newsfirstkannada.com

ಮೈಸೂರಲ್ಲಿ ಹುಲಿ ಹಾವಳಿ.. ಹಸು ರಕ್ಷಿಸಲು ಹೋದವನ ಮೇಲೆ ದಾಳಿ!

Share :

01-11-2023

    ನಂಜನಗೂಡಿನ ಮಹದೇವ ನಗರ ಗ್ರಾಮದಲ್ಲಿ ಘಟನೆ

    ಅರಣ್ಯ ಅಧಿಕಾರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

    ಹುಲಿ ದಾಳಿಗೆ ಸಿಲುಕಿದ ದನಗಾಹಿ ವೀರಭದ್ರಗೆ ಗಾಯ

ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಟ್ಟಿದ್ದ ಚಿರತೆ ಭೀತಿ ಕೊನೆಗೂ ಅಂತ್ಯವಾಗಿದೆ. ಆದ್ರೆ, ಅತ್ತ ಮೈಸೂರಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಧನಗಾಹಿ ಮೇಲೆ ಎರಗಿರೋ ವ್ಯಾಘ್ರ ಗ್ರಾಮಸ್ಥರ ನಿದ್ದೆಗೆಡಿಸಿದೆ. ಮೂರು ದಿನಗಳಿಂದ ಪದೇ ಪದೇ ಪ್ರತ್ಯಕ್ಷವಾಗ್ತಿರೋ ಹುಲಿ ಹಿಡಿಯುವಂತೆ ಆಕ್ರೋಶದ ಕೂಗು ಜೋರಾಗಿದೆ.

ಗಾಯಗೊಂಡಿರೋ ಹಸು ಮತ್ತು ಧನಗಾಹಿ. ಕಣ್ಣೀರಿಡ್ತಿರೋ ಕುಟುಂಬಸ್ಥರು. ಹುಲಿದಾಳಿಗೆ ತುತ್ತಾಗಿ ಹಸು ಮತ್ತು ವೃದ್ಧ ಒದ್ದಾಡ್ತಿದ್ರೆ, ಘಟನೆಯಿಂದ ಸಿಡಿದೆದ್ದ ಗ್ರಾಮಸ್ಥರ ಆಕ್ರೋಶ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಫೋಟವಾಗಿತ್ತು.
ಎಸ್.ಮೈಸೂರು ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ, ಕಾಡಂಚಿನ ಗ್ರಾಮದ ಜನರು ವನ್ಯಜೀವಿ ದಾಳಿಗೆ ಕಂಗಾಲಾಗಿದ್ದಾರೆ. ನಂಜನಗೂಡು ತಾಲೂಕು ಮಹದೇವನಗರದಲ್ಲಿ ಹುಲಿ ಹಾವಳಿ ಇಡ್ತಿದೆ. ಹಸು ಹಾಗೂ ಕರುವಿನ ಮೇಲೆ ಹುಲಿರಾಯ ದಾಳಿ ಮಾಡಿದ್ದು, ಹಸು ರಕ್ಷಿಸಲು ಹೋದ ದನಗಾಹಿ ಮೇಲೂ ಅಟ್ಯಾಕ್ ಮಾಡಿದೆ.

ಇನ್ನೂ ದಾಳಿಯಲ್ಲಿ ವೀರಭದ್ರ ಬೋವಿ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವೀರಭದ್ರಭೋವಿಯ ಆರೋಗ್ಯವನ್ನ ಶಾಸಕ ದರ್ಶನ್ ಧ್ರುವನಾರಾಯಣ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಅರಣ್ಯ ಇಲಾಖೆ ಮತ್ತು ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಿ ಕೊಡುವುದಾಗಿ ಶಾಸಕರು ಅಭಯ ನೀಡಿದ್ದಾರೆ. ವೀರಭದ್ರ ಬೋವಿ ಮೇಲೆ ದಾಳಿ ನಡೆಸಿದ ಹುಲಿ, ಗ್ರಾಮದ ಹೊರ ವಲಯದಲ್ಲೇ ಅಡ್ಡಾಡುತ್ತಿದೆ. ಹುಲಿ ಗ್ರಾಮದ ಹೊರವಲಯದಲ್ಲೇ ಬೀಡು ಬಿಟ್ಟಿದ್ದು ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಇನ್ನೂ ಘಟನೆ ಹಿನ್ನೆಲೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮಹಾಂತೇಶ್ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ.

ಹಾದನೂರು ಒಡೆಯನಪುರ ಮಹದೇವೇಗೌಡ ಎಂಬ ರೈತನ ಮೇಲೆ ಕಳೆದ ವರ್ಷ ಹುಲಿ ದಾಳಿ ಮಾಡಿ ಕೊಂದಿತ್ತು. ನರಭಕ್ಷಕ ಹುಲಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ. ಇನ್ನೂ ಹುಲಿ ದಾಳಿ ಪದೇ ಪದೇ ನಡೆಯುತ್ತಿದ್ದು ಹುಲಿ ಸೆರೆ ಹಿಡಿಯಬೇಕು,ಪರಿಹಾರ ಕೊಡಬೇಕು ಅಂತಾ ಗಾಯಾಳು ಸಂಬಂಧಿ ಒತ್ತಾಯಿಸಿದ್ದಾರೆ. ದಿನಕಳೆದಂತೆ ವನ್ಯಜೀವಿಗಳ ಹಾವಳಿ ಹೆಚ್ಚಾಗ್ತಾನೆ ಇದೆ. ಅರಣ್ಯ ಇಲಾಖೆ ವನ್ಯಜೀವಿ ತಡೆಗೆ ಎಷ್ಟೇ ಕ್ರಮ ಕೈಗೊಂಡ್ರೂ ಸಾಧ್ಯವಾಗ್ತಿಲ್ಲ. ಹಾಗಾಂತ ಸುಮ್ಮನಾಗದೇ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಲ್ಲಿ ಹುಲಿ ಹಾವಳಿ.. ಹಸು ರಕ್ಷಿಸಲು ಹೋದವನ ಮೇಲೆ ದಾಳಿ!

https://newsfirstlive.com/wp-content/uploads/2023/11/tiger-2.jpg

Load More