newsfirstkannada.com

ಚೀಟಿ ಹಾಕೋ ಮುನ್ನ ಹುಷಾರ್​​.. ಕೋಟಿ ಕೋಟಿ ಲೂಟಿ ಮಾಡಿ ಎಸ್ಕೇಪ್​ ಆದ ವಂಚಕರು

Share :

03-09-2023

    ಡಾಕ್ಟರ್ಸ್, ಬ್ಯುಸಿನೆಸ್ ಮ್ಯಾನ್​ಗಳೇ ಇವರ ಮುಖ್ಯ ಟಾರ್ಗೆಟ್​​

    ಆರೋಪಿ ಮಂಜುನಾಥ್ ಮತ್ತು ವಿಶ್ವನಾಥ್ ಇಬ್ಬರಿಂದ ವ್ಯವಹಾರ!

    ನೂರಾರು ಜನರ ಲಿಂಕ್ ಪಡೆಯುತ್ತಿದ್ದ ಈ ಖತರ್ನಾಕ್ ಐನಾತಿಗಳು

ಬೆಂಗಳೂರು: ಕಂಡೋರ ತಲೆ ಕೈ ಇಟ್ಟು ಯಾಮಾರಿಸಲು ಹೊರಟಿತ್ತು ಆ ಫ್ಯಾಮಿಲಿ. ಚೀಟಿ ವ್ಯವಹಾರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಬಂಗಲೆ ಕಟ್ಟಿಕೊಂಡಿದ್ದರು. ಆದರೆ ಹಣ ಕೊಟ್ಟು ಯಾಮಾರಿದವರು ಈಗ ಎಚ್ಚರಗೊಂಡಿದ್ದಾರೆ. ಕೈಗೆ ಸಿಕ್ಕರೆ ಉಳಿಗಾಲವಿಲ್ಲ ಅಂತ ವೋಲ್ ಫ್ರಾಡ್ ಫ್ಯಾಮಿಲಿ ಈಗ ಎಸ್ಕೇಪ್ ಆಗಿದೆ‌.

ಗಂಡ ಹೆಂಡ್ತಿ, ಅಣ್ಣ, ತಮ್ಮ, ಚಿಕ್ಕಪ್ಪ ಎಲ್ಲಾ ಸೇರಿಕೊಂಡು ಯಾಮಾರಿಸಿದ್ದು ಕೋಟಿ ಕೋಟಿ ಹಣ. ಆರೋಪಿ ವಿಶ್ವನಾಥ್​ನಿಗೆ ಸಾಥ್ ಕೊಟ್ಟಿದ್ದು ತಮ್ಮ ಮಂಜುನಾಥ. ಈ ಇಬ್ಬರ ಬ್ಯುಸಿನೆಸ್ ಹೆಡ್​​ ಆಗಿದ್ದು ವಿಶ್ವನಾಥ್ ಪತ್ನಿ. ಹೀಗೆ ಇಡೀ ಫ್ಯಾಮಿಲಿ‌ ಸೇರಿಕೊಂಡು ಚೀಟಿ ಬ್ಯುಸಿನೆಸ್ ಶುರುಮಾಡಿದ್ದರು. ಏನೋ ಉಳಿತಾಯ ಇರಲಿ ಅಂತ ನೂರಾರು ಜನ ಇವರ ಹತ್ತಿರ ಹಣ ಕಟ್ಟೋಕೆ ಶುರು ಮಾಡ್ತಾರೆ. ಬಂದ ಹಣದಲ್ಲಿ ಈ ಫ್ಯಾಮಿಲಿ ತಮಗೆ ತಮ್ಮ ಮಕ್ಕಳಿಗೆ ಆಸ್ತಿ ಮಾಡ್ಕೊಂಡ್ರೆ ಹೊರತು ಕೊಟ್ಟವರಿಗೆ ಹಣವನ್ನು ವಾಪಸ್​​ ಕೊಡಲಿಲ್ಲ. ಆದರೆ ಯಾವಾಗ ಕೊಟ್ಟವರು ತಿರುಗಿ ಬಿದ್ದರೋ ಊರನ್ನೇ ಬಿಟ್ಟು ಪರಾರಿಯಾಗಿದ್ದಾರೆ. ಮಂಜುನಾಥ್ ಮತ್ತು ವಿಶ್ವನಾಥ್ ಮೊದಲು ವಿದ್ಯಾರಣ್ಯಪುರದಲ್ಲಿ ಆಫೀಸ್ ತೆರೆದು ಚೀಟಿ ವ್ಯವಹಾರ ಶುರು ಮಾಡ್ತಾರೆ. ಡಾಕ್ಟರ್ಸ್, ಬ್ಯುಸಿನೆಸ್ ಮ್ಯಾನ್ಗ​​ಳ ನಂಬಿಕೆ ಗಳಿಸಿಕೊಂಡು ನೂರಾರು ಜನರ ಲಿಂಕ್ ಮಾಡಿಕೊಳ್ತಾರೆ‌. ಲಕ್ಷ ಲಕ್ಷದ ಚೀಟಿ ಮಾಡುತ್ತೇವೆ ಅಂತ ಜನರಿಂದ ವಸೂಲಿ ಶುರು ಮಾಡಿಕೊಳ್ತಾರೆ. ಅದಕ್ಕೆ ವಿಶ್ವನಾಥ್ ಪತ್ನಿ ಮತ್ತು ಚಿಕ್ಕಪ್ಪ ಲಕ್ಷ್ಮಿ ನಾರಾಯಣ್ ಕೂಡ ಸಾಥ್ ನೀಡುತ್ತಾರೆ.

ಆದ್ರೆ ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನೋ ಹಾಗೆ, ಇವರ ತಲೆ ಯಾಮಾರಿಸೋ ಪ್ಲಾನ್​ಗೆ ತಳ್ಳಿ ಬಿಡುತ್ತೆ‌. ಕಂಡೋರ ದುಡ್ಡಲ್ಲಿ ಉಂಡವನೇ ಜಾಣ ಅಂತ ಕೋಲಾರದಲ್ಲಿ ಬಂಗಲೆ, ಬೆಂಗಳೂರಲ್ಲಿ ಸ್ವಂತ ಮನೆ ಎಲ್ಲವನ್ನ ಮಾಡಿಕೊಂಡು ಐಶಾರಾಮಿ ಜೀವನ‌ ನಡೆಸೋಕೆ ಶುರು ಮಾಡ್ತಾರೆ. ಆದ್ರೆ ಇವರ ವಂಚನೆ ಪ್ಲಾನ್ ಯಾವಾಗ ಜನರಿಗೆ ಅರಿವಾಗುತ್ತೊ ಜನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಸೋಲದೇವನಹಳ್ಳಿ ಠಾಣೆಯಲ್ಲಿ 19 ಜನರಿಂದ ವಂಚನೆ ಮಾಡಿದ ಫ್ಯಾಮಿಲಿಯ 8 ಜನರ ಮೇಲೆ ದೂರು ದಾಖಲಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಭಯದಲ್ಲಿ ಇಡೀ ಫ್ಯಾಮಿಲಿ ಈಗ ತಲೆಮರೆಸಿಕೊಂಡಿದೆ. ಸದ್ಯ ಆರೋಪಿಗಳ ಮೇಲೆ ದೂರನ್ನು ದಾಖಲಿಸಿಕೊಂಡ ಪೊಲೀಸ್​ ಅಧಿಕಾರಿಗಳು 10 ದಿನವಾದ್ರೂ ವಂಚಕರನ್ನು ಪತ್ತೆ ಮಾಡಿಲ್ಲ. ಇತ್ತ ಕಡೆ ಹಣ ಕೊಟ್ಟು ಮೋಸ ಹೋದವರು ಮಾತ್ರ ತಲೆ ಮೇಲೆ ಕೈ ಹೊತ್ತು ಕೂಳಿತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀಟಿ ಹಾಕೋ ಮುನ್ನ ಹುಷಾರ್​​.. ಕೋಟಿ ಕೋಟಿ ಲೂಟಿ ಮಾಡಿ ಎಸ್ಕೇಪ್​ ಆದ ವಂಚಕರು

https://newsfirstlive.com/wp-content/uploads/2023/09/fake-home-1.jpg

Load More