newsfirstkannada.com

Watch: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಭಯ ಹುಟ್ಟಿಸಿದ ಹುಲಿರಾಯ; ವಾಹನ ಸವಾರರ ಕಂಡು ಗದರಿದ ವ್ಯಾಘ್ರ..!

Share :

31-08-2023

  ಹುಲಿ ಆರ್ಭಟ ಕಂಡು ಒಂದು ಕ್ಷಣ ದಂಗಾದ ಸವಾರ

  ಕಾರು ಹತ್ತಿರ ಬಂದರೂ ಓಡಿ ಹೋಗದ ಹುಲಿರಾಯ

  ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಘಟನೆ

ಉತ್ತರ ಕನ್ನಡ ಜಿಲ್ಲೆಯ ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿಯೇ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಬೃಹತ್ ಹುಲಿಯೊಂದು ಕಾಣಿಸಿಕೊಂಡಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಉದ್ಯೋಗಿಯೊಬ್ಬರಿಗೆ ಈ ಹುಲಿ ಕಾಣಿಸಿಕೊಂಡಿದೆ. ಎನ್ ಪಿಸಿಎಲ್ ಉದ್ಯೋಗಿ ಕೈಗಾ ಕಡೆಗೆ ಬರುತ್ತಿದ್ದಾಗ ಯಲ್ಲಾಪುರದ ರಸ್ತೆಯಲ್ಲಿ ದೊಡ್ಡ ಹುಲಿ ಎದುರಾಗಿದೆ.

ಈ ವೇಳೆ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಕಾರಿನ ಸಮೀಪದಲ್ಲೇ ಇದ್ದ ಹುಲಿಯ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ದೃಶ್ಯವನ್ನು ಸುಭಾಶ್​ಚಂದ್ರ ಅನ್ನೋರು ತಮ್ಮ ವೈಯಕ್ತಿಕ ಜಾಲತಾಣ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಎನ್ ಟಿಪಿಸಿಯ ಉದ್ಯೋಗಿಯೋರ್ವರು ಹತ್ತಿರದಿಂದ ಹುಲಿಯ ದೃಶ್ಯವನ್ನು ಸೆರೆಹಿಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಪ್ರದೇಶ ಬರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಭಯ ಹುಟ್ಟಿಸಿದ ಹುಲಿರಾಯ; ವಾಹನ ಸವಾರರ ಕಂಡು ಗದರಿದ ವ್ಯಾಘ್ರ..!

https://newsfirstlive.com/wp-content/uploads/2023/08/TIGER.jpg

Load More