newsfirstkannada.com

ಬ್ಯಾಟ್​ ಕೊಳ್ಳಲು ದುಡ್ಡಿಲ್ಲ, ನಿತ್ಯ 40 Km ಜರ್ನಿ.. ತಿಲಕ್ ವರ್ಮಾಗಾಗಿ ಕೋಚ್ ಮಾಡಿದ್ರು ಸೂಪರ್​ ಪ್ಲಾನ್

Share :

10-07-2023

  ತಿಲಕ್ ವರ್ಮಾ​ ಲೈಫ್​​ ಬದಲಿಸಿತು ಕೋಚ್​​​​ ಹೇಳಿದ ಒಂದು ಮಾತು

  ಬ್ಯಾಟ್​ ಖರೀದಿಗೆ ದುಡ್ಡು ಇರಲಿಲ್ಲ ಎಂದಾಗ ಕೋಚ್​ ಪ್ಲಾನ್ ಕೊಟ್ರು

  ತಿಲಕ್​ ಆಟದಲ್ಲಿ ಅಂಥದ್ದೇನಿತ್ತೆಂದು ಕೋಚ್​ ಸೆಲೆಕ್ಟ್ ಮಾಡಿದ್ರು ಗೊತ್ತಾ?

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ತಿಲಕ್ ವರ್ಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಸಿಕ್ಕಾಪಟ್ಟೆ ಎಕ್ಸ್​ಪೆಕ್ಟೇಶನ್ ಬಿಲ್ಡ್​ ಮಾಡಿರುವ ಈ ಆಟಗಾರನ ಕ್ರಿಕೆಟ್​ ಜರ್ನಿನೇ ಒಂದು ಬಲು ರೋಚಕ. ಕ್ರಿಕೆಟರ್​​ ಆಗಬೇಕೆಂಬ ಕನಸು ಕಂಡ 10 ವರ್ಷದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ತಿಲಕ್​ ವರ್ಮಾ ಸಾಗಿ ಬಂದ ಕಲ್ಲು-ಮುಳ್ಳಿನ ಹಾದಿ ಹೇಗಿತ್ತು..?

‘ಭಾರತದ ಫ್ಯೂಚರ್​​​ ಸ್ಟಾರ್​​ ಎಲ್ಲಾ ಮಾದರಿಗೆ ಸೂಕ್ತ ಬ್ಯಾಟ್ಸ್​ಮನ್​​’

ವರ್ಷಾರಂಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ಹಾಗೂ ದಿಗ್ಗಜ ಬ್ಯಾಟ್ಸ್​​ಮನ್ ಸುನೀಲ್ ಗವಾಸ್ಕರ್​ ಯಂಗ್​ಗನ್​​ ತಿಲಕ್ ವರ್ಮಾ ಬಗ್ಗೆ ಆಡಿದ ಮಾತುಗಳಿವು. ಸದ್ಯ ಇವರು ಹೇಳಿದ್ದು ನಿಜವಾಗಿದೆ. 2023ನೇ ಐಪಿಎಲ್​​ನಲ್ಲಿ 343 ರನ್​ ಚಚ್ಚಿದ ಫೈರಿ ಲೆಫ್ಟಿ ಬ್ಯಾಟ್ಸ್​​ಮನ್​​ ತಿಲಕ್ ವರ್ಮಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರೋ ವೆಸ್ಟ್​ಇಂಡೀಸ್ ಎದುರಿನ ಟಿ20 ಸರಣಿಗೆ ತಿಲಕ್​ ಸೆಲೆಕ್ಟ್​ ಆಗಿದ್ದು, ಭಾರತ ಪರ ಆಡುವ ಬಿಗ್ ಡ್ರೀಮ್​ ನನಸಾಗುವ ಕಾಲ ಬಂದಿದೆ.

11ನೇ ವರ್ಷಕ್ಕೆ ಟೆನಿಸ್​ ಬಾಲ್​ ಆಡಿ 20ಕ್ಕೆ ಭಾರತಕ್ಕೆ ಸೆಲೆಕ್ಟ್​​​..!

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯು ಮಾಡಲು ಸಜ್ಜಾಗಿರೋ ತಿಲಕ್ ವರ್ಮಾರ ಕ್ರಿಕೆಟ್​ ಜರ್ನಿ ಶುರುವಾಗಿದ್ದೇ 11ನೇ ವರ್ಷಕ್ಕೆ. ಟೈಮ್​​ಪಾಸ್​ಗಾಗಿ ಫ್ರೆಂಡ್ಸ್ ಜೊತೆ ಟೆನಿಸ್ ಕ್ರಿಕೆಟ್​​​ ಆಡ್ತಿದ್ದ ತಿಲಕ್​​ ಒಮ್ಮೆ ಕೋಚ್​​​​ ಸಲಾಮ್​ ಬಯಾಶ್​​​ ಕಣ್ಣಿಗೆ ಬೀಳ್ತಾರೆ. ತಿಲಕ್​ರ ಬ್ಯಾಟಿಂಗ್​ ಸ್ಟ್ರೈಲ್​​​​​​​ಗೆ ಫಿದಾ ಆದ ಕೋಚ್, ಕೂಡಲೇ ಅವರ ತಂದೆಗೆ ಫೋನ್ ಮಾಡಿ ತಿಲಕ್​ರನ್ನ ತಮ್ಮ ಅಕಾಡೆಮಿಗೆ ಕಳುಹಿಸುವಂತೆ ಮನವಿ ಮಾಡಿಕೊಳ್ತಾರೆ. ಆಗ ತಿಲಕ್ ತಂದೆ ಆನ್ಸರ್​​​ ಕೇಳಿ ಕೋಚ್​​​ ಸಲಾಮ್​ ಬಯಾಶ್​ ಒಂದು ಕ್ಷಣ ಶಾಕ್ ಆಗಿ ಬಿಡ್ತಾರೆ.

ಮಗನ ಮಹಾದಾಸೆಗೆ ತಂದೆಯೇ ಅಡ್ಡಗಾಲು.!

ಕೋಚ್​​​​​​ ಸಲಾಮ್ ಬಯಾಶ್ ಏನೋ ತಿಲಕ್ ವರ್ಮಾಗೆ ಕ್ರಿಕೆಟ್​​ ಆಸೆಯನ್ನ ಹುಟ್ಟಿಸ್ತಾರೆ. ಆದ್ರೆ ತಿಲಕ್ ತಂದೆ ನಂಬೂರಿ ನಾಗರಾಜು ಮಗನನ್ನ ಕ್ರಿಕೆಟರ್ ಮಾಡಲು ಒಪ್ಪಲ್ಲ. ಯಾಕಂದ್ರೆ ನಂಬೂರಿ ನಾಗರಾಜು ಓರ್ವ ಸಾಮಾನ್ಯ ಎಲಿಕ್ಟ್ರಿಶಿಯನ್. ಸಣ್ಣ ದುಡಿಮೆ. ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು. ಆದ್ರೆ, ಕೋಚ್​​ ಹೇಳಿದ ಆ ಒಂದು ಧೈರ್ಯ ಮಾತು ತಿಲಕ್​​​ ಕ್ರಿಕೆಟರ್ ಆಗುವ ಕನಸಿಗೆ ರೆಕ್ಕೆಪುಕ್ಕ ಕಟ್ಟಿತು.

‘ತಿಲಕ್ ತಂದೆ ಆರಂಭದಲ್ಲಿ ಒಪ್ಪಿರಲಿಲ್ಲ’

ಹಣಕಾಸಿನ ತೊಂದರೆಯಿಂದ ತಿಲಕ್ ವರ್ಮಾ ತಂದೆ ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲ. ಯಾಕಂದ್ರೆ, ನನ್ನ ಕೋಚಿಂಗ್​ ಸೆಂಟರ್​​ 40 ಕಿಲೋ ಮೀಟರ್​ ದೂರದಲ್ಲಿತ್ತು. ಆದ್ರೆ, ಅವರ ಮನೆ ನಾನಿರುವ ಜಾಗದಿಂದ 2 ಕಿ.ಮೀ ದೂರದಲ್ಲಿತ್ತು. ಹೀಗಾಗಿ ತಿಲಕ್​​​ರ ಸಾರಿಗೆ ವೆಚ್ಚದ ಜವಾಬ್ದಾರಿ ನಾನೇ ವಹಿಸುಕೊಳ್ಳುವೆ. ನಿಮಗೆ ಪಿಕ್ ಅಪ್​​​ ಮತ್ತು ಡ್ರಾಪ್​​​​ ಸಮಸ್ಯೆ ಇರಲಾರದು. ಜೊತೆಗೆ ಅವನ ಶುಲ್ಕವನ್ನ ನಾನೇ ಭರಿಸುವೆ ಎಂದು ಹೇಳಿದೆ. ಕೊನೆಗೆ ತಿಲಕ್ ವರ್ಮಾ ತಂದೆ ಒಪ್ಪಿಕೊಂಡರು.

ಸಲಾಮ್​​​ ಬಯಾಶ್​​, ತಿಲಕ್ ವರ್ಮಾ ಕೋಚ್​

ನಿತ್ಯ 40 ಕಿ.ಮೀ ಪ್ರಯಾಣ.. ಬೈಕ್​​ನಲ್ಲೇ ತಿಲಕ್​ ನಿದ್ರೆ..!

ಸಲಾಮ್​ ಬಯಾಶ್​ ಅವರ ಗರಡಿಯಲ್ಲಿ ಬೆಳೆದ ತಿಲಕ್ ವರ್ಮಾಗೆ ಆರಂಭದಲ್ಲಿ ಪ್ರಯಾಣವೇ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಲಿಂಗಂಪಳ್ಳಿ ಟ್ರೈನಿಂಗ್ ಅಕಾಡೆಮಿ ತಿಲಕ್ ಮನೆಯಿಂದ 40 ಕಿ.ಮೀ ದೂರದಲ್ಲಿತ್ತು. ಬೆಳಗ್ಗೆ 5 ಗಂಟೆಗೆ ಎದ್ದು ಕೋಚ್​​​ ಜೊತೆ ಬೈಕ್​​ನಲ್ಲಿ ತೆರಳುತ್ತಿದ್ದ ತಿಲಕ್​​​ ಅದೆಷ್ಟೋ ಬಾರಿ ರೈಡಿಂಗ್ ವೇಳೆನೆ ನಿದ್ರಿಸಿದ ಉದಾಹರಣೆಗಳಿವೆ.

‘ಬೈಕ್​​​​ನಲ್ಲಿ ತಿಲಕ್ ವರ್ಮಾ ನಿದ್ರಿಸುತ್ತಿದ್ದರು’

ನನ್ನ ಹಿಂದೆ ಕುಳಿತುಕೊಳ್ಳುತ್ತಿದ್ದ ತಿಲಕ್ ವರ್ಮಾ ಕೆಲವೊಮ್ಮೆ ನಿದ್ರಿಸುತ್ತಿದ್ದರು. ಹಾಗಾಗಿ ನಾನು ಬಹಳ ಎಚ್ಚರಿಕೆಯಿಂದ ಬೈಕ್​ ಚಲಿಸುತ್ತಿದ್ದೆ. ಎಷ್ಟೋ ಬಾರಿ ಗಾಡಿ ನಿಲ್ಲಿಸಿ, ಮುಖ ತೊಳೆಸಿಕೊಂಡು ಕರ್ಕೊಂಡು ಹೋಗಿದ್ದೇನೆ.

ಸಲಾಮ್​​​ ಬಯಾಶ್​​, ತಿಲಕ್ ವರ್ಮಾ ಕೋಚ್

ಬ್ಯಾಟ್​ ಕೊಳ್ಳಲು ದುಡ್ಡಿಲ್ಲ.. ಕೋಚ್ ಮಾಡಿದ್ರು ಸೂಪರ್​ ಪ್ಲಾನ್
​​
ಕಡು ಬಡತನದಲ್ಲಿ ಬೆಳೆದ ತಿಲಕ್ ವರ್ಮಾಗೆ ಆರಂಭದಲ್ಲಿ ಒಂದು ಬ್ಯಾಟ್ ಕೊಳ್ಳಲು ದುಡ್ಡಿರ್ಲಿಲ್ಲ. ಆಗ ಕೋಚ್​​ ಒಂದು ಸೂಪರ್ ಪ್ಲಾನ್​​ ಮಾಡಿದ್ರು. ಅದೇನಂದ್ರೆ ಟೂನರ್ಮೆಂಟ್​​ಗಳಲ್ಲಿ ನೀನು ಸೆಂಚುರಿ ಹೊಡೆದ್ರೆ ಬ್ಯಾಟ್​​​​ ಕೊಡಿಸುವೆ ಎಂದು ಹೇಳಿದ್ರು. ಸಲಾಂ ಬಯಾಶ್​ ಇಷ್ಟು ಹೇಳಿದ್ದೇ ತಡ ವಿಜಯ್ ಮರ್ಚಂಟ್​​​​​​​ ಟ್ರೋಫಿಯಲ್ಲಿ 900 ರನ್​ ಚಚ್ಚಿ ಹೈದ್ರಾಬಾದ್​​​ ರಣಜಿ ತಂಡದಲ್ಲಿ ಸ್ಥಾನ ಪಡೆದ್ರು. ಬಳಿಕ ಐಪಿಎಲ್​​ನಲ್ಲಿ ರನ್​ ಭರಾಟೆ. ಅಲ್ಲಿಂದ ಸೀದಾ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ.

20ರ ತಿಲಕ್ ವರ್ಮಾ ಬೆಂಕಿಯಲ್ಲಿ ಅರಳಿದ ಹೂವು ಅನ್ನೋದ್ರಲ್ಲ ಎರಡು ಮಾತಿಲ್ಲ. ಕಲ್ಲು ಮುಳ್ಳಿನ ಹಾದಿ ಸವೆದಿರೋ ಲೆಫ್ಟಿ ಬ್ಯಾಟ್ಸ್​​ಮನ್​ ಟೀಮ್​​ ಇಂಡಿಯಾದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಲಿ. ತಿವಿಕ್ರಮನಾಗಿ ಮೆರೆದಾಡಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬ್ಯಾಟ್​ ಕೊಳ್ಳಲು ದುಡ್ಡಿಲ್ಲ, ನಿತ್ಯ 40 Km ಜರ್ನಿ.. ತಿಲಕ್ ವರ್ಮಾಗಾಗಿ ಕೋಚ್ ಮಾಡಿದ್ರು ಸೂಪರ್​ ಪ್ಲಾನ್

https://newsfirstlive.com/wp-content/uploads/2023/07/TILAK_VARMA.jpg

Load More