newsfirstkannada.com

Watch: ಕೊನೆ ಓವರ್​, ಕೊನೆ ಎಸೆತ.. 1 ಬಾಲ್​​ಗೆ 18 ರನ್​ ಚಚ್ಚಿಸಿಕೊಂಡ ಕ್ಯಾಪ್ಟನ್​; ಭಾರೀ ಮುಖಭಂಗ

Share :

14-06-2023

  TNPLನಲ್ಲಿ ಒಂದಾದ ಮೇಲೆ ಒಂದರಂತೆ 4 ನೋ ಬಾಲ್

  ಸ್ಪಾರ್ಟನ್ಸ್ ಕ್ಯಾಪ್ಟನ್​ ಅಭಿಷೇಕ್ ಎಸೆದ ಕೊನೇ ಬಾಲ್​ ಹೇಗಿತ್ತು..?

  ಆದರೂ ಈ ಪಂದ್ಯದಲ್ಲಿ ಗೆಲುವು ಮಾತ್ರ ಈ ತಂಡಕ್ಕೆ ಸಿಕ್ಕಿತು..!

IPL ಬಂದ ಮೇಲಂತೂ ಚುಟುಕು ಕ್ರಿಕೆಟ್​ ಟೂರ್ನಿಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿವೆ. ಸದ್ಯ ತಮಿಳುನಾಡು ಪ್ರೀಮಿಯರ್​ ಲೀಗ್ (TNPL) ನಡೆಯುತ್ತಿದ್ದು ತಂಡವೊಂದರ ಕ್ಯಾಪ್ಟನ್​ ಬರೋಬ್ಬರಿ 1 ಬಾಲ್​ಗೆ 18 ರನ್​ಗಳನ್ನು ಕೊಟ್ಟು ಭಾರೀ ಮುಖಭಂಗ ಅನುಭವಿಸಿದ್ದಾರೆ.

ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳು TNPLನಲ್ಲಿ ಭಾಗವಹಿಸಿದ್ದವು. ಸೇಲಂ ಸ್ಪಾರ್ಟನ್ಸ್ ತಂಡದ ಕ್ಯಾಪ್ಟನ್​ ಅಭಿಷೇಕ್​ ತನ್ವರ್ 20ನೇ ಓವರ್​ನ ಕೊನೆ ಬಾಲ್​ ಅನ್ನು ಹಾಕುತ್ತಿದ್ದರು. ಬಾಲ್​ ಕ್ಲೀನ್​ ಬೋಲ್ಡ್​ ಆಗಿತ್ತು. ಆದ್ರೆ ನೋ ಬಾಲ್​ ಎಂದು ಅಂಪೈರ್​ ಹೇಳಿದರು. ಹೀಗಾಗಿ ಮತ್ತೆ ಬೌಲ್​ ಮಾಡಲು ಬಂದ ಅಭಿಷೇಕ್​ ಮತ್ತೊಂದು ನೋ ಬಾಲ್​ ಹಾಕಿದ್ದರಿಂದ ಬ್ಯಾಟ್ಸ್​ಮನ್​ ಭರ್ಜರಿ ಸಿಕ್ಸರ್​ ಬಾರಿಸಿದರು. ಇದರಿಂದು ಒಟ್ಟು 8 ರನ್​ಗಳು ಬಂದವು.

ಮತ್ತೆ ಇನ್ನೊಂದು ಬಾಲ್​ ಕೂಡ ನೋ ಬಾಲ್ ಎಸೆದರು. ಇದರಲ್ಲಿ 2 ರನ್​ ಗಳಿಸಿದರು. ಒಟ್ಟು 11 ರನ್​ ಬಂದಂತೆ ಆದವು. ಬಳಿಕ ಬೌಲ್ ಮಾಡಿದ ಅಭಿಷೇಕ್ ವೈಡ್​ ಹಾಕಿದ್ದರಿಂದ 12 ರನ್​ ಬಂದವು. ಕೊನೆಯ ಬೌಲ್​ ಅನ್ನು ಚನ್ನಾಗಿಯೇ ಗುಡ್​ ಬಾಲ್ ಹಾಕಿದ್ರು. ಆದ್ರೆ ಬ್ಯಾಟ್ಸ್​ಮನ್​ ಸಿಕ್ಸರ್​ ಸಿಡಿಸಿದ್ದರಿಂದ ಒಂದು ಎಸೆತಕ್ಕೆ ಒಟ್ಟು 18 ರನ್​ಗಳನ್ನು ಚೆಪಾಕ್ ಸೂಪರ್ ಗಿಲ್ಲಿಸ್ ತಂಡ ಗಳಿಸಿ ದಾಖಲೆ ನಿರ್ಮಾಣ ಮಾಡಿತು. ಕೊನೆ ಓವರ್​ನಲ್ಲಿ ಒಟ್ಟು 26 ರನ್​ಗಳನ್ನು ಕ್ಯಾಪ್ಟನ್​ ಅಭಿಷೇಕ್​ ಬಿಟ್ಟುಕೊಟ್ಟರು. ಇದರಿಂದ ಚೆಪಾಕ್ ಸೂಪರ್ ಗಿಲ್ಲಿಸ್ ತಂಡ 20 ಓವರ್​ಗಲ್ಲಿ 5 ವಿಕೆಟ್​ ನಷ್ಟಕ್ಕೆ 217 ರನ್​ಗಳನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನತ್ತಿದ್ದ ಸೇಲಂ ಸ್ಪಾರ್ಟನ್ಸ್ ತಂಡ 9 ವಿಕೆಟ್​ಗಳನ್ನು ಕಳೆದುಕೊಂಡು 165 ರನ್​ಗಳನ್ನು ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು.

ಇನ್ನು ಬಗ್ಗೆ ಮಾತನಾಡಿದ ಅಭಿಷೇಕ್ ತನ್ವರ್​ ಕೊನೆ ಓವರ್​ನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. 3 ನೋ ಬಾಲ್​ಗಳಿಂದ ಅತ್ಯಂತ ದುಬಾರಿ ಓವರ್​ ಎನಿಸಿದೆ. ಸ್ಟೇಡಿಯಂನಲ್ಲಿ ಗಾಳಿ ಹೆಚ್ಚಾಗಿದ್ದರಿಂದ ಈ ರೀತಿ ಬೌಲಿಂಗ್​ ಮಾಡಲು ಕಾರಣವಾಯಿತು ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Watch: ಕೊನೆ ಓವರ್​, ಕೊನೆ ಎಸೆತ.. 1 ಬಾಲ್​​ಗೆ 18 ರನ್​ ಚಚ್ಚಿಸಿಕೊಂಡ ಕ್ಯಾಪ್ಟನ್​; ಭಾರೀ ಮುಖಭಂಗ

https://newsfirstlive.com/wp-content/uploads/2023/06/TPNL_ABHISHEK_TANWAR.jpg

Load More