ಲಡ್ಡು ತಯಾರಿಕೆಯಲ್ಲಿ ಯಾವೆಲ್ಲಾ ಪದಾರ್ಥ ಬಳಕೆ ಮಾಡ್ತಾರೆ?
ಲಡ್ಡುಗಳನ್ನು ತಯಾರಿಸುವ ತುಪ್ಪದಲ್ಲಿ ಕಂಡು ಬಂದ ಕಲಬೆರಕೆ
ನಿತ್ಯವೂ 3.5 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಿ ವಿತರಣೆ
ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನವು ಒಂದು. ಆದರೆ ಇದೀಗ ಹೊಸ ವಿವಾದದಿಂದ ಸುದ್ದಿಯಾಗುತ್ತಿದೆ. ಬಾಲಾಜಿ ದೇವಸ್ಥಾನದ ಲಡ್ಡುಗಳಿಗೆ ತುಪ್ಪದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ಗದ್ದಲ ಎದ್ದಿದೆ. ಲಡ್ಡುಗಳನ್ನು ತಯಾರಿಸುವ ತುಪ್ಪದಲ್ಲಿ ಕಲಬೆರಕೆ ಕಂಡುಬಂದಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ್ದ ತುಪ್ಪದ ಗುತ್ತಿಗೆಯಿಂದಾಗಿ ಈ ಕಲಬೆರಕೆ ನಡೆದಿದೆ ಅಂತ ಟಿಟಿಡಿ ಕೂಡ ಒಪ್ಪಿಕೊಂಡಿದೆ.
ಇದನ್ನೂ ಓದಿ: ತಿಮ್ಮಪ್ಪನ ಲಡ್ಡು ತಿಂದು ಅಪವಿತ್ರ ಆದ್ರಾ.. ಶುದ್ಧಿಯಾಗಲು ಏನ್ ಮಾಡಬೇಕು? K.N Somayaji ಹೇಳಿದ್ದೇನು?
ವಿಶಿಷ್ಟ ರುಚಿ
ತಿರುಪತಿಯಲ್ಲಿರುವ ಪವಿತ್ರ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದವು ಅದರ ವಿಶಿಷ್ಟ ರುಚಿಗೆ ಹೆಸರುವಾಸಿ. ಲಡ್ಡುಗಳು ದೈವಿಕ ಪರಿಮಳವನ್ನು ಹೊಂದಿವೆ ಅಂತಾರೆ ಅರ್ಚಕರು. ಲಡ್ಡುಗಳನ್ನು ದೇವಾಲಯದ ಅಡುಗೆ ಮನೆಯಲ್ಲಿಯೇ ನಿತ್ಯ ತಯಾರಿಸಲಾಗುತ್ತದೆ. ಇದನ್ನು ‘ಪೋಟು’ ಅಂತ ಕರೆಯುತ್ತಾರೆ. ಲಡ್ಡು ತಯಾರಿಕೆ ಪ್ರಕ್ರಿಯೆಯಲ್ಲಿ ಪದಾರ್ಥ, ಅವುಗಳ ಪ್ರಮಾಣ ನಿತ್ಯವೂ ಕಟ್ಟುನಿಟ್ಟಾಗಿ ನಡೆಯುತ್ತದೆ. ಲಡ್ಡು ತಯಾರಿಕೆಯ ಸುದೀರ್ಘ ಇತಿಹಾಸದಲ್ಲಿ, ಪಾಕವಿಧಾನವನ್ನು ಕೇವಲ 6 ಬಾರಿ ಮಾತ್ರ ಬದಲಾಯಿಸಿದ್ದಾರಂತೆ.
ಆದರೆ ಅದು ಎಂದಿಗೂ ತನ್ನ ಮೂಲ ರುಚಿಯನ್ನು ಕಳೆದುಕೊಂಡಿಲ್ಲ. ಟಿಟಿಡಿ ಮಾಹಿತಿಯಂತೆ, ಲಡ್ಡು ಪ್ರಸಾದ 15 ದಿನಗಳವರೆಗೆ ಕೆಡದಂತೆ ಬೇಸನ್, ಬೆಲ್ಲದ ಪಾಕದಿಂದ ಮಾಡಿದ ಬೂಂದಿ ತಯಾರಿಸುತ್ತಾರೆ. ಪ್ರತಿ ದಿನ ಸುಮಾರು 400-500 ಕೆಜಿ ತುಪ್ಪ, 750 ಕೆಜಿ ಗೋಡಂಬಿ, 500 ಕೆಜಿ ಒಣದ್ರಾಕ್ಷಿ ಮತ್ತು 200 ಕೆಜಿ ಏಲಕ್ಕಿ ಬಳಸಲಾಗುತ್ತದೆ. ಅತ್ಯಾಧುನಿಕ ಆಹಾರ ಪರೀಕ್ಷಾ ಪ್ರಯೋಗಾಲಯವು ಪ್ರತಿ ಬ್ಯಾಚ್ ಲಡ್ಡುಗಳ ಗುಣಮಟ್ಟವನ್ನು ಖಾತ್ರಿಗೊಳಿಸುತ್ತದೆ. ಇದು ಗೋಡಂಬಿ, ಸಕ್ಕರೆ ಮತ್ತು ಏಲಕ್ಕಿಯನ್ನು ನಿಖರವಾಗಿ ಹೊಂದಿರಬೇಕು ಮತ್ತು ನಿಖರವಾಗಿ 175 ಗ್ರಾಂ ತೂಕವನ್ನು ಹೊಂದಿರಬೇಕು. ತಿರುಮಲದಲ್ಲಿ ನಿತ್ಯವೂ 3.5 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಿ ವಿತರಿಸಲಾಗುತ್ತದೆ.
ಇದನ್ನೂ ಓದಿ: ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು.. ತುಪ್ಪದಲ್ಲಿ ಕಲಬೆರಕೆ ಬೆರೆಸಿದ್ದು ಯಾರು? ಇಲ್ಲಿದೆ ಅಸಲಿ ವಿಷ್ಯ!
ಚಿಕ್ಕ ಲಡ್ಡುಗಳನ್ನು ವೆಂಕಟೇಶ್ವರ ದೇವಸ್ಥಾನದಲ್ಲಿ ಎಲ್ಲಾ ಭಕ್ತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ತಿರುಪತಿಯಲ್ಲಿ, ಪ್ರತಿದಿನ ಸುಮಾರು 3.5 ಲಕ್ಷ ಲಡ್ಡುಗಳನ್ನು ಉತ್ಪಾದಿಸಲಾಗುತ್ತದೆ, ಪ್ರತಿ ತುಂಡನ್ನು ತಯಾರಿಸಲು ಸುಮಾರು ₹ 40 ವೆಚ್ಚವಾಗುತ್ತದೆ. ಲಡ್ಡು ಮಾರಾಟದಿಂದ ವಾರ್ಷಿಕವಾಗಿ 500 ಕೋಟಿಗೂ ಹೆಚ್ಚು ಆದಾಯ ಟಿಟಿಡಿ ಬೊಕ್ಕಸಕ್ಕೆ ಸೇರುತ್ತದೆ.
ಲಡ್ಡುಗಳ ಇತಿಹಾಸ
ತಿರುಪತಿ ಲಡ್ಡುಗಳ ತಯಾರಿಕೆ 300 ವರ್ಷಗಳ ಹಿಂದಿನಿಂದಲೂ ಆರಂಭವಾಗಿದೆ ಎಂಬ ಮಾಹಿತಿ ಇದೆ. ಮೊದಲಿಗೆ ಲಡ್ಡು ವಿತರಣೆ ಆರಂಭವಾಗಿದ್ದು, 1715ರಲ್ಲಿ. 2009ರಲ್ಲಿ ತಿರುಪತಿ ಲಡ್ಡು GI ಸ್ಥಾನಮಾನವನ್ನು ಕೂಡ ಪಡೆದುಕೊಂಡಿದೆ. GI ಅಂದರೆ ನಿರ್ದಿಷ್ಟ ಭೌಗೋಳಿಕ ಮೂಲ ಹೊಂದಿರುವುದು. ಯಾವುದೇ ಉತ್ಪನ್ನ, ಗುಣ ಲಕ್ಷಣ, ಭೌಗೋಳಿಕ ಸ್ಥಳ ಹೊಂದಿರುವುದು. GI ಸ್ಥಾನವು ತಿರುಪತಿ ಲಡ್ಡು ಹೆಸರಿನಲ್ಲಿ ಬೇರೆಯವರು ಲಡ್ಡುಗಳನ್ನು ಮಾರಾಟ ಮಾಡುವುದನ್ನು ತಡೆಯುತ್ತದೆ. ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ಪ್ರಸಾದವಾಗಿ ಲಡ್ಡುಗಳನ್ನು ನೀಡಲಾಗುತ್ತದೆ ಮತ್ತು ಭಕ್ತರು ಅದನ್ನು ಬಹಳ ಗೌರವ ಮತ್ತು ನಂಬಿಕೆಯಿಂದ ಸ್ವೀಕರಿಸುತ್ತಾರೆ. ಇಂತಹ ತಿರುಪತಿ ದೇಗುಲದ ಲಡ್ಡು ವಿವಾದದ ಸ್ವರೂಪ ಪಡೆದುಕೊಂಡಿದ್ದು ವಿಪರ್ಯಾಸ.
ವಿಶೇಷ ವರದಿ: ವಿಶ್ವನಾಥ್ ಜಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ