newsfirstkannada.com

ರಿಲೀಸ್​​ಗೆ ಮುನ್ನವೇ ದಾಖಲೆಯತ್ತ ಸಲ್ಮಾನ್ ಖಾನ್ ಸಿನಿಮಾ; ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ಟೈಗರ್-3 ಕಲೆಕ್ಷನ್ ಎಷ್ಟು?

Share :

10-11-2023

    ಬಾಲಿವುಡ್​ ಬಹುನಿರೀಕ್ಷಿತ ಚಿತ್ರ ‘ಟೈಗರ್ 3‘ ನ.12ರಂದು ರಿಲೀಸ್​

    ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ‘ಟೈಗರ್ 3‘ ಸಿನಿಮಾ ಬಿಡುಗಡೆ

    ಮತ್ತೆ ಒಟ್ಟಾಗಿ ತರೆ ಮೇಲೆ ನಟ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್

ಬಾಲಿವುಡ್​ ನಟ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಎಂದರೆ ಟೈಗರ್ 3. ಈ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿ ಇದೆ. ನವೆಂಬರ್ 12ರಂದು ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಟೈಗರ್ 3 ರಿಲೀಸ್​​​ ಆಗಲಿದೆ. ನೆಚ್ಚಿನ ನಟನ ಚಿತ್ರವನ್ನು ಬಿಗ್​ ಸ್ಕ್ರೀನ್​ ಮೇಲೆ ನೋಡಲು ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.

ವಿಶೇಷ ಎಂದರೆ ಸಲ್ಮಾನ್ ಖಾನ್, ಕತ್ರಿನಾ ಕೈಫ್ ನಟನೆಯ ಟೈಗರ್ 3ಕ್ಕೆ ಮುಂಗಡ ಬುಕಿಂಗ್ ಶುರುವಾಗಿದೆ. ಇನ್ನೂ ದೀಪಾವಳಿಯ ಅತೀ ಹೆಚ್ಚು ಕಲೆಕ್ಷನ್​​ ಮಾಡಬಹುದು ಎಂದು ಮೂಲಗಳು ಹೇಳುತ್ತಿವೆ. ವರದಿಯ ಪ್ರಕಾರ ಟೈಗರ್ 3ಗಾಗಿ ಮೊದಲ ದಿನವಾದ ನವೆಂಬರ್ 12ರ ಮುಂಗಡ ಬುಕಿಂಗ್ ಒಟ್ಟು ಮೊತ್ತ ₹12.43 ಕೋಟಿ ಗಳಿಸಬಹುದು ಎಂದು ಉಹಿಸಲಾಗಿದೆ. ಈ  ರಿಲೀಸ್​​ 3 ದಿನಕ್ಕೆ ಮುನ್ನವೆ 4,62,327 ಟಿಕೆಟ್‌ಗಳು ಮಾರಾಟವಾಗಿವೆ. ಈಗಾಗಲೇ ತೆಲುಗು ಹಾಗೂ ಹಿಂದಿಯಲ್ಲಿ 1,957 ಟಿಕೆಟ್‌ಗಳು ಮಾರಾಟವಾಗಿವೆ. ದಿನದಿಂದ ದಿನಕ್ಕೆ 8,203 ಟಿಕೆಟ್‌ಗಳು ಬುಕ್ ಆಗುತ್ತಿವೆ ಎಂದು ವರದಿಯಾಗಿದೆ.

ಇನ್ನೂ ಈ ಹಿಂದೆ ನಟ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ‘ಏಕ್​ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳಲ್ಲಿ ನಟಿಸಿದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟ ಆಗಿತ್ತು. ಈಗ ‘ಟೈಗರ್ 3’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​​ಗೆ ಮುನ್ನವೇ ದಾಖಲೆಯತ್ತ ಸಲ್ಮಾನ್ ಖಾನ್ ಸಿನಿಮಾ; ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ಟೈಗರ್-3 ಕಲೆಕ್ಷನ್ ಎಷ್ಟು?

https://newsfirstlive.com/wp-content/uploads/2023/11/sallu-1.jpg

Load More