ಹುಲಿ ಉಗುರಿನ ಪೆಂಡೆಂಟ್ ಎಸೆದಿದ್ದೇನೆ ಎಂದಿರುವ ಧನಂಜಯ ಸ್ವಾಮೀಜಿ
ಧನಂಜಯ ಗುರೂಜಿ ಮೈ ತುಂಬಾ ಬಂಗಾರದ ಒಡವೆ ಧರಿಸಿದ ಪೋಟೋ
ಬಿದನಗೆರೆ ಸ್ವಯಂ ಘೋಷಿತ ಧನಂಜಯ ಗುರೂಜಿ ಅವರ ವಿಚಾರಣೆ
ತುಮಕೂರು: ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಬಳಿಕ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪೋಟೋಗಳು ಹಲವರಿಗೆ ಸಂಕಷ್ಟ ತಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಕುಣಿಗಲ್ ತಾಲೂಕಿನ ಬಿದನಗೆರೆ ಶನಿಮಹಾತ್ಮ ದೇವಾಲಯಕ್ಕೆ ಭೇಟಿ ನೀಡಿ ಶಾಕ್ ಕೊಟ್ಟಿದ್ದಾರೆ. ಸ್ವಯಂ ಘೋಷಿತ ಗುರೂಜಿ ಧನಂಜಯ ಸ್ವಾಮೀಜಿ ಅವರ ವಿಚಾರಣೆ ನಡೆಸಿರುವ ಅಧಿಕಾರಿಗಳು ಶನಿಮಹಾತ್ಮ ದೇವಾಲಯದಲ್ಲಿರುವ ವಸ್ತುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಹುಲಿ ಉಗುರು ಧರಿಸಿದ್ದಕ್ಕೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಬಂಧನವಾಗಿದೆ. ಇದಾದ ಬೆನ್ನಲ್ಲೇ ಬಿದನಗೆರೆ ಧನಂಜಯ ಸ್ವಾಮಿಗೂ ಸಂಕಷ್ಟ ಎದುರಾಗಿದೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಬಿದನಗೆರೆ ದೇವಾಲಯಾಕ್ಕೆ ತೆರಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ.
ಧನಂಜಯ ಗುರೂಜಿ ಚಿನ್ನದ ಚೈನ್‌ಗಳನ್ನು ಪರಿಶೀಲನೆ ಮಾಡಿರುವ ಅಧಿಕಾರಿಗಳು, ಟೇಬಲ್ ಮೇಲೆ ಧನಂಜಯ ಸ್ವಾಮಿಯ ಗೋಲ್ಡ್ ಚೈನ್‌ಗಳನ್ನಿರಿಸಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಧನಂಜಯ ಗುರೂಜಿ ಸ್ಥಳದಲ್ಲಿ ಹಾಜರು ಇದ್ದರು. ಹುಲಿ ಉಗುರಿನ ಕುರಿತು ಅಧಿಕಾರಿಯ ಮುಂದೆ ಧನಂಜಯಸ್ವಾಮಿ ಹೇಳಿಕೆ ನೀಡಿದ್ದಾರೆ. ಅದು ಅರ್ಟಿಫಿಶಿಯಲ್ ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು ಹೀಗಾಗಿ ಅದನ್ನ ಎಸೆದಿದ್ದೇನೆ ಎಂದಿದ್ದಾರೆ.
ಹುಲಿ ಉಗುರಿನ ಬಗ್ಗೆ ಧನಂಜಯಸ್ವಾಮಿ ಅವರ ಹೇಳಿಕೆಗೆ ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನ ಇಷ್ಟಕ್ಕೆ ಬಿಡಲ್ಲ. ಇಂದು ಮತ್ತೆ ನಮ್ಮ ಅಧಿಕಾರಿಗಳು ಬಿದನಗೆರೆಗೆ ತೆರಳುತ್ತಾರೆ. ಎಸೆದಿರುವ ಉಗುರಿನ ಬಗ್ಗೆ ತನಿಖೆ ಮಾಡಲಾಗುವುದು. ಅರ್ಟಿಫಿಶಿಯಲ್ ಉಗುರನ್ನ ಅವರಿಂದ ಪಡೆದು FSL ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇವತ್ತು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರ್ಟಿಫಿಶಿಯಲ್ ಹುಲಿ ಉಗರಿನ ಮೇಲೆ ಅನುಮಾನ
ಬಿದನಗೆರೆ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಸ್ವಾಮೀಜಿಯಾದ ಸ್ವಯಂ ಘೋಷಿತ ಧನಂಜಯ ಗುರೂಜಿ ಮೈ ತುಂಬಾ ಬಂಗಾರದ ಒಡವೆ ಧರಿಸುತ್ತಾರೆ. ಒಡವೆಗಳ ಜೊತೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಗುರೂಜಿ ಫೋಟೋ ವೈರಲ್ ಆಗಿತ್ತು. ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎಂಬುವವರು ಅರಣ್ಯ ಇಲಾಖೆಗೆ ದೂರು ನೀಡಿದ್ದು ವಿಚಾರಣೆ ನಡೆಸಲಾಗಿದೆ. ಮೈ ಮೇಲೆ ಕೆಜಿ ಗಟ್ಟಲೆ ಬಂಗಾರ ಧರಿಸಿರುವ ಗುರೂಜಿ ಅವರು ಆರ್ಟಿಫಿಶಿಯಲ್ ಹುಲಿ ಉಗರನ್ನ ಹೇಗೆ ಧರಿಸೋಕೆ ಸಾಧ್ಯ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ