾಸಿ ಯುವಕರು ಸಾವು

Share :

Published June 20, 2024 at 1:16pm

    ತೆಪ್ಪ ಮುಳುಗಿ ಭದ್ರಾನದಿಯಲ್ಲಿ ನಾಪತ್ತೆ ಆಗಿದ್ದ ಮೂವರು

    ನಿನ್ನೆ ದುರ್ಘಟನೆ ಶೋಧಕಾರ್ಯ ನಡೆಸಿದ್ದ ಭದ್ರತಾ ಸಿಬ್ಬಂದಿ

    ಶಿವಮೊಗ್ಗ ಮೂಲದ ಮೂವರು ಯುವಕರು ಸಾವು

ಚಿಕ್ಕಮಗಳೂರು: ತೆಪ್ಪ ಮುಳುಗಿ ಭದ್ರಾನದಿಯಲ್ಲಿ ನಾಪತ್ತೆ ಆಗಿದ್ದ ಮೂವರ ಮೃತದೇಹವನ್ನು ಪತ್ತೆ ಹಚ್ಚಿ ಹೊರ ತರಲಾಗಿದೆ. ಭದ್ರಾ ನದಿಯಲ್ಲಿ ಮೂವರ ಶವ ಪತ್ತೆಯಾಗಿದೆ.

ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರು ಸೇರಿ ಶವವನ್ನು ಹೊರಕ್ಕೆ ತಂದಿದ್ದಾರೆ. ಸದ್ಯ ಮೃತದೇಹವನ್ನು ಎನ್​ಆರ್​​ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನೆ ಮಾಡಲಾಗಿದೆ. ನಿನ್ನೆಯೂ ಶೋಧ ಕಾರ್ಯಚರಣೆ ನಡೆಸಲಾಗಿತ್ತು. ಕತ್ತಲಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆಯಿಂದ ಶೋಧ ಕಾರ್ಯ ನಡೆಸಿದ ಸಿಬ್ಬಂದಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ:ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್​.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!

ನಿನ್ನೆ ಪ್ರವಾಸಕ್ಕೆ ಎಂದು ಭದ್ರಾ ನದಿಯ ಹಿನ್ನೀರಿಗೆ ಮೂವರು ಆಗಮಿಸಿದ್ದರು. ತೆಪ್ಪದಲ್ಲಿ ತೆರಳುವಾಗ ಮಗುಚಿಬಿದ್ದು ನೀರು ಪಾಲಾಗಿದ್ದರು. ಅದೀಲ್, ಸಾಜೀದ್, ಅಪ್ದಾಖಾನ್ ಮೃತಪಟ್ಟವರು. ಇವರು ಶಿವಮೊಗ್ಗ ದ ವಿದ್ಯಾನಗರ ಮೂಲದವರು. ಎನ್​ಆರ್​ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ದುರ್ಘಟನೆ ನಡೆದಿದೆ.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭದ್ರಾ ನದಿಯಲ್ಲಿ ದಾರುಣ ಘಟನೆ.. ತೆಪ್ಪ ಮುಳುಗಿ ಮೂವರು ಪ್ರವಾಸಿ ಯುವಕರು ಸಾವು

https://newsfirstlive.com/wp-content/uploads/2024/06/CKM-DIED.jpg

Load More