ಇಂದು ಅಧಿಕಾರಿಗಳ ಜೊತೆ ಅರಣ್ಯ ಸಚಿವ ಖಂಡ್ರೆ ಸಭೆ..!
ವನ್ಯಜೀವಿ ವಸ್ತುಗಳಿದ್ರೆ ಹಿಂದಿರುಗಿಸುವಂತೆ ಸೂಚನೆಗೆ ಚಿಂತನೆ
ಸರ್ಕಾರದ ಮನವಿಗೂ ಬೆಲೆ ಕೊಡದಿದ್ರೆ ಶಿಕ್ಷೆಗೆ ಒಳಗಾಗಬೇಕಾಗುತ್ತೆ!
ಬೆಂಗಳೂರು: ಕಳೆದೊಂದು ವಾರದಿಂದ ಕರುನಾಡಿನಲ್ಲಿ ಹುಲಿ ಉಗುರಿನ ಗದ್ದಲ ಜೋರಾಗಿದೆ. ವರ್ತೂರು ಸಂತೋಷ್ ಬಂಧನದ ಬಳಿಕ, ಹುಲಿ ಉಗುರಿನ ಪೆಂಡೆಂಟ್ ಇಟ್ಟಿರುವ ಪ್ರಭಾವಿಗಳಿಗೂ ಸಂಕಷ್ಟ ಎದುರಾಗಿತ್ತು. ಅವರನ್ನು ಬಂಧಿಸಿ ಎಂದು ಜನರು ಆಕ್ರೋಶ ಹೊರಹಾಕಿದ್ದರು. ಇದರಿಂದ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಕೊನೆಗೂ ಸರ್ಕಾರ ಹುಲಿ ಉಗುರಿನ ವಿವಾದಕ್ಕೆ ಇತಿಶ್ರೀ ಹೇಳಲು ಮುಂದಾಗಿದೆ.
ಹುಲಿ ಉಗುರು ವಿವಾದಕ್ಕೆ ಅಂತ್ಯ ಹಾಡಲು ಮುಂದಾದ ಸರ್ಕಾರ?
2 ತಿಂಗಳೊಳಗೆ ವನ್ಯಜೀವಿಗಳ ವಸ್ತು ಒಪ್ಪಿಸಲು ಸೂಚನೆ ಸಾಧ್ಯತೆ
ಬಿಗ್ಬಾಸ್ ಮನೆಯಿಂದ ಶುರುವಾದ ಹುಲಿ ಉರುಗು ಗದ್ದಲ ಇಡೀ ರಾಜ್ಯವನ್ನೇ ಆವರಿಸಿದೆ. ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕೆ ಬಾಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದು, ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಅಷ್ಟೇ ಅಲ್ಲ, ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ತಂದಿತ್ತು. ಧರ್ಮದ ಸ್ವರೂಪವನ್ನು ಪಡೆದುಕೊಂಡಿತ್ತು. ಈ ಎಲ್ಲ ವಿವಾದಗಳಿಗೂ ತೆರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. ವರ್ತೂರು ಸಂತೋಷ್ ಬಂಧನದ ಬಳಿಕ, ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಸೆಲೆಬ್ರೆಟಿಗಳು, ಆಡಳಿತ ಪಕ್ಷದ ಸಚಿವರ ಮಕ್ಕಳು. ವಿರೋಧ ಪಕ್ಷಗಳ ನಾಯಕರ ಫೋಟೋಗಳು ವೈರಲ್ ಆಗಿದ್ದವು. ಹಾಗೂ ಸೆಲೆಬ್ರೆಟಿಗಳ ವಿಚಾರದಲ್ಲಿ ಅರಣ್ಯಾಧಿಕಾರಿಗಳು ಅನುಸರಿಸಿದ ನಡೆ, ಜನಾಕ್ರೋಶಕ್ಕೆ ಕಾರಣವಾಗಿತ್ತು.
ಪ್ರತಿನಿತ್ಯವೂ ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗಿದ್ವು. ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯವಾಣಿಗೆ ದಿನ ನಿತ್ಯ ನೂರಾರು ಕರೆಗಳು ಬರುತ್ತಿದ್ವು. ಇದರಿಂದ ಅಧಿಕಾರಿಗಳಷ್ಟೇ ಅಲ್ಲ, ಸರ್ಕಾರಕ್ಕೂ ನುಂಗಲಾದ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಈ ಎಲ್ಲ ಗದ್ದಲ, ಗೊಂದಲಗಳಿಗೂ ತೆರೆ ಎಳೆಯಲು ಸರ್ಕಾರ ಮಧ್ಯ ಪ್ರವೇಶಿಸಿದೆ. ವರ್ತೂರು ಸಂತೋಷ್ ಅವರ ಬಂಧನಕ್ಕೂ ಮುನ್ನ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಯಾವುದೇ ಸಾರ್ವಜನಿಕ ಜಾಗೃತಿ ಇರಲಿಲ್ಲ. ಈ ಬೆಳವಣಿಗೆಯ ನಂತರ, ಜನರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಬಂದಿದೆ. ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 2022ರ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.
ಇನ್ನು, ವನ್ಯಜೀವಿಗಳ ವಸ್ತುಗಳು ಇದ್ರೆ, 2 ತಿಂಗಳಲ್ಲಿ ವಾಪಸ್ ಕೊಡಬೇಕು ಎನ್ನುವ ಪ್ರಸ್ತಾವನೆ ಇದೆ. ಈ ಬಗ್ಗೆ ಇಂದು ಅಧಿಕಾರಿಗಳ ಜೊತೆ ಚರ್ಚೆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವರು ಹೇಳಿದ್ದಾರೆ.
ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಕುರಿತು ಸಿಎಂ ಸಿದ್ದರಾಮಯ್ಯನವರ ಜೊತೆ ಮಾತಾಡುತ್ತೇವೆ. ಮನೆಯಲ್ಲಿ ವನ್ಯ ಜೀವಿಗಳ ಕೊಂಬು, ಚರ್ಮ ಇಟ್ಟುಕೊಳ್ಳುವಂತಿಲ್ಲ. 2 ತಿಂಗಳಲ್ಲಿ ವಾಪಸ್ ಕೊಡಬೇಕು ಎನ್ನುವ ಪ್ರಸ್ತಾವನೆ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು-ಈಶ್ವರ್ ಖಂಡ್ರೆ, ಅರಣ್ಯ ಸಚಿವ
ಒಟ್ಟಾರೆಯಾಗಿ ವನ್ಯ ಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ಎಲ್ಲರೂ ಕಾನೂನಿಗೆ ತಲೆ ಬಾಗಲೇ ಬೇಕು. ತಿಳಿದೋ ತಿಳಿಯದೆಯೋ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳು ಮನೆಗಳಲ್ಲಿ ಇದ್ರೆ, ಸರ್ಕಾರದ ವಶಕ್ಕೆ ನೀಡಿ ಇಲ್ಲದಿದ್ರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ