newsfirstkannada.com

ಮೀಟರ್ ಬಡ್ಡಿ ವ್ಯವಹಾರಕ್ಕೆ ಬೇಸತ್ತು ವ್ಯಕ್ತಿ ಸಾವು.. ಇಲಿ ಪಾಷಾಣ ಸೇವಿಸಿರುವ ಶಂಕೆ

Share :

Published June 28, 2024 at 2:19pm

Update June 28, 2024 at 2:23pm

  ಮ್ಯೆಕಾನಿಕ್ ಕೆಲಸಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ

  ಹಲವು ವ್ಯಕ್ತಿಗಳ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದ

  ಸಾಲಗಾರರ ಕಾಟ ತಡಿಲಾರದೇ ಮನನೊಂದು ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿ ವ್ಯವಹಾರಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪರ್ವೇಜ್ ಫಾಷ ( 38 ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪರ್ವೇಜ್ ದೊಡ್ಡಬಳ್ಳಾಪುರ ನಗರದ ರೋಜಿಪುರ ಬಡಾವಣೆಯ ನಿವಾಸಿಯಾಗಿದ್ದು, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹಾವೇರಿ ಭೀಕರ ಅಪಘಾತದಲ್ಲಿ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕಿ ಸಾವು.. ಅಂಧ ಬಾಲಕಿ ಕನಸೇನಾಗಿತ್ತು ಗೊತ್ತಾ?

ಪರ್ವೇಜ್ ದೊಡ್ಡಬಳ್ಳಾಪುರ ನಗರದಲ್ಲಿ ಮ್ಯೆಕಾನಿಕ್ ಕೆಲಸಮಾಡಿಕೊಂಡು ಜೀವನ ನಡೆಸುತ್ತಿದ್ದರು.ಈ ಹಿಂದೆ ಹಲವು ವ್ಯಕ್ತಿ ಗಳ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದರು. ಸಾಲಗಾರರ ಕಾಟ ತಡಿಯಲಾರದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪರ್ವೇಜ್ ಸಾಲ ತೀರಿಸಲು ದಿಕ್ಕು ದೋಚದೆ ಮೂರು ದಿನ ಊಟ ಬಿಟ್ಟಿದ್ದ ಎನ್ನಲಾಗಿದೆ. ನಂತರ ಅಂಗಡಿ ಮುಂದೆ ಸಾಲಗಾರರ ಕಾಟ ಹೆಚ್ಚಾಗಿ 23 ರಂದು ಮನೆಗೆ ಬಂದು ಬೆಳಗಿನ ಜಾವ ವಿಷ ಸೇವಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹಾವೇರಿ: ಅಪಘಾತದಲ್ಲಿ ಸತ್ತವರಿಗೆ 15-20 ಲಕ್ಷ ಹಣ ಘೋಷಣೆ ಮಾಡಿ.. ಇಲ್ಲವಾದ್ರೆ ಅಂತ್ಯಕ್ರಿಯೆ ಮಾಡೊಲ್ಲ

ವಿಷ ಸೇವಿಸಿದ ಬಳಿಕ 4 ದಿನಗಳಿಂದ ಪರ್ವೇಜ್​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಪರ್ವೇಜ್ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೀಟರ್ ಬಡ್ಡಿ ವ್ಯವಹಾರಕ್ಕೆ ಬೇಸತ್ತು ವ್ಯಕ್ತಿ ಸಾವು.. ಇಲಿ ಪಾಷಾಣ ಸೇವಿಸಿರುವ ಶಂಕೆ

https://newsfirstlive.com/wp-content/uploads/2024/06/parvwez.jpg

Load More