newsfirstkannada.com

×

ದನದ ಕೊಬ್ಬು, ಲಡ್ಡು ಒಂದೇ ಅಲ್ಲ.. ತಿಮ್ಮಪ್ಪನಿಗೆ ಆಗಿದ್ಯಂತೆ ಇನ್ನೂ 5 ಅಪಚಾರ? ಅಯ್ಯೋ ಗೋವಿಂದ!

Share :

Published September 20, 2024 at 8:25pm

    ತಿಮ್ಮಪ್ಪನಿಗೆ ಹಸುವಿನ ತಪ್ಪವೇ ಏಕೆ? ಆಗಮಶಾಸ್ತ್ರ ಹೇಳೋದೇನು?

    ತಿರುಮಲದಲ್ಲಿ 1 ತಿಂಗಳ ಕಾಲ ಪಾಕಶಾಲೆಗೆ ಬೀಗ ಹಾಕಿದ್ದು ಯಾಕೆ?

    ಲಡ್ಡು ತಯಾರಿಕೆಯ ತುಪ್ಪಕ್ಕೆ ಪ್ರಾಣಿಗಳ ಕೊಬ್ಬು ಬಳಸಿರೋದು ದೃಢ

ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಂಡು ಬಂದಿರೋ ಪ್ರಾಣಿಗಳ ಕೊಬ್ಬು ಕೋಟ್ಯಂತರ ಭಕ್ತರ ನಿದ್ದೆಗೆಡಿಸಿದೆ. ಆಂಧ್ರ ರಾಜಕಾರಣದಲ್ಲಿ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆದರೆ ಮಾಜಿ ಸಿಎಂ ಜಗನ್​ ಪಟಾಲಂನಿಂದ ಬರೀ ಒಂದೇ ಒಂದು ಅಪಚಾರ ಆಗಿಲ್ಲವಂತೆ. ತಿಮ್ಮಪ್ಪನಿಗೆ 5 ಅಪಚಾರಗಳಾಗಿವೆ ಎನ್ನುವಂತಹ ಸ್ಫೋಟಕ ಆರೋಪಗಳನ್ನ ಅಲ್ಲಿನ ಮಾಜಿ ಪ್ರಧಾನ ಅರ್ಚಕರು ಮಾಡಿದ್ದಾರೆ. ಬರೀ ಆರೋಪ ಅಷ್ಟೇ ಅಲ್ಲ ತಿಮ್ಮಪ್ಪನಿಗೆ ಆಗಿರೋ ಪ್ರಮಾದ ನೆನೆದು ಕಣ್ಣೀರಿಟ್ಟಿದ್ದಾರೆ.

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಸನ್ನಿಧಿಯಲ್ಲಿ ಸಣ್ಣ ಅಪಚಾರವಾದ್ರೂ ದೊಡ್ಡ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದನ್ನೇ ಶ್ರೀ ವೆಂಕಟೇಶ್ವರ ಪುರಾಣ ಸಾರಿ ಸಾರಿ ಹೇಳುತ್ತದೆ. ಆದ್ರೀಗ, ತಿಮ್ಮಪ್ಪನ ಅಚ್ಚುಮೆಚ್ಚಿನ ತಿನಿಸು. ಶ್ರೀನಿವಾಸನೂ ನೀರೂರಿಸಿಕೊಂಡು ತಿನ್ನುವ ಪವಿತ್ರ ಪ್ರಸಾದ ಲಡ್ಡು. ಕೋಟ್ಯಾನುಕೋಟಿ ಭಕ್ತರಿಗೂ ಬಲು ಭಕ್ತಿಯ ಪ್ರಸಾದ ಲಡ್ಡು. ಇಂಥಾ ಲಡ್ಡು ತಯಾರಿಕೆಯ ತುಪ್ಪಕ್ಕೆ ಪ್ರಾಣಿಗಳ ಕೊಬ್ಬು ಬಳಸಿರೋದು ದೃಢ ಅಂತಾ ಲ್ಯಾಬ್​ ವರದಿ ಹೇಳುತ್ತಿದೆ. ಖುದ್ದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂಥದ್ದೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಹಾಗಾಗಿಯೇ ಕೋಟ್ಯಂತರ ಭಕ್ತರು ಅಕ್ಷರಶಃ ಕಂಗೆಟ್ಟಿದ್ದಾರೆ. ಇದೇ ಹೊತ್ತಿಗೆ ಸರಿಯಾಗಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರಾಗಿದ್ದ ಶ್ರೀ ರಮಣ ದೀಕ್ಷಿತರು ಬೆಚ್ಚಿಬೀಳಿಸೋ ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ತಮ್ಮ ಅರ್ಧಾಯುಷ್ಯವನ್ನೇ ತಿಮ್ಮಪ್ಪನಿಗೆ ಮುಡಿಪಿಟ್ಟಿದ್ದ ಅರ್ಚಕ
ತಿಮ್ಮಪ್ಪನಿಗೆ ಆದ ಅಪಚಾರ ನೆನೆದು ರಮಣ ದೀಕ್ಷಿತುಲು ಕಣ್ಣೀರು!
ಶ್ರೀರಮಣ ದೀಕ್ಷಿತರು. ಅಂದ್ರೆ ಶ್ರೀರಮಣ ದೀಕ್ಷಿತುಲು ಆಗಮಶಾಸ್ತ್ರವನ್ನು ಅರೆದು ಕುಡಿದವರು. ಭರ್ತಿ 56 ವರ್ಷ ತಿಮ್ಮಪ್ಪನಿಗೆ ಪ್ರಾಣ ಮುಡಿಪ್ಪಿಟ್ಟವರು. ಹೌದು, ತಮ್ಮ ಅರ್ಧಾಯುಷ್ಯವನ್ನೇ ತಿರುಮಲದ ಗರ್ಭಗುಡಿಯಲ್ಲೇ ಕಳೆದ ದೈವಿಕ ಪುಣ್ಯ ಇವರಿಗಿದೆ. ಇವರು ಹತ್ತನೇ ವಯಸ್ಸಿನಿಂದಲೂ ತಿಮ್ಮಪ್ಪನ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಪ್ರಧಾನ ಅರ್ಚಕರಾಗಿದ್ದವರು. ತಿಮ್ಮಪ್ಪನಿಗೆ ಯಾವ ವೇಳೆ ಎಂಥಾ ಪೂಜೆ ಮಾಡಬೇಕು. ಎಷ್ಟು ಪ್ರಮಾಣದಲ್ಲಿ ನೈವೇದ್ಯ ಸಮರ್ಪಿಸಬೇಕು. ಸಣ್ಣ ಅಚಾತುರ್ಯ ಆದರೇ ಪರಿಹಾರ ಏನು? ಅನ್ನೋ ಪ್ರಶ್ನೆಗಳಿಗೆ ನಿದ್ದೆಯಲ್ಲೂ ಉತ್ತರಿಸಬಲ್ಲ ಆಗಮಶಾಸ್ತ್ರ ಪಂಡಿತ ಇವತ್ತು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡು ವಿವಾದಕ್ಕೆ ಅಲರ್ಟ್; ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಸರ್ಕಾರ ಮಹತ್ವದ ಸೂಚನೆ 

ಈ ಹಿಂದಿನ ಸರ್ಕಾರ ಇದೇ ರಮಣ ದೀಕ್ಷಿತರನ್ನು ಅಕ್ಷರಶಃ ಅಪಮಾನ ಮಾಡಿ ದೇಗುಲದಿಂದ ಹೊರ ಹಾಕಿತ್ತು. ಇಲ್ಲ ಸಲ್ಲದ ಆರೋಪ ಮಾಡಿ ಕೋರ್ಟ್​ ಮೆಟ್ಟಿಲೇರುವಂತೆ ಮಾಡಿತ್ತು ಅನ್ನೋ ಚರ್ಚೆ ನಡೀತಾನೇ ಇದೆ. ಈ ಹಿಂದೆಯೂ ದೇಗುಲದಲ್ಲಿ ಅಪಚಾರಗಳು ನಡೀತಿವೆ ಅಂತ ನೇರವಾಗಿ ಹೇಳಿದ್ರು. ಇದೀಗ ಲಡ್ಡು ವಿಷಯದಲ್ಲಿ ಆಗಿರೋ ಅಪಚಾರ ಒಂದೇ ಅಲ್ಲ. ತಿಮ್ಮಪ್ಪನ ಸನ್ನಿಧಿಯಲ್ಲಿ ಐದು ಅಪಚಾರಗಳು ನಡೆದಿವೆ ಅಂತ ಬಿಕ್ಕಳಿಸುತ್ತಲೇ ಆರೋಪಿಸುತ್ತಿದ್ದಾರೆ.

ತಿರುಮಲ ಮಹಾಕ್ಷೇತ್ರದಲ್ಲಿ ಈ ಎರಡು ಮೂರು ದಿನಗಳಿಂದ ಬರುತ್ತಿರುವ ಸುದ್ದಿಗಳನ್ನು ಕೇಳಿ ತುಂಬಾ ನೋವಾಗಿದೆ. ವೈಖಾನಸ ಆಗಮಶಾಸ್ತ್ರದ ಪ್ರಕಾರವೇ ಸಹಸ್ರ ವರ್ಷಗಳಿಂದ ಆರಾಧನೆ ನಡೆಯುತ್ತಾ ಬಂದಿರುವ ಶ್ರೀವಾರಿ ದೇವಾಲಯದಲ್ಲಿ ಇಂತಹ ವಿಷಯ ನಡೆದಿದ್ದು, ಅದು ಹೊರಗೆ ಬಂದಿದ್ದು ಇದು ಕೋಟ್ಯಂತರ ಭಕ್ತರೆಲ್ಲರಿಗೂ ಆಘಾತಕಾರಿ ವಿಷಯವಾಗಿದೆ. ಒಬ್ಬ ಅರ್ಚಕನಾಗಿ, ಸ್ವಾಮಿಯ ಭಕ್ತನಾಗಿ, ನಾನೂ ಸಹ ಈ ಮೂರು ದಿನ ತುಂಬಾ ನೋವು ಅನುಭವಿಸಿದ್ದೇನೆ.

ಇವತ್ತು ಚರ್ಚೆ ಆಗುತ್ತಿರೋ ವಿಚಾರವೇ ತುಪ್ಪದಲ್ಲಿ ಪ್ರಾಣಿ ಕೊಬ್ಬು ಮಿಕ್ಸ್​ ಮಾಡಿದ್ದಾರೆ ಎನ್ನುವಂಥದ್ದು. ಅಸಲಿಗೆ ತಿಮ್ಮಪ್ಪನಿಗೆ ನೈವೇದ್ಯಕ್ಕೇ ಇರಲಿ, ಅಭಿಷೇಕಕ್ಕೇ ಇರಲಿ ಹಸುವಿನ ತುಪ್ಪವನ್ನೇ ಏಕೆ ಬಳಸುತ್ತಾರೆ? ಈ ತುಪ್ಪಕ್ಕೂ ಅಪಚಾರ ಏಕೆ ಆಗಬಾರದು? ಇಂಥಾ ಹಲವು ಅನುಮಾನಕ್ಕೆ ಟಿಟಿಡಿ ವೈಖಾನ ಆಗಮಶಾಸ್ತ್ರದ ಮೊರೆ ಹೋಗುತ್ತದೆ. ನಿಮಗೆ ಅಚ್ಚರಿ ಅನ್ನಿಸಬಹುದು. ಕರ್ನಾಟಕದ ನಂದಿನಿ ತುಪ್ಪವನ್ನೇ ತಿಮ್ಮಪ್ಪನ ಲಡ್ಡು ಬಳಕೆಗೆ ಬಳಸುವ ವಿಚಾರವೂ ಕೂಡ ಆಗಮಶಾಸ್ತ್ರವೇ ಹೇಳಿದ ಸಂಗತಿ ಆಗಿದೆ. ಬ್ರಾಹ್ಮಿ ಮುಹೂರ್ತದಿಂದ ಶುರುವಾಗುವ ತಿಮ್ಮಪ್ಪನ ಸುಪ್ರಭಾತ ಸೇವೆಯಿಂದ ಹಿಡಿದು ಏಕಾಂತ ಸೇವೆಯ ತನಕ ಹಸುವಿನ ಹಾಲು, ಮೊಸರು, ತುಪ್ಪವನ್ನೇ ಬಳಸುತ್ತಾರೆ. ಈ ಬಗ್ಗೆ ರಮಣ ದೀಕ್ಷಿತರು ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ಹೇಳಿದ್ದಾರೆ.

ಆಗಮ ಶಾಸ್ತ್ರ ಪ್ರಕಾರ ಹಸುವಿಗೆ ಎಷ್ಟೋ ದೊಡ್ಡ ಸ್ಥಾನವಿದೆ. ಹಸುವಿನ ಹಾಲಿನಿಂದ ಸ್ವಾಮಿಗೆ ಹಾಲಿನ ಅಭಿಷೇಕ ನಡೆಯುತ್ತದೆ. ಸುಪ್ರಭಾತ ಹಾಗೂ ಏಕಾಂತ ಸೇವೆಯಲ್ಲಿ ದೇವರಿಗೆ ನೈವೇದ್ಯವಾಗಿ ಹಾಲನ್ನು ಸಮರ್ಪಿಸುತ್ತೇವೆ. ಹಸುವಿನ ಹಾಲಿನಿಂದ ಉತ್ಪಾದನೆಯಾದ ಮೊಸರಿನಿಂದ ದದ್ದೋಜನ ಪ್ರಸಾದವನ್ನು ನೈವೇದ್ಯವಾಗಿ ಸಮರ್ಪಿಸುತ್ತೇವೆ. ಮೊದಲಾದ ಪ್ರಸಾದಗಳನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸುತ್ತೇವೆ. ಉತ್ಸವಗಳ ಸಂದರ್ಭ ಅಭಿಷೇಕಕ್ಕೆ ಹಸುವಿನ ತುಪ್ಪವನ್ನು ಬಳಸುತ್ತೇವೆ. ದೇವರಿಗೆ ಅನ್ನಪ್ರಸಾದದಲ್ಲಿ, ಲಡ್ಡು, ವಡೆಗಳಲ್ಲಿ ಹಸುವಿನ ತುಪ್ಪವನ್ನು ಬಳಸುತ್ತೇವೆ. ಹಾಗೆಯೇ ಗೋಮೂತ್ರ ಹಾಗೂ ಗೋಮಯವನ್ನು ಯಾಗ ಶಾಲೆ ಮತ್ತು ದೇಗುಲ ಶುದ್ಧಿಗೆ ಬಳಸುತ್ತೇವೆ. ಇಂಥಾ ಪವಿತ್ರ ಹಸುವಿನ ತುಪ್ಪವನ್ನು ಕಳಪೆ ಮಾಡುವಂಥದ್ದು ನಮಗೆ ಸಕಲವನ್ನು ಪ್ರಸಾದಿಸುವ ಸ್ವಾಮಿಗೆ ಅಪಚಾರ ನಡೆಯುವಂಥದ್ದು ಬಲು ಚರ್ಚಾರ್ಹ ವಿಚಾರ.

– ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ಆಗಮಶಾಸ್ತ್ರದಲ್ಲಿ ಹಸುವಿಗೆ ಮಹತ್ವದ ಸ್ಥಾನವಿದೆ. ತಿಮ್ಮಪ್ಪನ ಸನ್ನಿಧಿಯಲ್ಲಂತೂ ಹಸುವಿನ ಪದಾರ್ಥಗಳೇ ಇಲ್ಲದೇ ಯಾವ ಸೇವೆಯೂ ನಡೆಯೋದಿಲ್ಲ. ಗೋ ಮೂತ್ರ, ಗೋಮಯದಿಂದ ಹಿಡಿದು ಹಾಲು, ಮೊಸರು, ತುಪ್ಪ ಎಲ್ಲವೂ ಶ್ರೀನಿವಾಸನಿಗೆ ಬಲು ಅಚ್ಚು ಮೆಚ್ಚು. ಇಂಥದ್ದೇ ಪದಾರ್ಥಗಳನ್ನಷ್ಟೇ ಪ್ರಸಾದಕ್ಕೆ, ಸೇವೆಗೆ, ಅಭಿಷೇಕಕ್ಕೆ ಬಳಸಬೇಕು ಅನ್ನೋದನ್ನ ಆಗಮಶಾಸ್ತ್ರವೂ ಸಹ ಸ್ಪಷ್ಟವಾಗಿ ಹೇಳಿದೆ. 56 ವರ್ಷಗಳ ಕಾಲ ತಿಮ್ಮಪ್ಪನ ಪೂಜಾ ಕೈಂಕರ್ಯ ಸೇವೆಯಲ್ಲಿ ಪ್ರವೀಣರಾಗಿರೋ ದೀಕ್ಷಿತರೇ ಇಂಥಾ ವಿಚಾರ ಅತೀ ಸೂಕ್ಷ್ಮವಾದದ್ದು ಅನ್ನೋದನ್ನ ಹೇಳುತ್ತಿದ್ದಾರೆ. ಆದಾಗ್ಯೂ, ಈ ಹಿಂದಿನ ಸರ್ಕಾರ ಬಹುದೊಡ್ಡ ಅಪಚಾರವನ್ನೇ ಮಾಡಿದೆ ಅನ್ನೋ ಆರೋಪವಿದೆ. ಇದೇ ಹೊತ್ತಿಗೆ ಸರಿಯಾಗಿ ರಮಣ ದೀಕ್ಷಿತರು ಒಂದಲ್ಲ, ಐದು ಅಪಚಾರ ಆಗಿದೆ ಅನ್ನೋ ಮಾತನ್ನ ಹೇಳುತ್ತಿದ್ದಾರೆ.

5 ವರ್ಷದಲ್ಲಿ ನಡೆದಿದ್ದು ಮಹಾಪಾಪ : ದೀಕ್ಷಿತರ ಗಂಭೀರ ಆರೋಪ!
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತವರು ಮೈತ್ರಿ ಸರ್ಕಾರದ ನಾಯಕರ ಆರೋಪಗಳು ಒಂದು ಕಡೆ. ಇದಕ್ಕೆ ಪ್ರತಿಯಾಗಿ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕೊಡ್ತಿರೋ ಕ್ಲಾರಿಟಿ ಮತ್ತೊಂದು ಕಡೆ. ಆದರೆ ಇದೇ ದೇಗುಲದಲ್ಲಿ 56 ವರ್ಷ ಕಾಲ ತಿಮ್ಮಪ್ಪನ ಪೂಜೆ ಮಾಡಿದ್ದ ರಮಣ ದೀಕ್ಷಿತರ ಹೇಳಿಕೆ ಅಕ್ಷರಶಃ ಭಕ್ತರನ್ನ ಮತ್ತಷ್ಟು ಕಂಗೆಡುವಂತೆ ಮಾಡುತ್ತಿದೆ. ಯಾಕಂದ್ರೆ ಜಗನ್ ಸರ್ಕಾರದ ಅವಧಿಯ ಐದೂ ವರ್ಷ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಾಪಾಪ ನಡೆದಿದೆ ಎನ್ನುತ್ತಿದ್ದಾರೆ.

ಒಮ್ಮೊಮ್ಮೆ ಇವೆಲ್ಲವನ್ನೂ ನೋಡುವ ಪಾಪ ಕೂಡ ನಾವು ಮಾಡಿದ್ದೇವಾ ಅನಿಸುತ್ತದೆ. ಎಷ್ಟೋ ಸಲ ಈ ವಿಚಾರವನ್ನು ಅವತ್ತಿನ ಚೇರ್ಮನ್ ಹಾಗೂ ಇಓ ಗಮನಕ್ಕೆ ತಂದು, ಪ್ರಸಾದದಲ್ಲಿ ಗುಣಮಟ್ಟವಿಲ್ಲ, ಮೊದಲಿನಂತೆ ಇಲ್ಲ ಅಂತಾ, ಪ್ರಸಾದದ ಪರಿಣಾಮಗಳು ಸರಿಯಾದ ರೀತಿಯಲ್ಲಿ ದೇವರಿಗೆ ಸರ್ಮಪಿಸುತ್ತಿಲ್ಲ, ಆಗಮಶಾಸ್ತ್ರದ ಪ್ರಕಾರ ಸರಿಯಾದ ಸಂದರ್ಭ ನೈವೇದ್ಯ ಆಗುತ್ತಿಲ್ಲ ಅಂತ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಯಾವುದೇ ಕ್ರಮ ಕೈಗೊಳ್ಳಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ನನ್ನದು ಏಕಾಂಗಿ ಹೋರಾಟವಾಗಿತ್ತು. ನನಗೆ ಈ ವಿಷಯದಲ್ಲಿ ಸಹಕರಿಸುವುದಕ್ಕೆ ನನ್ನೊಂದಿಗಿದ್ದ ಅರ್ಚಕರು ಅವರವರ ವೈಯಕ್ತಿಕ ಕಾರಣಗಳಿಂದ ಮುಂದೆ ಬರಲಿಲ್ಲ. ಪ್ರಧಾನ ಪ್ರಚಾರಕರು ಬರಲಿಲ್ಲ. ಹಾಗಾಗಿಯೇ ಈ ಐದು ವರ್ಷ ಈ ಮಹಾ ಪಾಪ ನಡೆದು ಹೋಗಿದೆ.

– ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ಆಗಮಶಾಸ್ತ್ರವನ್ನೇ ಧಿಕ್ಕರಿಸಿ ದೇವರಿಗೆ ನೈವೇದ್ಯ ಮಾಡಲಾಗಿದೆಯಂತೆ. ಗುಣಮಟ್ಟವಿಲ್ಲದ ಪ್ರಸಾದ ದೇವರ ಮುಂದಿಡುವುದು ಸಹ ಘನಘೋರ ಪಾಪ ಎನ್ನುತ್ತಿದ್ದಾರೆ. ಅದ್ರಲ್ಲೂ, ಸರ್ಕಾರಗಳ ಆದೇಶಗಳನ್ನು ಪಾಲಿಸುವ ಸಂದರ್ಭ ಅನುದಿನವೂ ಆರಾಧನಾ ಸೇವೆ ಮಾಡುವ ಅರ್ಚಕರನ್ನೂ ಸಹ ಮಹಾಪಾಪಕ್ಕೆ ದೂಡಿರುವುದು ಎಷ್ಟು ಸರಿ ಅಂತ ಪ್ರಶ್ನಿಸುತ್ತಿದ್ದಾರೆ. ರಮಣ ದೀಕ್ಷಿತರು ಐದು ಪ್ರಕಾರದ ಅಪಚಾರಗಳು ಕಳೆದು ಐದು ವರ್ಷಗಳಲ್ಲಿ ಆಗಿವೆ ಅನ್ನೋ ಮೂಲಕ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜ್ಞಾನದ ವಿದ್ಯಾರ್ಥಿಯಾಗಿ, ಆಗಮಶಾಸ್ತ್ರದ ಪಂಡಿತನಾಗಿ ಪ್ರಯೋಗಾಲಯದ ವರದಿ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದ ವಿವಾದಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಜಗನ್.. ತಿರುಮಲದಲ್ಲಿ ಅಸಲಿಗೆ ನಡೆದಿದ್ದೇನು? 

ರಮಣ ದೀಕ್ಷಿತರ ಪ್ರಕಾರ ತಿಮ್ಮಪ್ಪನ ಪ್ರಸಾದಕ್ಕೆ ಕಳಪೆ ಗುಣಮಟ್ಟದ ತುಪ್ಪ ಬಳಸೋದೇ ತಪ್ಪು. ಅಂಥಾದ್ರಲ್ಲಿ, ಪ್ರಾಣಿಗಳ ಕೊಬ್ಬು ಬೆರೆತ ತುಪ್ಪವನ್ನು ಬಳಸುವಂಥದ್ದು ಮಹಾಪಾಪ ಎನ್ನುತ್ತಿದ್ದಾರೆ. ಇದಲ್ಲದೇ ಕಣ್ಣೀರಿಡುತ್ತಲೇ ತಿಮ್ಮಪ್ಪನ ಸನ್ನಿಧಿಯಲ್ಲಿ ಐದು ಅಪಚಾರಗಳು ನಡೆದಿವೆ. ಮುಂದಿನ ದಿನಮಾನಗಳಲ್ಲಿ ಈ ಪಾಪಕ್ಕೆ ಬಹುದೊಡ್ಡ ಶಿಕ್ಷೆ ಆಗಲಿದೆ ಅನ್ನೋ ಗಂಭೀರ ಭವಿಷ್ಯವನ್ನೂ ನುಡಿಯುತ್ತಿದ್ದಾರೆ. ಅಷ್ಟಕ್ಕೂ ದೀಕ್ಷಿತರು ಪಟ್ಟಿ ಮಾಡಿರೋ ಆ ಐದು ಅಪಚಾರಗಳೇನು ಗೊತ್ತಾ? ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿರೋ ಆ ಐದು ಅಪಚಾರಗಳನ್ನು ಒಂದೊಂದಾಗಿ ತೋರಿಸ್ತೀವಿ, ನೋಡಿ.

ತಿಮ್ಮಪ್ಪನಿಗಾದ ಅಪಚಾರ 1
ಹಸುವಿನ ತುಪ್ಪವನ್ನೇ ಅಪವಿತ್ರಗೊಳಿಸಿದ್ದು!
ಹಸುವಿನ ತುಪ್ಪದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು. ಆಗಮಶಾಸ್ತ್ರದಲ್ಲಿ ಹಸುವಿನ ಪವಿತ್ರ ಸ್ಥಾನವಿದೆ. ತಾಯಿಯ ಸ್ಥಾನವಿದೆ. ಅಂಥಾ ಅಮ್ಮನನ್ನೇ ನಕಲಿ ವಸ್ತುಗಳ ಮೂಲಕ ಅಪವಿತ್ರಗೊಳಿಸುವುದು ಘೋರ ಪಾಪ ಎನ್ನುತ್ತಿದ್ದಾರೆ.

ಮೂಲತಃ ಒಬ್ಬ ವಿಜ್ಞಾನಿಯಾಗಿ ತುಪ್ಪದ ಪ್ರಯೋಗಾಲಯ ವರದಿಯನ್ನು ನೋಡಿದ್ದೇನೆ. ಅದರಲ್ಲಿಯೂ ಸಹ ಪ್ರಾಣಿಗಳ ಕೊಬ್ಬು, ತರಕಾರಿಗಳ ಎಣ್ಣೆ, ಹಲವು ಪದಾರ್ಥಗಳು ಮಿಶ್ರಣ ಆಗಿರುವುದನ್ನು ನೋಡಿದ್ದೇನೆ. ಪರಿಶುದ್ಧವಾದ ಹಾಲಿನಿಂದ ತಯಾರಿಸಿದ ತುಪ್ಪದಲ್ಲಿ ಕೊಬ್ಬಿನಂತಹ ಪದಾರ್ಥಗಳು ಮಿಶ್ರಣ ಆಗುವುದಿಲ್ಲ. ಇದು ಅಪವಿತ್ರತೆಯ ಅಡಿಯಲ್ಲಿ ಬರುತ್ತದೆ.

– ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ತಿಮ್ಮಪ್ಪನಿಗಾದ ಅಪಚಾರ 2
ಆಗಮಶಾಸ್ತ್ರಕ್ಕೆ ವಿರುದ್ಧವಾಗಿ ಲಡ್ಡು ತಯಾರಿಸಿದ್ದು!
ಆಗಮಶಾಸ್ತ್ರದ ಪ್ರಕಾರವೇ ತಿಮ್ಮಪ್ಪನಿಗೆ ಪ್ರಸಾದ ತಯಾರಿಸಬೇಕು. ಮುಂಜಾನೆಯ ಪೂಜೆಯಿಂದ ಹಿಡಿದು ರಾತ್ರಿಯ ಮಹಾಮಂಗಳಾರತಿ ತನಕ ಹಸುವಿನ ತುಪ್ಪ ಅತ್ಯಮೂಲ್ಯ ಬಹುಮುಖ್ಯ. ಆದರೇ. ಆಗಮಶಾಸ್ತ್ರವನ್ನೇ ಧಿಕ್ಕರಿಸಿ ಲಡ್ಡು ಪ್ರಸಾದ ತಯಾರಿಸಿದ್ದು ಮಹಾಪಾಪ ಎನ್ನುತ್ತಿದ್ದಾರೆ ದೀಕ್ಷಿತರು.

ಹಾಗೆಯೇ ಅನ್ನ ಪ್ರಸಾದದಲ್ಲೂ ಸಹ ನಕಲಿ ತುಪ್ಪವನ್ನು ಬಳಸಿ ಪೊಂಗಲ್, ಸಕ್ಕರೆ ಪೊಂಗಲ್, ಕೇಸರಿ ಬಾತ್ ಮೊದಲಾದವುಗಳಲ್ಲಿ ಆ ತುಪ್ಪವನ್ನು ಬಳಸಿದ್ದಾರೆ. ಇದನ್ನು ನಮ್ಮ ಕೈಯಿಂದಲೇ ದೇವರಿಗೆ ಸಮರ್ಪಿಸುವಂತಹ ದುರಾದೃಷ್ಟ ಕೂಡ ಬಂದೊದಗಿದೆ.

– ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ತಿಮ್ಮಪ್ಪನಿಗಾದ ಅಪಚಾರ 3
ಒಂದು ತಿಂಗಳ ಕಾಲ ಪಾಕಶಾಲೆಗೆ ಬೀಗ ಹಾಕಿದ್ದು!
ಪಾಕಶಾಲೆಗೆ ನುಗ್ಗಿ ನಿಧಿ ಆಸೆಗಾಗಿ ಅಪವಿತ್ರಗೊಳಿಸಿದ್ದರು. ಒಂದು ತಿಂಗಳ ಕಾಲ ಪಾಕಶಾಲೆಗೆ ಬೀಗ ಹಾಕಿದ್ದರು. ತಿರುಮಲದ ಚರಿತ್ರೆಯಲ್ಲಿ ಒಂದೇ ಒಂದು ದಿನವೂ ಪಾಕಶಾಲೆಗೆ ಬೀಗ ಬಿದ್ದಿರಲಿಲ್ಲ. ಇಂಥಾ ಸಂದರ್ಭ ಹೊರಗಿನಿಂದ ದೇವರಿಗೆ ಪ್ರಸಾದ ಮಾಡಿಸಿ ಸಮರ್ಪಿಸಲಾಗುತ್ತಿತ್ತು. ಇದು ಆಗಮಶಾಸ್ತ್ರದ ಪ್ರಕಾರ ಅಕ್ಷಮ್ಯ ಅಪಚಾರ ಎನ್ನುತ್ತಿದ್ದಾರೆ ದೀಕ್ಷಿತರು.

ತಿಮ್ಮಪ್ಪನಿಗಾದ ಅಪಚಾರ 4 
ಆಗಮಶಾಸ್ತ್ರದಂತೆ ನೈವೇದ್ಯ ಸಮರ್ಪಿಸಲೇ ಇಲ್ಲ!

ಅನ್ನ ಪ್ರಸಾದದಲ್ಲೂ ಸಹ ಕಳಪೆ ಸಾಮಗ್ರಿಗಳನ್ನು ಬಳಸಲಾಗಿದೆ. ತಿಮ್ಮಪ್ಪನಿಗೆ ಸಮರ್ಪಿಸುವ ಪೊಂಗಲ್, ಸಕ್ಕರೆ ಪೊಂಗಲ್, ದದ್ದೋಜನಂನಲ್ಲೂ ಕಳಪೆ ಹಸುವಿನ ಹಾಲು ತುಪ್ಪವನ್ನು ಬಳಸಲಾಗಿದೆ. ಇದು ತಿಮ್ಮಪ್ಪನಿಗೇ ಮಾಡುವ ಅನ್ಯಾಯ ಎನ್ನುತ್ತಿದ್ದಾರೆ ರಮಣ ದೀಕ್ಷಿತರು.

ಇದಲ್ಲದೇ ನೈವೇದ್ಯ ಅರ್ಪಿಸುವಾಗ ಸ್ವಾಮಿಗೆ ಯಾವ ವೇಳೆ ನೈವೇದ್ಯ ಕೊಡಬೇಕು ಎನ್ನುವಂಥದ್ದನ್ನು ಆಗಮಶಾಸ್ತ್ರ ನಿರ್ಣಯಿಸುತ್ತದೆ. ಆ ಪ್ರಕಾರವೂ ಸಹ ಒಮ್ಮೊಮ್ಮೆ ನೈವೇದ್ಯ ಸಮರ್ಪಣೆ ಆಗಿಲ್ಲ.

– ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ತಿಮ್ಮಪ್ಪನಿಗಾದ ಅಪಚಾರ 5 
ಅರ್ಚಕರಿಗೆ ಒತ್ತಡ, ನೈವೇದ್ಯಕ್ಕೂ ಆತುರದ ಆದೇಶ
ನೈವೇದ್ಯವನ್ನು 10 ನಿಮಿಷದಲ್ಲೇ ಮುಗಿಯಬೇಕು ಅಂತ ಆದೇಶಿಸುವುದು ಕೂಡ ಅಪಚಾರವೇ ಆಗಿದೆ. ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರಸಾದ ಸಮರ್ಪಿಸಬೇಕು. ಆತುರದ ಆದೇಶಗಳ ಮೂಲಕ ಆಗಮಶಾಸ್ತ್ರಕ್ಕೆ ಅಪಮಾನ ಮಾಡಿದ್ದಾರೆ. ಈ ಎಲ್ಲಾ ತಪ್ಪುಗಳ ಕಾರಣಕ್ಕೆ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಇದಕ್ಕಾಗಿ ಏನು ಮಾಡಬೇಕು ಅನ್ನೋ ಪರಿಹಾರಗಳನ್ನೂ ರಮಣ ದೀಕ್ಷಿತುಲು ತಿಳಿಸಿದ್ದಾರೆ.

ನೈವೇದ್ಯ ಮಾಡುವಂತಹ ಸಮಯವನ್ನೂ ಸಹ ತಗ್ಗಿಸಿ, 10 ನಿಮಿಷದಲ್ಲಿ ಆಗಬೇಕು. 15 ನಿಮಿಷದಲ್ಲಿ ಆಗಬೇಕು ಎನ್ನುವಂಥದ್ದು. ಅರ್ಚಕರ ಮೇಲೆ ಒತ್ತಡ ಹಾಕುವಂಥದ್ದು. ಬೇಗ ಮುಗಿಸಬೇಕು ಅಂತ ಅವರನ್ನು ತಳ್ಳುವಂಥದ್ದು. ಇವೆಲ್ಲವೂ ಕೂಡ ನಡೆಯುತ್ತಿದೆ. ಇವೆಲ್ಲವೂ ಸಹ ಸ್ವಾಮಿಗೆ ಆಗುತ್ತಿರುವ ಅಪಚಾರಗಳ ಅಡಿಯಲ್ಲೇ ಬರುತ್ತವೆ.
– ಶ್ರೀರಮಣ ದೀಕ್ಷಿತರು, ಮಾಜಿ ಪ್ರಧಾನ ಅರ್ಚಕ

ಹೀಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಅನುದಿನ ಅನುಕ್ಷಣ ಕಳೆದ 5 ವರ್ಷಗಳಲ್ಲಿ ಐದು ಅಪಚಾರ ಆಗಿದೆ ಅನ್ನೋ ಗುರುತ್ತರ ಆರೋಪವನ್ನು ರಮಣ ದೀಕ್ಷಿತರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ಇಂಥಾ ಮಹಾಪಾಪ ಘನಘೋರ ಶಿಕ್ಷೆ ನೀಡುತ್ತದೆ. ಅದರಲ್ಲೂ ಗರುಡ ಪುರಾಣದಲ್ಲಿ ಉಲ್ಲೇಖವಾಗಿರೋ ಶಿಕ್ಷೆಯನ್ನು ವಿಧಿಸುತ್ತಾನೆ ವಿಧಿ ಅನ್ನೋ ಸುಳಿವು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದನದ ಕೊಬ್ಬು, ಲಡ್ಡು ಒಂದೇ ಅಲ್ಲ.. ತಿಮ್ಮಪ್ಪನಿಗೆ ಆಗಿದ್ಯಂತೆ ಇನ್ನೂ 5 ಅಪಚಾರ? ಅಯ್ಯೋ ಗೋವಿಂದ!

https://newsfirstlive.com/wp-content/uploads/2024/09/Tirupati-Laddu.jpg

Load More