newsfirstkannada.com

ಮೂರು ಸಭೆ.. ನೂರು‌ ಚಿಂತನೆ.. ಬಿಜೆಪಿಯಿಂದ ಇವತ್ತು ಮೇಜರ್ ಡಿಸಿಷನ್..!

Share :

08-06-2023

    ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕರ ಹುಡುಕಾಟ

    ಬಿಜೆಪಿಯ 66 ಶಾಸಕರಿಂದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ

    ಇವತ್ತಿನ ಸಭೆಯಲ್ಲಿ ಏನೆಲ್ಲ ಚರ್ಚೆ ಆಗುತ್ತೆ ಗೊತ್ತಾ..?

ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಹಿನ್ನಡೆ ಅನುಭವಿಸಿರುವ ಕೇಸರಿ ಪಾಳಯ ಸದ್ಯ ಮೈ ಕೊಡವಿ ಎದ್ದು ನಿಲ್ಲಲು ಸಜ್ಜಾಗಿದೆ. ಇದರಂತೆ ಇಂದು ಕಮಲ ಕಲಿಗಳು ಮೂರು ಪ್ರಮುಖ ಸಭೆಗಳನ್ನು ಆಯೋಜಿಸಿದ್ದು, ಮೂರು ಕೂಡ ಮೂರು ವಿವಿಧ ಆಯಾಮಗಳನ್ನು ಪಡೆಯಲಿದೆ.

ಸಂಘಟನೆ, ಸೋಲಿನ ಪರಾಮರ್ಶೆ, ಸರ್ಕಾರದ ವಿರುದ್ಧ ಹೋರಾಟ
ರಾಜ್ಯ ವಿಧಾನಸಭಾ ಚುನಾವಣೆ ಬಿಜೆಪಿಗೆ ನಿರೀಕ್ಷೆಗೂ ಮೀರಿದ ಹಿನ್ನಡೆ ತಂದುಕೊಟ್ಟಿದೆ. ಬಿಜೆಪಿ ನಿರೀಕ್ಷೆಯೇ ಮಾಡದಂತೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. ವಿಪರ್ಯಾಸವೆಂದರೆ, ಬಿಜೆಪಿಯಲ್ಲಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಬಲ್ಲ ಯಾವುದೇ ಮುಖಗಳು ಕಾಣುತ್ತಿಲ್ಲ. ಹೀಗಾಗಿ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ, ಇದೀಗ ಮೈ ಕೊಡವಿ ಎದ್ದು ನಿಲ್ಲಲು ರೆಡಿಯಾಗಿದೆ.

ಮತ್ತೆ ಹೋರಾಟಕ್ಕೆ ಬಿಜೆಪಿ

  • ಇಂದು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ 3 ಪ್ರಮುಖ ಸಭೆ
  • ಬೆಳಗ್ಗೆ 10:30ಕ್ಕೆ ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕರ ಸಭೆ
  • ಸಭೆಯಲ್ಲಿ ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕರ ಹುಡುಕಾಟ
  • ಹಾಲಿ ಬಿಜೆಪಿಯ 66 ಶಾಸಕರಿಂದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ
  • ಆಯ್ಕೆ‌ ಪ್ರಕ್ರಿಯೆ ನಡೆದ್ರೂ, ನಾಯಕ ಯಾರಾಗಬೇಕೆಂಬುದು ಮಾತ್ರ ನಿರ್ಧಾರ
  • ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಶೀಘ್ರ ಹೈಕಮಾಂಡ್ ಘೋಷಣೆ
  • ಮೂರು ಸಭೆ, ನೂರು‌ ಚಿಂತನೆ, ಮತ್ತೆ ಹೋರಾಟಕ್ಕೆ ಸಜ್ಜಾದ ಬಿಜೆಪಿ

ಇನ್ನು ಇಂದು ಬಿಜೆಪಿ ಕಚೇರಿಯಲ್ಲಿ ಮೂರು ಸಭೆಗಳು ನಡೆಯಲಿದ್ದು, ಮೊದಲಿಗೆ ಬೆಳಿಗ್ಗೆ 10:30 ಕ್ಕೆ ನೂತನ ಶಾಸಕರ ಸಭೆ ನಿಗದಿಪಡಿಸಲಾಗಿದೆ. ಇನ್ನು‌ ಮಧ್ಯಾಹ್ನ 3 ಗಂಟೆಗೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ, ಪರಾಭವಗೊಂಡಿರುವ ಅಭ್ಯರ್ಥಿಗಳ ಸಭೆ ನಿಗದಿಪಡಿಸಲಾಗಿದೆ. ಇತ್ತ ಸಂಜೆ 6 ಘಂಟೆಗೆ ಪಕ್ಷದ ಕಚೇರಿಯಲ್ಲಿಯೇ, ಕೋರ್ ಕಮಿಟಿ ಸಭೆ ಕೂಡ ನಡೆಯಲಿದೆ. ಇನ್ನು ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಯಾರಾಗಬೇಕೆಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಒಟ್ಟಾರೆ, ಮೂರು ಸಭೆಗಳ ಮೂಲಕ ಮೈ ಕೊಡವಿ‌ ಮೇಲೇಳಲು ಬಿಜೆಪಿ ಶತಪ್ರಯತ್ನ ನಡೆಸಿದ್ದು, ಇದರಲ್ಲಿ ಎಷ್ಟರಮಟ್ಟಿಗಿನ ಜಯ ಕಮಲ ಪಾಳಯಕ್ಕೆ ಸಿಗಲಿದೆ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರು ಸಭೆ.. ನೂರು‌ ಚಿಂತನೆ.. ಬಿಜೆಪಿಯಿಂದ ಇವತ್ತು ಮೇಜರ್ ಡಿಸಿಷನ್..!

https://newsfirstlive.com/wp-content/uploads/2023/06/BJP-1.jpg

Load More