newsfirstkannada.com

ಸಿದ್ದರಾಮಯ್ಯ ನೇತೃತ್ವದಲ್ಲಿ ಇವತ್ತು ಮಹತ್ವದ ಶಾಸಕಾಂಗ ಪಕ್ಷದ ಸಭೆ; ಅಸಮಾಧಾನಕ್ಕೆ ಬೀಳುತ್ತಾ ಬ್ರೇಕ್..?

Share :

27-07-2023

    ಸಿಎಂಗೆ ಪತ್ರ ಬರೆದ ಬೆನ್ನಲ್ಲೇ CLP ಮೀಟಿಂಗ್

    ಶಾಸಕರ ಜೊತೆ ನೇರವಾಗಿ ಚರ್ಚೆ ನಡೆಸಲಿರುವ ಸಿದ್ದು

    CLP ಸಭೆಗೂ ಮುನ್ನ ನಡೆಯಲಿದೆ ಸಂಪುಟ ಸಭೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಚಿವರ ವಿರುದ್ಧ ಕೆಲವು ಶಾಸಕರ ಅಸಮಾಧಾನ ಸ್ಫೋಟ ಹಿನ್ನೆಲೆಯಲ್ಲಿ ಇವತ್ತಿನ ಸಭೆಯು ತುಂಬಾನೇ ಮಹತ್ವ ಪಡೆದುಕೊಂಡಿದೆ.

ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಸಭೆ ನಡೆಯಲಿದ್ದು, ಎಲ್ಲಾ ಶಾಸಕರಿಗೂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಸಭೆಯಲ್ಲಿ ಸಚಿವರ ವಿರುದ್ಧದ ಅಸಮಾಧಾನದ ಬಗ್ಗೆ ಶಾಸಕರ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಂಭೀರ ಚರ್ಚೆ ನಡೆಸಲಿದ್ದಾರೆ. ಖುದ್ದು ಸಚಿವರ ಜೊತೆಗೆ ಶಾಸಕರ ಬೇಡಿಕೆಗಳ ಕುರಿತು ಸಮಾಲೋಚನೆ ಮಾಡಲಿದ್ದಾರೆ.

ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರ ಪತನಕ್ಕೆ ಪಿತೂರಿ ನಡೆಸುತ್ತಿವೆ ಎಂಬ ಆರೋಪಗಳು ಕಾಂಗ್ರೆಸ್​ ಪಾಳಯದಿಂದ ಕೇಳಿಬಂದಿವೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ‘ಸಿಂಗಾಪುರದಲ್ಲಿ ಇದ್ದುಕೊಂಡು ನಮ್ಮ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ’ ಎಂಬ ಆರೋಪವನ್ನು ಮಾಡಿದ್ದರು. ಈ ಬೆನ್ನಲ್ಲೇ, ಮುಖ್ಯಮಂತ್ರಿಗಳಿಗೆ ಕೆಲವು ಅಸಮಾಧಾನಿತ ಶಾಸಕರು ಪತ್ರ ಬರೆದಿದ್ದರೋ ವಿಚಾರ ಕೂಡ ಬಯಲಿಗೆ ಬಂದಿತ್ತು.

ಸಚಿವ ಸಂಪುಟ ಸಭೆಯೂ ನಡೆಯಲಿದೆ

ಇನ್ನು ಶಾಸಕಾಂಗ ಸಭೆಗೂ ಮುನ್ನ ಸಚಿವ ಸಂಪುಟ ಸಭೆಯೂ ನಡೆಯಲಿದೆ. ಸಂಜೆ 4 ಗಂಟೆಗೆ ಈ ಸಭೆ ನಡೆಯಲಿದ್ದು, ಶಾಸಕರ ಅಸಮಾಧಾನ ವಿಚಾರವಾಗಿ ಸಚಿವರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ನೇತೃತ್ವದಲ್ಲಿ ಇವತ್ತು ಮಹತ್ವದ ಶಾಸಕಾಂಗ ಪಕ್ಷದ ಸಭೆ; ಅಸಮಾಧಾನಕ್ಕೆ ಬೀಳುತ್ತಾ ಬ್ರೇಕ್..?

https://newsfirstlive.com/wp-content/uploads/2023/07/SIDDU-3-1.jpg

Load More