newsfirstkannada.com

ಇಂದು ವರ್ತೂರು ಸಂತೋಷ್​ಗೆ ಸಿಗುತ್ತಾ ಜಾಮೀನು.. ಈ ಬಗ್ಗೆ ವಕೀಲರು ಹೇಳಿದ್ದೇನು..?

Share :

27-10-2023

    ಬಿಗ್​ಬಾಸ್ ಮನೆಯಿಂದಲೇ ಬಂಧನವಾಗಿರುವ ಸಂತೋಷ್

    ಇಂದಿಗೆ ಜಾಮೀನು ನೀಡುವ ಆದೇಶ ಕಾಯ್ದಿರಿಸಿರುವ ಕೋರ್ಟ್

    ಸಂತೋಷ್​ನನ್ನ ಏಕಾಏಕಿ ಬಂಧಿಸಿರುವುದಕ್ಕೆ ವಕೀಲರು ಪ್ರಶ್ನೆ

ಬೆಂಗಳೂರು: ಬಿಗ್‌ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್ ಬಂಧನ ಪ್ರಕರಣಕ್ಕೆ ಸಂಬಂಧಪಟ್ಚಂತೆ, ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನ ಕೋರ್ಟ್‌ ಇಂದಿಗೆ ಕಾಯ್ದಿರಿಸಿದೆ.

ಬಂಧನವನ್ನು ಪ್ರಶ್ನಿಸಿ ವರ್ತೂರು ಸಂತೋಷ್ ಜಾಮೀನಿಗಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ 2ನೇ ACJM ಕೋರ್ಟ್‌ ಜಾಮೀನು ಆದೇಶವನ್ನ ಕಾಯ್ದಿರಿಸಿದ್ದು ಇವತ್ತು ವಿಚಾರಣೆ ನಡೆಸಿ ಆದೇಶವನ್ನು ಪ್ರಕಟಿಸಲಿದೆ.

ಇನ್ನು, ಸಂತೋಪ್ ಪರ ಮಾತನಾಡಿದ ವಕೀಲ ಕೆ. ನಟರಾಜ್, ಸೆಲೆಬ್ರಿಟಿಗಳಿಗೆ ನೋಟಿಸ್ ಕೊಟ್ಟಿದ್ದಾರೆ. ಆದ್ರೆ ಸಂತೋಷ್​ಗೆ ಯಾವುದೇ ನೋಟಿಸ್ ಅನ್ನು ನೀಡದೇ ಏಕಾಏಕಿ ಬಂಧನ ಮಾಡಿದ್ದಾರೆ. ಸಂತೋಷ್​ ಕೃಷಿಕರು. ಅವರ ಮೇಲೆ ಯಾವುದೇ ಅಪರಾಧಗಳಿಲ್ಲ. ಆದ್ರೆ ಅರಣ್ಯಾಧಿಕಾರಿಗಳು ಬಂಧನ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಎಲ್ಲ ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ವರ್ತೂರು ಸಂತೋಷ್​ಗೆ ಸಿಗುತ್ತಾ ಜಾಮೀನು.. ಈ ಬಗ್ಗೆ ವಕೀಲರು ಹೇಳಿದ್ದೇನು..?

https://newsfirstlive.com/wp-content/uploads/2023/10/VARTURU_SANTOSH.jpg

Load More