newsfirstkannada.com

3ನೇ ಬಾರಿಯೂ ನರೇಂದ್ರ ಮೋದಿಗೆ ಪ್ರಧಾನಿ ಪಟ್ಟ?; ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲೋದೆಷ್ಟು?

Share :

01-07-2023

    ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಪಕ್ಷ ಎಷ್ಟು ಸೀಟು ಗೆಲ್ಲುತ್ತೆ?

    ಕರ್ನಾಟಕದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದ ಕಾಂಗ್ರೆಸ್ ಗೆಲ್ಲೋದೆಷ್ಟು ಸ್ಥಾನ?

    ಯಾವ್ಯಾವ ರಾಜ್ಯದಲ್ಲಿ NDA, UPA, ಇತರೆ ಪಕ್ಷಗಳ ಪವರ್ ಹೇಗಿದೆ

ರಾಷ್ಟ್ರ ರಾಜಕಾರಣ 2024ರ ಲೋಕಸಭಾ ಚುನಾವಣೆಗೆ ಸದ್ದಿಲ್ಲದೇ ಸಜ್ಜಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಎಲೆಕ್ಷನ್‌ಗೆ ಬ್ರಹ್ಮಾಸ್ತ್ರಗಳನ್ನು ರೆಡಿ ಮಾಡಿಕೊಳ್ಳುತ್ತಿವೆ. ಚುನಾವಣಾ ಕಣ ರಂಗೇರುವುದಕ್ಕೂ ಮೊದಲೇ ಯಾರ್ ಗೆಲ್ತಾರೆ? ಯಾರ್‌ ಸೋಲ್ತಾರೆ ಅನ್ನೋ ಲೆಕ್ಕಾಚಾರ ಹಾಕಲಾಗಿದೆ.

ಲೋಕಸಭಾ ಎಲೆಕ್ಷನ್‌ಗೆ ಅಖಾಡ ಸಜ್ಜುಗೊಳ್ಳುತ್ತಿರುವಾಗಲೇ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವೊಂದು ಹೊರ ಬಿದ್ದಿದೆ. ಈಗ ಲೋಕಸಭಾ ಚುನಾವಣೆ ನಡೆದರೆ ಯಾವ, ಯಾವ ಪಕ್ಷಗಳಿಗೆ ಎಷ್ಟು ಕ್ಷೇತ್ರದಲ್ಲಿ ಗೆಲುವು ಸಿಗಲಿದೆ ಅನ್ನೋದು ಕುತೂಹಲಕಾರಿಯಾಗಿದೆ.

ಟೈಮ್ಸ್ ನೌ- ETG ದೇಶಾದ್ಯಂತ ಸರ್ವೇ ನಡೆಸಿದ್ದು ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಟೈಮ್ಸ್ ನೌ- ETG ಸರ್ವೇ ಪ್ರಕಾರ ಬಿಜೆಪಿ ಮೈತ್ರಿಕೂಟ NDAಗೆ 285-325 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಮೈತ್ರಿಕೂಟ- 111-149 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಇತರೆ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು 91-125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಟೈಮ್ಸ್ ನೌ- ETG ಸರ್ವೇ

  • ಎನ್‌ಡಿಎ+ 285-325
  • ಯುಪಿಎ+ 111-149
  • ಟಿಎಂಸಿ 20-22
  • YSRCP 24-25
  • ಬಿಜೆಡಿ 12-14
  • ಬಿಆರ್‌ಎಸ್‌ 9-11
  • ಎಎಪಿ 4-7
  • ಎಸ್‌ಪಿ 4-8
  • ಇತರೆ 18-38

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಂಪರ್‌ ಗ್ಯಾರಂಟಿ
ಇತರೆ ರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಯಾಱರು ಎಷ್ಟು ಸೀಟ್ ಗೆಲ್ಲಬಹುದು ಅಂತಾ ನೋಡೋದಾದ್ರೆ. ಟೈಮ್ಸ್ ನೌ- ETG ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 15-17 ಕ್ಷೇತ್ರವನ್ನು ಗೆಲ್ಲಬಹುದು ಎನ್ನಲಾಗಿದೆ. ಅಚ್ಚರಿಯಂದ್ರೆ 2019ರಲ್ಲಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್ ಈ ಬಾರಿ 10-12 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆ ಎಂದು ಸಮೀಕ್ಷೆ ಹೇಳಿದೆ. ಸದ್ಯ ಲೋಕಸಭಾ ಚುನಾವಣೆ ನಡೆದ್ರೆ ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲ್ಲುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

  • ಕರ್ನಾಟಕ
    ಬಿಜೆಪಿ 15-17, ಕಾಂಗ್ರೆಸ್ 10-12
  • ಬಿಹಾರ
    ಬಿಜೆಪಿ+ : 22-24, ಎಂಜಿಬಿ : 16-18
  • ಉತ್ತರ ಪ್ರದೇಶ
    ಬಿಜೆಪಿ+ 68-72, ಕಾಂಗ್ರೆಸ್ 1-2
  • ಮಹಾರಾಷ್ಟ್ರ
    ಬಿಜೆಪಿ + 22-28, ಎಂವಿಎ 18-22
  • ಪಶ್ಚಿಮ ಬಂಗಾಳ
    ಬಿಜೆಪಿ + 18-20, ಟಿಎಂಸಿ 20-22
  • ತೆಲಂಗಾಣ
    ಬಿಆರ್‌ಎಸ್‌ 9-11, ಬಿಜೆಪಿ 3-5, ಕಾಂಗ್ರೆಸ್ 2-3
  • ಆಂಧ್ರ
    ವೈಎಸ್‌ಆರ್‌ಸಿ 24-25, ಟಿಡಿಪಿ 0-1
  • ತಮಿಳುನಾಡು
    ಡಿಎಂಕೆ 18-22, ಕಾಂಗ್ರೆಸ್ 8-10, ಎಡಿಎಂಕೆ 5-8
  • ಗುಜರಾತ್
    ಬಿಜೆಪಿ 26, ಕಾಂಗ್ರೆಸ್ 0

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

3ನೇ ಬಾರಿಯೂ ನರೇಂದ್ರ ಮೋದಿಗೆ ಪ್ರಧಾನಿ ಪಟ್ಟ?; ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲೋದೆಷ್ಟು?

https://newsfirstlive.com/wp-content/uploads/2023/07/PM-Narendra-Modi.jpg

Load More