ಕಿಡ್ನಾಪ್ ಆಗಿದ್ದ ಟಿಕ್ ಟಾಕ್ ಸ್ಟಾರ್ ಶವ ಮೈಸೂರಲ್ಲಿ ಪತ್ತೆ
ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ವೇಳೆ ಕಿಡ್ನಾಪ್ ಆಗಿದ್ದ
ಮೃತ ನವೀನ್ ಕೆಲ ದಿನಗಳ ಹಿಂದೆ ಜೈಲಿಗೂ ಕೂಡ ಹೋಗಿದ್ದ
ಮೈಸೂರು: ಬೆಂಗಳೂರು ಮೂಲದ ಟಿಕ್ಟಾಕ್ ಸ್ಟಾರ್ ಮೈಸೂರಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಈ ಕೊಲೆ ಸಂಬಂಧ ಮೈಸೂರು ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನವೀನ್ ಮೃತ ಟಿಕ್ಟಾಕ್ ಸ್ಟಾರ್.
ಮೃತ ನವೀನ್ ಇದೇ ತಿಂಗಳು ಆಗಸ್ಟ್ 27ರಂದು ಇಬ್ಬರು ಯುವತಿಯರ ಜತೆ ಮೈಸೂರಿಗೆ ಹೋಗಿದ್ದ. ಬಳಿಕ ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಆತನನ್ನು ಅಪಹರಣ ಮಾಡಿದ್ದರು. ಇದಾದ ಬಳಿಕ ನವೀನ್ ಮೃತದೇಹ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಪತ್ತೆಯಾಗಿತ್ತು. ಮೊದ ಮೊದಲು ಗುರುತು ಪತ್ತೆಯಾಗದಿದ್ದಕ್ಕೆ ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪತ್ತೆಯಾದ ಶವ ಟಿಕ್ ಟಾಕ್ ಸ್ಟಾರ್ ನವೀನ್ ಅವರದ್ದೇ ಎಂದು ಗುರುತಿಸಲಾಗಿದೆ.
View this post on Instagram
ಬೆಂಗಳೂರಿನ ಕಾರ್ಪೋರೇಟರ್ ಅಣ್ಣನ ಮಗನ ಕೊಲೆ ರಿವೆಂಜ್ಗಾಗಿ ನವೀನ್ನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್ ಆರೋಪಿಯಾಗಿದ್ದ. ಈ ಸಂಬಂಧ ಟಿಕ್ ಟಾಕ್ ಸ್ಟಾರ್ ಜೈಲಿಗೂ ಹೋಗಿದ್ದ. ನವೀನ್ ಕೆಲ ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ. ಸದ್ಯ ಈ ಕೇಸ್ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ