ನಟ ರಿಷಬ್ ಅಲ್ಲ, ರಾಜ್ ಬಿ. ಶೆಟ್ಟಿ ಅಲ್ಲ..!
ಇವರೇ 'ಟೋಬಿ' ಸಿನಿಮಾದ ಕಥೆ ಬರೆದಿದ್ದು!
ಯಾರು ಈ ಖ್ಯಾತ ಕಥೆಗಾರ ಟಿ.ಕೆ ದಯಾನಂದ್?
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಕಥೆಗಳು ಇಲ್ಲ, ಒಳ್ಳೆ ಕಥೆಗಾರರಿಲ್ಲ ಎಂಬ ಟೀಕೆ ಆಗಾಗ ಕೇಳಿಬರ್ತಾನೇ ಇರುತ್ತೆ. ಆದ್ರೆ ಸ್ಯಾಂಡಲ್ವುಡ್ನಲ್ಲಿ ಒಳ್ಳೆ ಕಥೆಗಾರರೂ ಇದ್ದಾರೆ, ಒಳ್ಳೊಳ್ಳೆ ಕಥೆಗಳನ್ನು ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷಿ ಟಿಕೆ ದಯಾನಂದ್. ಸದ್ಯ ರಾಜ್ ಬಿ ಶೆಟ್ಟಿ ನಟಿಸಿರುವ ‘ಟೋಬಿ’ ಚಿತ್ರ ಬಹಳ ಸದ್ದು ಮಾಡ್ತಿದೆ. ತಳ ಸಮುದಾಯದ ವ್ಯಕ್ತಿಯೊಬ್ಬನ ನೈಜ ಕಥೆಯೊಂದನ್ನ ‘ಟೋಬಿ’ ಚಿತ್ರದ ಮೂಲಕ ತೋರಿಸ್ತಿದ್ದು, ಟ್ರೇಲರ್ ಬಹಳ ಮೆಚ್ಚುಗೆ ಗಳಿಸಿಕೊಂಡಿದೆ. ಇದಕ್ಕೆ ಮೂಲ ಕಾರಣ ಟಿಕೆ ದಯಾನಂದ್.
ಯೆಸ್.. ‘ಟೋಬಿ’ ಚಿತ್ರಕ್ಕೆ ಕಥೆ ಒದಗಿಸಿರುವುದು ಇದೇ ಟಿಕೆ ದಯಾನಂದ್.. ಮುಂಬೈನಲ್ಲಿ ನಡೆಯುವ ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಸೀಸನ್ 4ನಲ್ಲಿ ಸುಮಾರು 3 ಲಕ್ಷದ 70 ಸಾವಿರಕ್ಕೂ ಹೆಚ್ಚು ಕಥೆಗಳ ಪೈಕಿ ಟೋಬಿ ಪ್ರಶಸ್ತಿ ಗೆದ್ದಿದ್ದು, ಅದೇ ಕಥೆಯನ್ನ ಈಗ ರಾಜ್ ಬಿ ಶೆಟ್ಟಿ ಸಿನಿಮಾ ಮಾಡ್ತಿದ್ದಾರೆ. ಈ ವಿಷ್ಯವನ್ನ ಖುದ್ದು ಟಿಕೆ ದಯಾನಂದ್ ಟೋಬಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ರು.
2015ರಲ್ಲಿ ಬಂದ ‘ಬೆಂಕಿ ಪಟ್ಟಣ’ ಚಿತ್ರದ ಮೂಲಕ ನಿರ್ದೇಶಕ, ಕಥೆಗಾರನಾಗಿ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ ದಯಾನಂದ್ ತದನಂತರ ಬೆಲ್ ಬಾಟಮ್ ಕಥೆ, ಅಶೋಕ ಬ್ಲೇಡ್ ಸಿನಿಮಾದ ಇಡೀ ಸ್ಕ್ರಿಪ್ಟ್ ಬರೆದು ಯಶಸ್ಸು ಕಂಡಿದ್ದರು. ಈಗ ‘ಟೋಬಿ’ ಚಿತ್ರಕ್ಕೆ ಕಥೆ ನೀಡಿದ್ದು, ಮತ್ತೊಂದು ಗೆಲುವಿನ ಭರವಸೆ ಹುಟ್ಟುಹಾಕಿದ್ದಾರೆ.
ಟಿಕೆ ದಯಾನಂದ್ ಬಳಿ ಇನ್ನಷ್ಟು ಹೊಸ ಕಥೆಗಳು
ಇದಷ್ಟೇ ಅಲ್ಲ ಟಿಕೆ ದಯಾನಂದ್ ಬಳಿ ಇನ್ನಷ್ಟು ಹೊಸ ಕಥೆಗಳಿವೆ. ಒಂದು ವೇಳೆ ಟೋಬಿ ಹಿಟ್ ಆದ್ರೆ, ದಯಾನಂದ್ ಅವ್ರ ಹೆಸರು ಇನ್ನೊಂದು ಹಂತಕ್ಕೆ ರೀಚ್ ಆಗಲಿದೆ.. ಅದ್ರಿಂದ ಅವ್ರ ಬತ್ತಳಿಕೆಯಲ್ಲಿರುವ ಇನ್ನಷ್ಟು ಒಳ್ಳೆ ಕಥೆಗಳು ತೆರೆಮೇಲೆ ಬರಲಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ