ಮನೆಯಿಂದ ಬಂದ ಪತ್ರಗಳನ್ನ ಪಡೆಯೋದಕ್ಕೆ ಸದಸ್ಯರು ಸೆಣಸಾಟ
ಕ್ಯಾಪ್ಟೆನ್ಸಿ ಅಭ್ಯರ್ಥಿ ಆಯ್ಕೆ ಮಾಡುವಾಗ ವಿನಯ್, ತುಕಾಲಿ ಕಿತ್ತಾಟ
ಬೇರೆಯವ್ರಿಗೆ ಚುಚ್ಚಿ ಚುಚ್ಚಿ ಹೇಳೋದು ಬೇಡ; ತುಕಾಲಿ ಸಂತೋಷ್
ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಆರನೇ ವಾರವಂತೂ ಮನೆಯಲ್ಲಿ ಸ್ಪರ್ಧಿಗಳಿಗೆ ಭಾವನಾತ್ಮಕವಾದ ಟಾಸ್ಕ್ ಕೊಡಲಾಗಿದೆ. ಇದೇ ಈ ವಾರ ಕುಟುಂಬ ಹಾಗೂ ಮನೆಯ ಸದಸ್ಯರ ನಡುವೆ ಇರುವಂತಹ ಆಟವಾಗಿತ್ತು. ಇಲ್ಲಿ ಕುಟುಂಬದಿಂದ ಬಂದ ಪತ್ರಗಳನ್ನ ತ್ಯಾಗ ಮಾಡಿದವರೇ ತ್ಯಾಗಮಯಿಗಳು. ಆದರೆ ಅದು ಅಷ್ಟು ಸುಲಭವಲ್ಲ. ಈ ವಾರ ಮನೆಯಿಂದ ಬಂದಿರೋ ಪತ್ರಗಳನ್ನ ಪಡೆಯೋದಕ್ಕೆ ಮನೆಯ ಸದಸ್ಯರು ಸೆಣೆಸಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಇವತ್ತಿಗೆ ಅಷ್ಟು ಟಾಸ್ಕ್ಗಳು ಅಂತ್ಯಗೊಂಡಿದ್ದು ಇವತ್ತು ಕ್ಯಾಪ್ಟೆನ್ಸಿ ಟಾಸ್ಕ್ ಆಡಲಿದ್ದಾರೆ. ಎಂದಿನಂತೆ ಬಿಗ್‌ಬಾಸ್ ಮನೆಯ ಅಷ್ಟೂ ಸದಸ್ಯರು ಸೇರಿ ಕ್ಯಾಪ್ಟೆನ್ಸಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಬೇಕು. ಅದರಲ್ಲಿ ವಿನಯ್ ಮುಂದೆ ಕೆಲವೊಂದಷ್ಟು ಸ್ಪರ್ಧಿಗಳ ಹೆಸರನ್ನ ಹೇಳ್ತಾರೆ. ಇದಕ್ಕೆ ತುಕಾಲಿ ಸಂತೋಷ್ ವಿರೋಧ ವ್ಯಕ್ತಪಡಿಸುತ್ತಾರೆ.
ವಿನಯ್ ಹೇಳಿದ ಹೆಸರುಗಳಿಗೆ ಒಪ್ಪದ ತುಕಾಲಿ ಸಂತೋಷ್, ಮನೆಯವರ ವೋಟಿಂಗ್ ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ. ನಾನು ಇದಕ್ಕೆ ಒಪ್ಪಲ್ಲ ಅಂದಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ಗರಂ ಆದ ವಿನಯ್ ನೀವು ನಿಮ್ಮ ಆಯ್ಕೆ ಹೇಳಿ. ಇದಿಷ್ಟು ನನ್ನ ಪರ್ಸನಲ್ ಆಯ್ಕೆಗಳು ಅಂದಿದ್ದಾರೆ. ಅದಕ್ಕೆ ತುಕಾಲಿ ನಿಮ್ಮ ಪರ್ಸನಲ್ ಆಯ್ಕೆ ನಿಮ್ಮದಷ್ಟೇ ಆಗಿರಲಿ ಬೇರೆಯವ್ರಿಗೆ ಚುಚ್ಚಿ ಚುಚ್ಚಿ ಹೇಳೋದು ಬೇಡ ಅಂದಿದ್ದಾರೆ. ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್ ಅವರು ವಿನಯ್ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆಯ್ಕೆ ಆಗೋದಕ್ಕೆ ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ.
ವಿನಯ್ ಹಾಗೂ ತುಕಾಲಿ ಅವರ ಮಧ್ಯೆ ಮಾತಿನ ಯುದ್ಧ ಈಗಷ್ಟೇ ಶುರುವಾಗಿದೆ. ಇನ್ನು ವಾರದ ಪಂಚಾಯ್ತಿಗೂ ಕೌಂಟ್‌ಡೌನ್ ಶುರುವಾಗಿದೆ. ನಾಳೆ ನಾಡಿದ್ದು ಕಿಚ್ಚ ಸುದೀಪ್ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗಲಿದ್ದು, ಬಿಗ್‌ಬಾಸ್ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಲಿದ್ದಾರೆ. ಕಳೆದ ವಾರ ವರ್ತೂರು ಸಂತೋಷ್ ಅವರ ಕಣ್ಣೀರಿನಿಂದಾಗಿ ಎಲಿಮಿನೇಷನ್ ಆಗಿರಲಿಲ್ಲ. ಈ ವಾರ ಒಬ್ಬರಲ್ಲ, ಇಬ್ಬರು ಎಲಿಮಿನೇಷನ್ ಆದ್ರೂ ಅಚ್ಚರಿಯಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ