newsfirstkannada.com

ಜಮೀನುಗಳ ಮೇಲೆ ಮತ್ತೆ ಹಾರಾಡಿದ ಚಿಕ್ಕ ವಿಮಾನ.. ಗದಗ ರೈತರು ಕಂಗಾಲ್.. ಅಸಲಿಗೆ ನಡೆದಿದ್ದೇನು..?

Share :

25-06-2023

  ರೈತರನ್ನು ಆತಂಕಕ್ಕೆ ದೂಡ್ತಿದೆ ವಿಮಾನ ಹಾರಾಟ

  ಅಂದು ದೊಡ್ಡ ವಿಮಾನ, ಇಂದು ಚಿಕ್ಕ ವಿಮಾನ

  ಜಮೀನುಗಳ ಮೇಲೆ ಹಾರಾಡಿದ ವಿಡಿಯೋ ಇಲ್ಲಿದೆ

ಗದಗ: ಜಮೀನುಗಳಲ್ಲಿ ಚಿಕ್ಕ ವಿಮಾನ ಹಾರಾಡಿದ್ದು ಗದಗ ಜಿಲ್ಲೆಯ ಮುಂಡರಗಿ ಭಾಗದ ರೈತರು ಆತಂಕಕ್ಕೊಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ವಿಮಾನ ಹಾರಾಟದಿಂದ ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ ಈಗ ಚಿಕ್ಕ ವಿಮಾನ ಹಾರಾಡಿದೆ.

ಯಾಕೆ ನಮ್ಮ ಜಮೀನುಗಳಲ್ಲಿ ಈ ವಿಮಾನ ಹಾರಿಸ್ತಿದ್ದೀರಿ ಅಂತ ಕೇಳಿದ್ದಕ್ಕೆ ಸ್ಪಷ್ಟವಾದ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಭೂಮಾಪನ ಇಲಾಖೆಯಿಂದ ಸರ್ವೇ ಕಾರ್ಯ ನಡೆಯುತ್ತಿದೆ ಅಂತ ಸ್ಪಷ್ಟನೆ ನೀಡ್ತಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಈ ರೀತಿ ನಮ್ಮ ಜಮೀನುಗಳಲ್ಲಿಯೇ ಸರ್ವೇ ಮಾಡ್ತಿದ್ದಾರೆ. ಯಾರು ಆದೇಶ ಮಾಡಿದ್ದಾರೆ ಅನ್ನೋದಕ್ಕೆ ಸ್ಪಷ್ಟತೆ ಇಲ್ಲ.

ಈ ಬಗ್ಗೆ ಮುಂಡರಗಿ ತಹಶೀಲ್ದಾರ್ ಶೃತಿ ಮಳ್ಳಪ್ಪನವರ್ ಸ್ಪಷ್ಟನೆ ನೀಡಿ ಮರುಭೂಪನ ಮಾಡಲು ಗದಗ ಜಿಲ್ಲೆಯಾದ್ಯಂತ ಸರ್ವೆ ನಡೆಯುತ್ತಿದೆ ಯಾರು ಭಯ ಪಡಬಾರದು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನುಗಳ ಮೇಲೆ ಮತ್ತೆ ಹಾರಾಡಿದ ಚಿಕ್ಕ ವಿಮಾನ.. ಗದಗ ರೈತರು ಕಂಗಾಲ್.. ಅಸಲಿಗೆ ನಡೆದಿದ್ದೇನು..?

https://newsfirstlive.com/wp-content/uploads/2023/06/FLIGHT.jpg

Load More