newsfirstkannada.com

ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್.. ಕಾರು, ಆಟೋ ಮೇಲೆ ಕಲ್ಲು ಎಸೆತ

Share :

11-09-2023

  ಯೆಲ್ಲೋ ಬೋರ್ಡ್ ಇರುವ ವಾಹನದ ಮೇಲೆ ಕಲ್ಲು ತೂರಾಟ

  ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಹಿನ್ನೆಲೆ…

  ಪ್ರತಿಭಟನೆ ನಡೆಯುತ್ತಿದ್ದರೂ ವಾಹನ ಯಾಕೆ ಓಡಿಸುತ್ತಿದ್ದಕ್ಕೆ ಗರಂ

ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ರಾಜಧಾನಿಯಲ್ಲಿ ಬಂದ್ ಇದ್ದರೂ ಚಾಲಕನೊಬ್ಬ ಕಾರಿನಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ತೆರಳುತ್ತಿದ್ದನು. ಹೀಗಾಗಿ ಪ್ರತಿಭಟನಾಕಾರರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕಾರಿನ ಗ್ಲಾಸ್ ಹೊಡೆದು ಹೋಗಿದೆ. ಕಲ್ಲು ಮುಂದಿನ ಸೀಟ್​ನಲ್ಲಿ ಬಿದ್ದಿದೆ.

ಟೌನ್​ಹಾಲ್ ಬಳಿ ಪೊಲೀಸರು

ಇನ್ನು ಯೆಲ್ಲೋ ಬೋರ್ಡ್​ ಇರೋ ವಾಹನಗಳನ್ನು ರಸ್ತೆ ಮೇಲೆ ಚಾಲನೆ ಮಾಡದಂತೆ ಕೆಲವು ಕಡೆ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿ ವಾಹನಗಳನ್ನ ತಡೆಯಲಾಗುತ್ತಿದೆ. ಪ್ರತಿಭಟನೆ ನಡೆಯುತ್ತಿದ್ದರೂ ವಾಹನ ಯಾಕೆ ಓಡಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಲಾಗುತ್ತಿದೆ.

ಖಾಸಗಿ ವಾಹನಗಳು ರಸ್ತೆಗಳಿಯುತ್ತಿರುವ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕೆಲ ಸಂಘಟನೆಗಳು ಟೌನ್​ಹಾಲ್​ ಬಳಿ ಆಟೋಗಳ ಮೇಲೆ ಕಲ್ಲು ಎಸೆದಿದ್ದಾರೆ. ಪೊಲೀಸರು ಇದ್ದರೂ ಕಲ್ಲು ಎಸೆಯಲಾಗಿದೆ. ಹೀಗಾಗಿ ಸ್ಥಳದಲ್ಲೇ ಇದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್.. ಕಾರು, ಆಟೋ ಮೇಲೆ ಕಲ್ಲು ಎಸೆತ

https://newsfirstlive.com/wp-content/uploads/2023/09/CAR_STONE.jpg

Load More