ಹುಲಿ ಉಗುರಿನ ಪೆಂಡೆಂಟ್ ವಿವಾದ ರಾಜ್ಯಾದ್ಯಂತ ಸದ್ದು ಮಾಡಿತ್ತು
ಹುಲಿ ಪೆಂಡೆಂಟ್‌ನಿಂದ ಜೈಲು ಪಾಲಾಗಿದ್ದ ವರ್ತೂರು ಸಂತೋಷ್
ಹುಲಿ ಉಗುರಿನ ಗೋಲ್ಡ್ ಪೆಂಟೆಂಡ್ ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ?
ಬಿಗ್ ಬಾಸ್ ಸೀಸನ್ 11ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. 17 ಸ್ಪರ್ಧಿಗಳು ದೊಡ್ಮನೆ ಒಳಗೆ ಹೋದ ಮೊದಲ ದಿನವೇ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ ಸದ್ದು ಮಾಡಿದ್ದ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಮತ್ತೊಮ್ಮೆ ಸದ್ದು ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಚಿನ್ನದ ಸರದಾರ; ಯಾರಿವರು?
ಕಳೆದ ಒಂದು ವರ್ಷದ ಹಿಂದೆ ಬಿಗ್‌ಬಾಸ್ ಮನೆಯ ಹುಲಿ ಉಗುರಿನ ಪೆಂಡೆಂಟ್ ವಿವಾದ ಇಡೀ ರಾಜ್ಯಾದ್ಯಂತ ಹಲ್‌ಚಲ್ ಸೃಷ್ಟಿಸಿತ್ತು. ಹುಲಿ ಉಗುರಿನ ಪೆಂಡೆಂಟ್ ಇದ್ದ ಆರೋಪದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನ ಬಂಧಿಸಲಾಗಿತ್ತು. ಸೆರೆವಾಸ ಅನುಭವಿಸಿದ್ದ ವರ್ತೂರು ಸಂತೋಷ್ ಅವರು ಬಿಡುಗಡೆಯಾದ ಬಳಿಕ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ವರ್ತೂರ್ ಸಂತೋಷ್ ಬಳಿಕ ಹುಲಿ ಉಗುರಿನ ಅದೇ ಪೆಂಡೆಂಟ್ ಬಿಗ್ ಬಾಸ್ ಸೀಸನ್ 11ರ ಮತ್ತೊಬ್ಬ ಸ್ಪರ್ಧಿಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಈ ಬಾರಿಯೂ ಹುಲಿ ಉಗುರಿನ ಪೆಂಡೆಂಟ್ ಇಟ್ಟುಕೊಂಡ ಸ್ಪರ್ಧಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್ ಅವರು ಮೈ ತುಂಬಾ ಬಂಗಾರದ ಸರವನ್ನು ಧರಿಸಿಕೊಂಡು ಬಂದಿದ್ದಾರೆ. ಕೋಟಿ, ಕೋಟಿ ಬೆಲೆ ಬಾಳುವ ಚಿನ್ನದ ಸರದಲ್ಲಿ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ್ದಾರೆ. ಹುಲಿ ಉಗುರು ವಿನ್ಯಾಸದಲ್ಲಿರುವ ಗೋಲ್ಡ್ ಪೆಂಡೆಂಟ್ ಈಗ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.
ಇದನ್ನೂ ಓದಿ: BBK11: ಗೋಲ್ಡ್ ಸುರೇಶ್ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್; ಚಿನ್ನದ ಸರದಾರ ಹೇಳಿದ್ದೇನು?
ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರ ಇಂಟ್ರುಡ್ಯೂಕ್ಷನ್ ವಿಡಿಯೋದಲ್ಲೇ ಹುಲಿ ಉಗುರಿನ ಪೆಂಡೆಂಟ್ ಹೈಲೆಟ್ ಆಗಿದೆ. ವಿಟಿಯಲ್ಲಿ ಗೋಲ್ಡ್ ಸುರೇಶ್ ಅವರೇ ಹುಲಿ ಉಗುರು ವಿನ್ಯಾಸದಲ್ಲಿರುವ ಗೋಲ್ಡ್ ಪೆಂಡೆಂಟ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಹೀಗಾಗಿ ಗೋಲ್ಡ್ ಸುರೇಶ್ ಅವರು ಅದೇ ಗೋಲ್ಡ್ ಪೆಂಡೆಂಟ್ ಅನ್ನ ಬಿಗ್‌ಬಾಸ್ ಮನೆಗೆ ಹಾಕ್ಕೊಂಡು ಹೋಗಿದ್ದಾರಾ? ಹುಲಿ ಉಗುರಿನ ಗೋಲ್ಡ್ ಪೆಂಟೆಂಡ್ ಅವರ ಮನೆಯಲ್ಲಿ ಇದೆಯಾ? ಇದು ಅಸಲಿ ಹುಲಿ ಉಗುರೋ? ಫೈಬರ್ ಉಗುರೋ? ಗೊತ್ತಿಲ್ಲ. ಈ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಮಾಡಿದರೆ ಸತ್ಯಾಂಶ ತಿಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ