newsfirstkannada.com

ನಾನು ಧರಿಸಿದ್ದ ಹುಲಿ ಉಗುರು ಪೆಂಡೆಂಟ್​​ ಒರಿಜಿನಲ್​​ ಅಲ್ಲ, ಡೂಪ್ಲಿಕೇಟ್; ಧನಂಜಯ​ ಸ್ವಾಮೀಜಿ

Share :

25-10-2023

    ಹುಲಿ ಉಗುರಿನ ಪೆಂಡೆಂಟ್ ಎಸೆದಿದ್ದೇನೆ ಎಂದಿರುವ ಧನಂಜಯ ಸ್ವಾಮೀಜಿ!

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಹುಲಿ ಉಗುರು ಧರಿಸಿರೋ ಫೋಟೋ!

    ಬಿದನಗೆರೆ ಸ್ವಯಂ ಘೋಷಿತ ಧನಂಜಯ ಗುರೂಜಿ ದೇವಾಲಯಕ್ಕೆ ಭೇಟಿ

ತುಮಕೂರು: ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಸ್ವಯಂ ಘೋಷಿತ ಗುರೂಜಿ ಧನಂಜಯ ಸ್ವಾಮೀಜಿ ಅವರನ್ನು ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಕುಣಿಗಲ್ ತಾಲೂಕಿನ ಬಿದನಗೆರೆ ಶನಿಮಹಾತ್ಮ ದೇವಾಲಯಕ್ಕೆ ಭೇಟಿ ನೀಡಿ ಶಾಕ್ ಕೊಟ್ಟಿದ್ದಾರೆ. ಆದರೆ, ವಿಚಾರಣೆ ವೇಳೆ ಯಾವುದೇ ಹುಲಿ ಉಗುರು ಪೆಂಡೆಂಟ್ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಹುಲಿ ಉಗುರಿನ ಪೆಂಡೆಂಟ್.. ಬಿದನಗೆರೆ ಧನಂಜಯ ಗುರೂಜಿಗೂ ಬಿಗ್‌ ಶಾಕ್‌! ದೇವಸ್ಥಾನದಲ್ಲಿ ತೀವ್ರ ತಪಾಸಣೆ

ಈ ಕುರಿತು ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ ಧನಂಜಯ ಸ್ವಾಮೀಜಿ ಅವರು, ಸಾಮಾಜಿಕ ಜಾಲತಾಣದಲ್ಲಿ ಕೊರಳಲ್ಲಿ ಹುಲಿ ಉಗುರು ಧರಿಸಿರೋ ಫೋಟೋಗಳು ವೈರಲ್​ ಆಗಿವೆ. ವೈರಲ್ ಆಗುತ್ತಿರೋ ಫೋಟೋಗಳು ಹಳೆಯದ್ದು. ಅದು ಹುಲಿಯ ಉಗುರಲ್ಲ, ಡ್ಯೂಪ್ಲಿಕೇಟ್ ಪೆಂಡೆಂಟ್ ಆಗಿದೆ. ನಾನು ಅದಕ್ಕೆ ಸುಮಾರು 2 ವರ್ಷಗಳವರೆಗೆ ಹಾಕಿಕೊಂಡಿದ್ದೇ. ಕಾಲ ಕ್ರಮೇಣ ಅದು ಕಂದು ಬಣ್ಣಕ್ಕೆ ತಿರುಗಿತ್ತು. ಹಾಗಾಗಿ ಅದನ್ನು ನಾನು ಎಸೆದಿದ್ದೇನೆ. ಇವತ್ತು ಸಾಮಾಜಿಕ ಜಾಲತಾಣದಲ್ಲಿ ಡ್ಯೂಪ್ಲಿಕೇಟ್ ಫೋಟೋ ವೈರಲ್​ ಆಗಿದೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಾನು ಧರಿಸಿದ್ದ ಹುಲಿ ಉಗುರು ಪೆಂಡೆಂಟ್​​ ಒರಿಜಿನಲ್​​ ಅಲ್ಲ, ಡೂಪ್ಲಿಕೇಟ್; ಧನಂಜಯ​ ಸ್ವಾಮೀಜಿ

https://newsfirstlive.com/wp-content/uploads/2023/10/danayaja.jpg

Load More