ನ್ಯೂಸ್ಫಸ್ಟ್ ಜತೆಗೆ ಕಥೆಗಾರ ಟಿ.ಕೆ ದಯಾನಂದ್ ಮಾತು
ರಿಷಬ್ ಶೆಟ್ಟಿ ಹಾಸ್ಯಕರ ಘಟನೆ ಬಗ್ಗೆ ಬಿಚ್ಚಿಟ್ಟ ದಯಣ್ಣ..!
ಥಿಯೇಟರ್ಗೆ ರಿಷಬ್ ಬೌನ್ಸರ್ಸ್ ಕರೆ ತಂದಿದ್ದೇಕೆ..?
ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಟಿ.ಕೆ ದಯಾನಂದ್. ಬೆಂಕಿಪಟ್ಣ ಸಿನಿಮಾ ಮೂಲಕ ನಿರ್ದೇಶಕರಾಗಿ ತನ್ನ ಸಿನಿ ಕರಿಯರ್ ಶುರು ಮಾಡಿದ ಟಿ.ಕೆ ದಯಾನಂದ್ ಆರಂಭದಲ್ಲಿ ಹೇಳಿಕೊಳ್ಳುವಷ್ಟು ಸಕ್ಸಸ್ ಆಗಿರಲಿಲ್ಲ. ಬಳಿಕ ಸಿನಿಮಾ ಡೈರೆಕ್ಷನ್ ಮಾಡಲು ಅವಕಾಶ ಸಿಕ್ಕರೂ ಕಥೆಗಾರನಾಗಿ ಟಿ.ಕೆ ದಯಾನಂದ್ ಮುಂದುವರಿದರು. ಇದಾದ ಬಳಿಕ ಮೊದಲ ಬಾರಿಗೆ ಬೆಲ್ ಬಾಟಂ ಸಿನಿಮಾದ ಕಥೆ ಬರೆದರು. ಈ ಸಿನಿಮಾ ಟಿ.ಕೆ ದಯಾನಂದ್ ಅವರಿಗೆ ಬ್ರೇಕ್ ನೀಡಿತ್ತು.
ಬೆಲ್ ಬಾಟಂ ಬಳಿಕ ಇದರ ಪಾರ್ಟ್ 2 ಕಥೆ, ಆಕ್ಟ್ 1972, ಆಶೋಕ ಬ್ಲೇಡ್, ಈಗ ಟೋಬಿ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ನಟಿಸುತ್ತಿರೋ ವಾರಿಯರ್ ಎಂಬ ಸಿನಿಮಾದ ಕಥೆ ಕೂಡ ಇವರದ್ದೇ. ಈ ಖ್ಯಾತ ಕಥೆಗಾರ ಟಿ.ಕೆ ದಯಾನಂದ್ ಮೊದಲ ಬಾರಿಗೆ ನ್ಯೂಸ್ಫಸ್ಟ್ ಜತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತಾಡಿದ್ದಾರೆ. ಅದರಲ್ಲೂ ಬೆಲ್ ಬಾಟಂ ಸಿನಿಮಾ ಹಿಟ್ ಆಗುವ ಮುನ್ನವೇ ನಟ ರಿಷಬ್ ಶೆಟ್ಟಿ ಬೌನರ್ಸ್ ಕರೆ ತಂದಿದ್ದ ಬಗ್ಗೆ ಬಾಯಿಬಿಟ್ಟಿದ್ದಾರೆ.
ಈ ಸಂಬಂಧ ಮಾತಾಡಿದ ಟಿ.ಕೆ ದಯಾನಂದ್, ಬೆಲ್ ಬಾಟಂ ಸಿನಿಮಾ ರಿಲೀಸ್ ಆದ ಮೊದಲ ದಿನಾನೇ ಫ್ಲಾಪ್ ಆಯಿತು. ಪ್ರೀಮಿಯರ್ನಲ್ಲೂ ಅಂತಹ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಹೀಗಾಗಿ ಸ್ಪಲ್ಪ ಅಳುಕು ಶುರುವಾಯ್ತು. ಮರುದಿನ ಫಸ್ಟ್ ಡೇ ಮಾರ್ನಿಂಗ್ ಶೋನಲ್ಲಿ ಫುಲ್ ಖಾಲಿ ಖಾಲಿ ಇತ್ತು. ಈ ಸಿನಿಮಾ ಸೊಲುತ್ತೆ ಎಂದು ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಆದರೆ, ಎಲ್ಲರಿಗೂ ಶಾಕ್ ಎಂಬಂತೆ ಸಿನಿಮಾ ಹಿಟ್ ಆಯ್ತು ಎಂದರು.
ಹೀಗೆ ಮುಂದುವರಿದು ಮಾತಾಡಿದ ದಯಾನಂದ್ ಅವರು, ರಿಷಬ್ ಶೆಟ್ಟಿ ತಾನು ಹೀರೋ ಎಂದು ಬೌನರ್ಸ್ ಕರೆದುಕೊಂಡು ಬಗ್ಗೆ ಹಾಸ್ಯಕರ ಘಟನೆ ಬಿಚ್ಚಿಟ್ಟರು. ರಿಷಬ್ ಶೆಟ್ಟಿ ನಾನು ಹೀರೋ ಆಗಿ ಬಂದರೇ ತುಂಬಾ ಜನ ಬರುತ್ತಾರೆ ಎಂದು ಭಾವಿಸಿ ಬೌನರ್ಸ್ ಕೂಡ ಕರೆದುಕೊಂಡು ಬಂದಿದ್ದರು. ಆದರೆ ಚಿತ್ರ ಮಂದಿರದಲ್ಲಿ ಸ್ಪಲ್ಪ ಜನ ಮಾತ್ರ ಇದ್ದರು. ಇದರಿಂದ ರಿಷಬ್ ಮತ್ತು ನಮಗೆ ಬಹಳ ಬೇಸರ ಆಗಿತ್ತು. ಈ ಘಟನೆಯನ್ನು ಈಗಲೂ ರಿಷಬ್ ಸಿಕ್ಕಾಗ ನೆನೆಯುತ್ತಾರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ