/newsfirstlive-kannada/media/post_attachments/wp-content/uploads/2023/11/CM_SIDDARAMAIAH_JANATA_DARSHANA.jpg)
ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನಡೆಯುತ್ತಿರುವ ಜನತಾ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಯಾವುದೇ ಬೇಸರವಿಲ್ಲದೆ ಬಂದಿರುವ ಜನಗಳ ಸಮಸ್ಯೆಗಳನ್ನ ಆಲಿಸಿ, ಅಲ್ಲೇ ಸ್ಥಳದಲ್ಲಿ ಪರಿಹಾರ ಸೂಚಿಸುತ್ತಿದ್ದಾರೆ. ಇದರ ಮಧ್ಯೆ ವೃದ್ಧೆಯೊಬ್ಬರು ಪ್ರೀತಿಯಿಂದ ಸಿಎಂ ಅವರ ತಲೆ ಸವರಿದ್ದಾರೆ.
CM Janata Darshan : ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ತಲೆ ಸವರಿದ ವೃದ್ಧೆ
Click Here to Watch NewsFirst Kannada Live Updates
LIVE Link : https://t.co/vIQrSuaVpj@siddaramaiah@CMofKarnataka@INCKarnataka#Siddaramaiah#JanataDarshan#KarnatakaCM#NewsFirstLive#NewsFirstKannadapic.twitter.com/rSDdivtAEr— NewsFirst Kannada (@NewsFirstKan) November 27, 2023
ವಿಶೇಷ ಚೇತನರು ಸೇರಿದಂತೆ ಎಲ್ಲರ ಅಹವಾಲು ಸ್ವೀಕಾರ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸುತ್ತಿದ್ದಾರೆ. ಅಲ್ಲದೆ ಇಂದು ಜನತಾ ದರ್ಶನ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೆಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ತುಂಬಾ ರಶ್​​ನಲ್ಲಿ ನಾನು, ನೀನು ಎಂದು ಜನರು ಸಮಸ್ಯೆಗಳನ್ನು ಸಿಎಂ ಬಳಿ ಹೇಳಿಕೊಳ್ಳುತ್ತಿದ್ದರು. ಆಗ ವಯೋವೃದ್ಧೆ ಒಬ್ಬರ ಸಮಸ್ಯೆಯನ್ನು ಕೇಳಿ ಅದಕ್ಕೆ ಪರಿಹಾರವನ್ನು ಸೂಚಿಸಿದ್ದಾರೆ. ಇದರಿಂದ ಖುಷಿಯಾದ ಅಜ್ಜಿ, ಪ್ರೀತಿಯಿಂದ ಸಿಎಂ ಸಿದ್ದರಾಮಯ್ಯರಿಗೆ ತಲೆ ಸವರಿ, ಆಶೀರ್ವಾದ ಮಾಡಿದರು. ಇದಕ್ಕೆ ಪ್ರತಿಯಾಗಿ ಸಿಎಂ ಕೂಡ ವೃದ್ಧೆಯ ತಲೆ ಸವರಿರುವುದು ಜನತಾ ದರ್ಶನದಲ್ಲಿ ಕಂಡು ಬಂದಿದೆ.
/newsfirstlive-kannada/media/post_attachments/wp-content/uploads/2023/11/CM_SIDDARAMAIAH_JANATA_DARSHANA_1.jpg)
ಹುಣಸೂರಿನಿಂದ ಸಿಎಂಗೆ ಮನವಿ ಮಾಡಲು ಬಂದಿದ್ದೇವೆ
ಮೈಸೂರಿನ ಹುಣಸೂರು ಮೂಲದ ವಿಶೇಷಚೇತನ ಮಹಿಳೆ ಕಮಲ ಎನ್ನುವರಿಗೆ ಒಂದು ಕೈ, ಒಂದು ಕಾಲು ಇಲ್ಲ. ಆದ್ರೆ ದುರದೃಷ್ಟ ಏನೆಂದರೆ, 7 ವರ್ಷದಿಂದ ಸ್ವಂತ ಸೂರು (ಮನೆ)ಗಾಗಿ ಮನವಿ ಪತ್ರ ಸಲ್ಲಿಸಿದರೂ ಯಾರು ಕೂಡ ಇವರ ಸಮಸ್ಯೆಗೆ ಪರಿಹಾರ ಸೂಚಿಸಿಲ್ಲ. ಇದರಿಂದ ನೊಂದು ಜನತಾ ದರ್ಶನದಲ್ಲಿ ಸಿಎಂರನ್ನ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
7 ವರ್ಷದಿಂದ ಮನೆಗಾಗಿ ಮನವಿ ಪತ್ರ ನೀಡಲಾಗಿದೆ. ಈವರೆಗೂ ಯಾರು ನಮ್ಮ ಸಮಸ್ಯೆಗಳನ್ನ ಕೇಳ್ತಿಲ್ಲ. ಮನೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ನಮಗೆ ರೇಷನ್ ಕಾರ್ಡ್ ಸಿಕ್ಕಿಲ್ಲ. ಆದ್ರೂ 3 ಕೆಜಿ ಅಕ್ಕಿ ನೀಡ್ತಾರೆ, ಅದು ಯಾವುದಕ್ಕೂ ಸಾಲಲ್ಲ. ಪೆನ್ಷನ್​ ಕೂಡ ಬರುತ್ತಿಲ್ಲ ಎಂದು ತನ್ನ ಅಸಹಾಯಕತೆಯನ್ನ ನ್ಯೂಸ್ ಫಸ್ಟ್ ಜೊತೆ ಹೇಳಿಕೊಂಡಿದ್ದಾರೆ.
ಪ್ರೌಢ ಶಾಲೆ ಶಿಕ್ಷಕರೊಬ್ಬರು ಮಗನಿಗೆ ಕಿಡ್ನಿ ಸಮಸ್ಯೆ
ರಾಮನಗರದ ಕನಕಪುರ ಮೂಲದ ಪ್ರೌಢ ಶಾಲೆ ಶಿಕ್ಷಕರೊಬ್ಬರು ಮಗನನ್ನು ಎತ್ತಿಕೊಂಡು ಬಂದು ಕಣ್ಣೀರು ಹಾಕುತ್ತಾ ಸಿಎಂ ಮುಂದೆ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಸದ್ಯ ನಾನು ಹಾಸನದ ಅರಸೀಕೆರೆಯ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದ್ರೆ ಮಗನಿಗೆ ಕಿಡ್ನಿ ಸಮಸ್ಯೆ ಇದೆ. ಹೀಗಾಗಿ ನನ್ನನ್ನು ಕನಕಪುರಕ್ಕೆ ವರ್ಗಾವಣೆ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು ಅರೇ ಕ್ಷಣದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗೆ ವರ್ಗಾವಣೆ ಮಾಡಿಕೊಡುವಂತೆ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us