newsfirstkannada.com

ವಿಶ್ವಕಪ್ ವೇದಿಕೆಯಲ್ಲಿ ‘ಟೈಮ್ಡ್​ ಔಟ್’ ವಿವಾದ; ಏನ್ ಹೇಳುತ್ತದೆ ಐಸಿಸಿ ನಿಯಮ..?

Share :

07-11-2023

    ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯದ ವೇಳೆ ಹೈಡ್ರಾಮಾ

    146 ವರ್ಷಗಳ ಬಳಿಕ ಟೈಮ್ಡ್​ ಔಟ್ ನಿಯಮಕ್ಕೆ ಬಲಿ

    ಲಂಕಾದ ಏಂಜೆಲೋ ಮ್ಯಾಥ್ಯೂಸ್​ ಟೈಮ್ಡ್​ ಔಟ್

ಬರೋಬ್ಬರಿ 146 ವರ್ಷಗಳ ಬಳಿಕ ಕ್ರಿಕೆಟ್ ಆಟಗಾರನೊಬ್ಬ ಐಸಿಸಿ ಟೈಮ್ಡ್​ ಔಟ್ ನಿಯಮಕ್ಕೆ ಔಟ್ ಆಗಿದ್ದಾರೆ. ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಈ ಪ್ರಹಸನಕ್ಕೆ ಕಾರಣವಾಗಿದ್ದು, ಲಂಕಾ ತಂಡದ ಆಲ್​​ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಟೈಮ್ಡ್​ ಔಟ್ ಆದ ಕ್ರಿಕೆಟಿಗ!

ಏನ್ ಹೇಳುತ್ತೆ ಕ್ರಿಕೆಟ್ ನಿಯಮ..?

ಒಬ್ಬ ಬ್ಯಾಟರ್​ ಗಾಯಗೊಂಡು ಅಥವಾ ಔಟ್ ಆದ ನಂತರ ಕ್ರೀಸ್​ನಿಂದ ನಿರ್ಗಮಿಸಿದ 2 ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಆಟಗಾರ ಕ್ರೀಸ್​ಗೆ ಬಂದು ಆಟ ಆರಂಭಿಸಬೇಕು. ಕ್ರೀಸ್​ಗೆ ಬಂದ ಆಟಗಾರ ಗಾರ್ಡ್​ ತೆಗೆದುಕೊಂಡು ಎಸೆತ ಎದುರಿಸಲು ಸಿದ್ಧರಾಗಬೇಕು. ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ನ (40.1.1)ರ ನಿಯಮವಾಗಿದೆ. ಅಲ್ಲದೇ 40.1.2 ನಿಯಮದ ಪ್ರಕಾರ ಬ್ಯಾಟರ್ ಕ್ರೀಸ್​ಗೆ ಬರುವುದು ವಿಳಂಬವಾದರೆ ಅಂಪೈರ್​ಗಳು 16.3 ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ. ಇಂತಹದೊಂದು ಘಟನೆ ಈ ಹಿಂದೆ ದೇಶಿಯ ಕ್ರಿಕೆಟ್​ನಲ್ಲಿ ನಡೆದಿತ್ತು. 1997ರಲ್ಲಿ ಕಟಕ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ತ್ರಿಪುರಾ ಮತ್ತು ಒಡಿಶಾ ನಡುವಣ ಪಂದ್ಯದಲ್ಲಿ ಹೇಮುಲಾಲ್ ಅವರು ಈ ರೀತಿ ಔಟ್ ಆಗಿದ್ದರು.

View this post on Instagram

A post shared by ICC (@icc)

ನಿನ್ನೆಯ ಪಂದ್ಯದಲ್ಲಿ ಆಗಿದ್ದೇನು..?

ಲಂಕಾ ತಂಡದ ಸುದೀರ್ ಸಮರವಿಕ್ರಮ ಔಟ್ ಆದ ನಂತರ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಏಂಜೆಲೋ ಮ್ಯಾಥ್ಯೂಸ್ ಕ್ರೀಸ್​ಗೆ ಬಂದಿದ್ದರು. ಕ್ರೀಸ್​ಗೆ ಬರುತ್ತಿದ್ದಂತೆಯೇ ತಾವು ತಂದಿದ್ದ ಹೆಲ್ಮೆಟ್ ಹರಿದು ಹೋಗಿರೋದನ್ನು ಗಮನಿಸುತ್ತಾರೆ. ಕೂಡಲೇ ಮ್ಯಾಥ್ಯೂಸ್​, ಡಕೌಟ್​​ನಲ್ಲಿದ್ದ ಆಟಗಾರರಿಗೆ ಹೆಲ್ಮೆಟ್ ತರುವಂತೆ ಸೂಚನೆ ನೀಡುತ್ತಾರೆ. ಹೆಲ್ಮೆಟ್ ಕ್ರೀಸ್​ಗೆ ಬರುವಷ್ಟರಲ್ಲಿ ಸಮಯ ಮಿತಿ ಮೀರುತ್ತದೆ. ಇದನ್ನು ಗಮನಿಸಿದ ಬಾಂಗ್ಲಾದೇಶದ ಆಟಗಾರರು, ಟೈಮ್ಡ್​ ಔಟ್​​ಗೆ ಮನವಿ ಮಾಡಿಕೊಳ್ಳುತ್ತಾರೆ.

ಅಂಪೈರ್​ಗಳಾದ ಮರಾಯಿಸ್ ಎರಸ್ಮಸ್ ಮತ್ತು ರಿಚರ್ಡ್​ ಇಲಿವಿಂಗ್ ವರ್ಥ್​ ಅವರು ಐಸಿಸಿ ಕ್ರಿಕೆಟ್ ನಿಯಮದಂತೆ ಮ್ಯಾಥ್ಯೂಸ್ ಔಟ್ ಎಂದು ತೀರ್ಪು ನೀಡುತ್ತಾರೆ. ಪರಿಣಾಮ ಮ್ಯಾಥ್ಯೂಸ್ ಒಂದೂ ಬಾಲ್ ಆಡದೇ ಔಟ್ ಆಗಬೇಕಾಯಿತು. ಇದರಿಂದ ಮುನಿಸಿಕೊಂಡ 36 ವರ್ಷದ ಲಂಕಾ ಆಟಗಾರ, ಅಂಪೈರ್ ಜೊತೆ ವಾಗ್ವಾದ ನಡೆಸಿದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್ ವೇದಿಕೆಯಲ್ಲಿ ‘ಟೈಮ್ಡ್​ ಔಟ್’ ವಿವಾದ; ಏನ್ ಹೇಳುತ್ತದೆ ಐಸಿಸಿ ನಿಯಮ..?

https://newsfirstlive.com/wp-content/uploads/2023/11/TIMED-OUT.jpg

Load More