newsfirstkannada.com

ಪಂಚಾಯತ್‌ ಫೈಟ್‌ನಲ್ಲೂ ಮುನ್ನಡೆ ಸಾಧಿಸಿದ ದೀದಿ; ಹೊಡೆದಾಟ, ಬಡಿದಾಟದಲ್ಲೇ ಬಂಗಾಳದಲ್ಲಿ ರೋಚಕ ರಿಸಲ್ಟ್​

Share :

11-07-2023

  ಪಶ್ಚಿಮ ಬಂಗಾಳದ ಪಂಚಾಯತ್‌ನಲ್ಲಿ ಟಿಎಂಸಿ, ಬಿಜೆಪಿ ಫೈಟ್!

  ಕಳೆದ ಬಾರಿ ಚುನಾವಣೆಯಲ್ಲಿ ಕ್ಲೀನ್‌ಸ್ವೀಪ್ ಮಾಡಿದ್ದ ದೀದಿ

  ಕಾಂಗ್ರೆಸ್, ಎಡಪಕ್ಷಗಳ ಹೋರಾಟ ಆಟಕ್ಕುಂಟು ಲೆಕ್ಕಕ್ಕಿಲ್ವಾ?

ಕೋಲ್ಕತ್ತಾ: ಹೊಡೆದಾಟ, ಬಡಿದಾಟ, ರಕ್ತಪಾತಕ್ಕೆ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಸಾಕ್ಷಿಯಾಗಿತ್ತು. ಇಂದು ಟಿಎಂಸಿ, ಬಿಜೆಪಿಯ ಜಿದ್ದಾಜಿದ್ದಿನ ಪಂಚಾಯತ್ ಫಲಿತಾಂಶ ಹೊರ ಬೀಳ್ತಿದೆ. ಬೆಳಗ್ಗೆಯಿಂದಲೇ ಆರಂಭವಾಗಿರುವ ಮತ ಎಣಿಕೆಯಲ್ಲಿ ಟಿಎಂಸಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಬೆಂಬಲಿಗರು ಗದ್ದಲ, ಗಲಾಟೆಯ ಮಧ್ಯೆ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಕ್ಷಣ, ಕ್ಷಣಕ್ಕೂ ಪಂಚಾಯತ್ ಚುನಾವಣೆಯ ರಿಸಲ್ಟ್ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಶನಿವಾರ ಅಂದ್ರೆ ಜೂನ್ 8ರಂದು ಪಶ್ಚಿಮ ಬಂಗಾಳದಲ್ಲಿ ಗ್ರಾಮ ಪಂಚಾಯತಿ, ಪಂಚಾಯತ್ ಸಮಿತಿ, ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ‌ಒಟ್ಟು 63,229 ಪಂಚಾಯತ್ ಸದಸ್ಯ ಸ್ಥಾನಗಳಿಗೆ ಮತದಾನ ಆಗಿತ್ತು. ಸದ್ಯದ ಮತ ಎಣಿಕೆಯ ಮಾಹಿತಿ ಪ್ರಕಾರ ಟಿಎಂಸಿ ಪಕ್ಷಕ್ಕೆ 3,702 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 3,167 ಸ್ಥಾನಗಳಲ್ಲಿ ಟಿಎಂಸಿ ಪಕ್ಷಕ್ಕೆ ‌ಮುನ್ನಡೆ ಸಿಕ್ಕಿದೆ. ಬಿಜೆಪಿ ಪಕ್ಷಕ್ಕೆ 673 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 782 ಸ್ಥಾನಗಳಲ್ಲಿ ಬಿಜೆಪಿ ಪಕ್ಷ ಮುನ್ನಡೆಯಲ್ಲಿದೆ. ಸಿಪಿಐ(ಎಂ) ಪಕ್ಷಕ್ಕೆ 241 ಸ್ಥಾನಗಳಲ್ಲಿ ಗೆಲುವು, 627 ಸ್ಥಾನಗಳಲ್ಲಿ ಮುನ್ನಡೆ ಇದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಯಾವುದೇ ಚೇತರಿಕೆಯನ್ನು ಕಂಡಿಲ್ಲ.

ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಟಿಎಂಸಿ, ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್ ನಡೆದಿದ್ದರಿಂದ ಮತ ಎಣಿಕೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. 61 ಸಾವಿರ ಬೂತ್‌ಗಳಲ್ಲಿ ಮತದಾನ ನಡೆದಿದ್ದು, 696 ಬೂತ್‌ಗಳಲ್ಲಿ ಮರು ಮತದಾನ ನಡೆದಿತ್ತು. ಹೊಡೆದಾಟ, ಬಡಿದಾಟದ ಮಧ್ಯೆ ಬ್ಯಾಲೆಟ್ ಬಾಕ್ಸ್ ಹೊತ್ತು ಓಡುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಕೊನೆಗೆ ಪೊಲೀಸರು ಬಿಸಾಕಿದ್ದ ಬ್ಯಾಲೆಟ್ ಬಾಕ್ಸ್‌ಗಳನ್ನ ಹುಡುಕಿ, ಹುಡುಕಿ ವಾಪಸ್ ತಂದಿದ್ದರು. ಮತ ಎಣಿಕೆ ಕೇಂದ್ರದ ಹೊರಗೆ ಕಚ್ಚಾ ಬಾಂಬ್ ಕೂಡ ಸ್ಫೋಟಿಸಲಾಗಿದೆ. ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿರುವ ಎಣಿಕೆ ಕೇಂದ್ರದ ಹೊರಗೆ ಈ ಘಟನೆ ನಡೆದಿದೆ. ಕಳೆದ ಬಾರಿಯ ಪಂಚಾಯ್‌ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಎಲ್ಲಾ 22 ಜಿಲ್ಲಾ ಪರಿಷತ್ ಗೆದ್ದಿತ್ತು. ಶೇಕಡಾ 90ರಷ್ಟು ಸೀಟುಗಳನ್ನು ಗೆದ್ದಿದ್ದ ಟಿಎಂಸಿಗೆ ಈ ಬಾರಿಯ ಚುನಾವಣೆ ಫಲಿತಾಂಶ ಪ್ರತಿಷ್ಟೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಂಚಾಯತ್‌ ಫೈಟ್‌ನಲ್ಲೂ ಮುನ್ನಡೆ ಸಾಧಿಸಿದ ದೀದಿ; ಹೊಡೆದಾಟ, ಬಡಿದಾಟದಲ್ಲೇ ಬಂಗಾಳದಲ್ಲಿ ರೋಚಕ ರಿಸಲ್ಟ್​

https://newsfirstlive.com/wp-content/uploads/2023/07/Mamata-Banerjee-1.jpg

Load More