ಕಾವೇರಿ ನೀರಿಗಾಗಿ ದೆಹಲಿಯಲ್ಲಿ ಡಿಸಿಎಂ DKS ಕಸರತ್ತು
ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲ್ವಾ.?
ಸೂಚನೆಯಂತೆ ನಿತ್ಯ 5 ಸಾವಿರ ಕ್ಯೂಸೆಕ್ ನೀರಿನ ಹರಿವು
ಕಾವೇರಿ ಕೊಳ್ಳದಲ್ಲಿ ನೀರಿನ ಕಿಚ್ಚು ಧಗಧಗಿಸ್ತಿದೆ. ನಿರಂತರ ಪ್ರತಿಭಟನೆ ನಡುವೆಯು ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗ್ತಿದೆ. ಪ್ರಾಧಿಕಾರದ ಸೂಚನೆಯಂತೆ ನಿತ್ಯವೂ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆಗಿದೆ. ಇತ್ತ, ಕಾನೂನು ಸಮರ ಎದುರಿಸಲು ಕರ್ನಾಟಕ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿದೆ.
ಮುಂಗಾರಿನ ಮುನಿಸು ಕಾವೇರಿಯನ್ನ ಬರಿದಾಗಿಸಿದೆ. ವರ ತೋರದ ವರುಣ ಬರಕ್ಕೆ ಆಹ್ವಾನ ಕೊಟ್ಟು ಮೌನಕ್ಕೆ ಜಾರಿದ್ದಾನೆ. ಇತ್ತ, ಮಳೆಯನ್ನೇ ನಂಬಿ ಕೂತಿದ್ದ ಜನ ಆಕಾಶದತ್ತ ಚಿತ್ತ ನೆಟ್ಟು ಕೂತಿದ್ದಾರೆ. ಬಿದ್ದ ಅಲ್ಪ ಮಳೆಗೆ ಅರೆ ತುಂಬಿದ್ದ ಕನ್ನಂಬಾಡಿ ಬರಿದಾಗುತ್ತಿದೆ. ಇರೋ ಹನಿ ನೀರಿಗೂ ಕಾನೂನು ಪ್ರಕಾರ ಕನ್ನ ಬೀಳ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾವೇರಿ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಜಲಕಂಟಕದ ಭೀತಿ
ತಮಿಳುನಾಡಿಗೆ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ಪ್ರಾಧಿಕಾರ ಆದೇಶ ನೀಡಿತ್ತು. ಅದರಂತೆ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಹೀಗಾಗಿ ಕಾವೇರಿಯ ಒಡಲು ಬತ್ತಿ ಹೋಗುತ್ತಿದೆ. ಈಗಾಗಲೇ ಕನ್ನಂಬಾಡಿ ಕಟ್ಟೆಯಲ್ಲಿ ನೀರು 100 ಅಡಿಗೆ ಕುಸಿತಕಂಡಿದೆ. ಹೀಗಾಗಿ ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಜಲಕಂಟಕದ ಭೀತಿ ಶುರುವಾಗಿದೆ. ಕುಡಿಯಲು ಕೂಡ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಹೆಚ್ಚಾಗಿದೆ. ಈ ನಡುವೆ ಮಂಡ್ಯ ಭಾಗದಲ್ಲಿ ಪ್ರತಿಭಟನಾ ಕಾವು ಜೋರಾಗಿದೆ.
‘ಸುಪ್ರೀಂಕೋರ್ಟ್ನಲ್ಲಿಂದು ‘ಕಾವೇರಿ’ಲಿದೆ ವಿಚಾರಣೆ
ಇವತ್ತು ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಕಾವೇರಿ ಜಲ ವಿವಾದ ಅರ್ಜಿ ವಿಚಾರಣೆಗೆ ಬರಲಿದೆ. ಹೀಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿರೋ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನಿನ್ನೆ ರಾಜ್ಯದ ಪರ ವಕೀಲರ ಜತೆ ಸಭೆ ನಡೆಸಿದ್ದಾರೆ. ವಕೀಲ ಮೋಹನ್ ಕಾತರಕಿ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಜೊತೆ ಸುಪ್ರೀಂಕೋರ್ಟ್‌ಗೆ ಕಾವೇರಿ ನೀರಿನ ವಾಸ್ತವ ಸ್ಥಿತಿಯ ಬಗ್ಗೆ ವಿವರಣೆ ನೀಡುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ನ್ಯಾಯವಾದಿ ಶ್ಯಾಮ್ ದಿವನ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ಸಮಾಲೋಚನೆ ನಡೆಸಿದ್ರು.
ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಚರ್ಚೆ
ನಾವೆಲ್ಲರೂ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ದೊಡ್ಡ ಹೋರಾಟ ಮಾಡಿದ್ದಾರೆ. 24 ಸಾವಿರ ಕ್ಯೂಸೆಕ್ ನೀರನ್ನು ಅವರು ಕೇಳಿದ್ರು. ನಾವು 3 ಸಾವಿರ ಕ್ಯೂಸೆಕ್ ನೀರು ಕೊಡುತ್ತೇವೆಂದು ವಾದ ಮಾಡಿದ್ದೇವು. ಕೊನೆಗೆ 15 ದಿನ 5 ಸಾವಿರ ಕ್ಯೂಸೆಕ್ ಬಿಡುವಂತೆ ಹೇಳಿದ್ದಾರೆ.
ಮುಂದಕ್ಕೆ ಏನು ಮಾಡಬೇಕು. ನಮ್ಮ ರೈತರ ಹಿತ ಕಾಯೋದು ನಮಗೆ ತುಂಬಾ ಇಂಪಾರ್ಟೆಂಟ್. ಇನ್ನು ಇರಡ್ಮೂರು ದಿನ ಮುಂದಕ್ಕೆ ಹೋಗಬಹುದು ಎನ್ನಲಾಗಿದೆ. ಹೀಗಾಗಿ ನಾವೆಲ್ಲ ಸೇರಿ ಸಭೆ ಮಾಡಿದ್ದೇವೆ.ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ
ಇನ್ನು, ಈಗಾಗಲೇ ಕಾವೇರಿ ನೀರು ಪ್ರಾಧಿಕಾರ ಸುಪ್ರೀಂಕೋರ್ಟ್‌ಗೆ ಜಲ ವಿವಾದದ ಬಗ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದೆ.
ಅಫಿಡವಿಟ್ನಲ್ಲಿ ಏನಿದೆ?
ಕಾವೇರಿ ಪ್ರಾಧಿಕಾರ ಸಲ್ಲಿಸಿರುವ ಅಫಿಡವಿಟ್ನ ಆಧಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಕಾವೇರಿ ನೀರು ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ. ಆದ್ರೆ, ಇಂದು ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ನೀರು ವಿವಾದದ ಬಗ್ಗೆ ವಿಚಾರಣೆ ನಡೆಯೋದು ಅನುಮಾನ ಎಂದು ಹೇಳಲಾಗುತ್ತಿದೆ. ಸಂವಿಧಾನ ಪೀಠದಲ್ಲಿ ಆರ್ಟಿಕಲ್ 370 ವಿಚಾರಣೆ ಇದ್ದು, ಈ ಸಂವಿಧಾನ ಪೀಠದಲ್ಲಿ ನ್ಯಾ. B.R ಗವಾಯಿಯವರು ಭಾಗಿಯಾಗಲಿದ್ದಾರೆ. ಹೀಗಾಗಿ ಇಂದು ನಡೆಯದಿದ್ರೆ ಕಾವೇರಿ ಅರ್ಜಿ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆ ಇದೆ.
ಮಳೆ ಕೈಕೊಟ್ಟಿದ್ದರಿಂದ ಕರ್ನಾಟಕ ಕೈಸುಟ್ಟುಕೊಂಡಿದೆ. ನೆರೆ ಮನೆಯ ಕಾಟ, ಸುಪ್ರೀಂಕೋರ್ಟ್‌ನ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ಹೀಗಾಗಿ ಸುಪ್ರೀಂಕೋರ್ಟ್ ನೀಡುವ ಆದೇಶದ ಮೇಲೆ ರಾಜ್ಯದ ರೈತರ ಚಿತ್ತ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ