ಇಂದು ಗ್ಯಾರಂಟಿ ಘೋಷಣೆ
ಇಕ್ಕಟ್ಟಿನಲ್ಲಿ ಇದೆ ಹಣಕಾಸು ಇಲಾಖೆ
ಭರವಸೆಯನ್ನ ಈಡೇರಿಸುತ್ತಾರಾ ಸರ್ಕಾರ?
ರಾಜ್ಯದಲ್ಲಿ ಯಾವ ಮೂಲೆಗೆ ಹೋದರು ಗ್ಯಾರಂಟಿಗಳದ್ದೇ ಭರ್ಜರಿ ಸೌಂಡು. ಜೊತೆಗೆ ಭಾರೀ ಗಲಾಟೆ. ಸದ್ಯ ಇಂದು ಇಡೀ ರಾಜ್ಯದ ಜನರು ಕಾದು ಕುಳಿತಿದ್ದಾರೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆ ಬಳಿಕ ಸಿಎಂ ಗ್ಯಾರಂಟಿಗಳನ್ನು ಘೋಷಿಸುತ್ತಾರೆ. ರಾಜ್ಯದಲ್ಲಿ ಸದ್ಯ ಗ್ಯಾರಂಟಿಗಳದ್ದೇ ಕಾರುಬಾರು, ದರ್ಬಾರು. ಸಿಎಂ ಆದಿಯಾಗಿ ಸಚಿವ, ಶಾಸಕರನ್ನು ಕೇಳೋದು ಒಂದೇ ಮಾತು. ಗ್ಯಾರಂಟಿ ಯಾವಾಗ? ಜನರು ಕೂಡ ಸರ್ಕಾರ ಗ್ಯಾರಂಟಿ ಕೊಡುತ್ತಾ ಇಲ್ವೋ? ಅಂತ ಗ್ಯಾರಂಟಿ ಭರವಸೆಗಳ ಬಗ್ಗೆ ಇನ್ನಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಇಟ್ಕೊಂಡು ಕಾಯ್ತಿದ್ದಾರೆ.
ಇಂದು ಸಚಿವ ಸಂಪುಟ ಸಭೆ, ಗ್ಯಾರಂಟಿ ಘೋಷಣೆಯತ್ತ ರಾಜ್ಯದ ಚಿತ್ತ
ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಬಳಿಕ ಕಾಂಗ್ರೆಸ್ ಸರ್ಕಾರ ಘೋಷಿಸುವ ಗ್ಯಾರಂಟಿ ಘೋಷಣೆಯತ್ತ ಇಡೀ ರಾಜ್ಯದ ಜನರು ಎದುರುನೋಡ್ತಿದ್ದಾರೆ. ಐದು ಯೋಜನೆಗಳನ್ನು ಜಾರಿ ಮಾಡ್ತೀವಿ ಎಂದಿರೋ ಸಿಎಂ ಸಿದ್ದರಾಮಯ್ಯ, ಇಂದಿನ ಸಂಪುಟದ ಸಭೆಯ ಬಳಿಕ ಘೋಷಣೆಗೆ ಅಗತ್ಯ ಸಿದ್ಧತೆ ಶುರು ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇಂದೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸೋ ಸಾಧ್ಯತೆ ದಟ್ಟವಾಗಿದೆ.
ಐದಕ್ಕೆ ಐದೂ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿರೋ ಸಿಎಂ, ಮೊದಲ ಹಂತದಲ್ಲಿ ಎರಡ್ಮೂರು ಗ್ಯಾರಂಟಿ ಜಾರಿ ಮಾಡ್ತಾರೆ ಎಂಬ ಮಾಹಿತಿ ಇದೆ. ಇಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಹಾಗೂ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡುವ ಸಾಧ್ಯತೆ ಇದೆ. ನಿರೋದ್ಯೋಗಿಗಳಿಗೆ ಹಣ ಮತ್ತು ಗೃಹಲಕ್ಷ್ಮೀ ಘೋಷಣೆ ಬಗ್ಗೆ ಕುತೂಹಲ ಮೂಡಿಸಿದೆ. ಸದ್ಯ ಸರ್ಕಾರದ ಇಂದಿನ ಗ್ಯಾರಂಟಿ ಘೋಷಣೆಯತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ. 5 ಗ್ಯಾರಂಟಿ ಯೋಜನೆಗಳು ಜಾರಿ ಆಗೋದು ಪಕ್ಕಾ ಅಂತ ಸಚಿವರು ಗ್ಯಾರಂಟಿ ಜಪ ಮಾಡ್ತಿದ್ದಾರೆ. 5 ಗ್ಯಾರಂಟಿಗಳ ಜಾರಿ ಖಚಿತ, ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದರು. ಗ್ಯಾರಂಟಿ ಜಾರಿ ಆಗೋದು ಗ್ಯಾರಂಟಿನೇ ಅಂತ ಗೃಹಸಚಿವ ಪರಮೇಶ್ವರ್ ಪುನರುಚ್ಚರಿಸಿದ್ದಾರೆ.
ಸಚಿವರು ‘ಗ್ಯಾರಂಟಿ’ ಭರವಸೆ ನೀಡಿದ್ರೆ ಇಕ್ಕಟ್ಟಿನಲ್ಲಿ ‘ಕಾಂಚಾಣ’ ಇಲಾಖೆ
ಇನ್ನು ಅತ್ತ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಸಚಿವರು ಗ್ಯಾರಂಟಿ ಕೊಡ್ತಿದ್ರೆ ಇತ್ತ ಹಣಕಾಸು ಇಲಾಖಾಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣವೇ ದೊಡ್ಡ ಸವಾಲಾಗಿದೆ ಅಂತ ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಸಿಎಂಗೆ ಹಣಕಾಸು ಸ್ಥಿತಿಗತಿಯ ವರದಿ ನೀಡಿರುವ ಅಧಿಕಾರಿಗಳು, ಹಣಕಾಸಿನ ಇತಿಮಿತಿಯಲ್ಲಿ 3 ರಿಂದ 4 ಭರವಸೆ ಸಾಧ್ಯತೆಯ ವರದಿ ಸಲ್ಲಿಸಿದ್ದಾರೆ.
5 ಯೋಜನೆಗಳ ಜಾರಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಹಣ ಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಅಂದಾಜು ಮಾಡಿದೆ ಎನ್ನಲಾಗ್ತಿದೆ. ಇಷ್ಟು ದೊಡ್ಡ ಪ್ರಮಾಣದ ಹಣ ಹೊಂದಿಸುವುದು ಹಣಕಾಸು ಇಲಾಖೆಗೆ ಕಷ್ಟವಾಗಲಿದೆ. ಯೋಜನೆ ಜಾರಿಯಾದ್ರೆ ಅಷ್ಟೊಂದು ಮೊತ್ತದ ಹಣ ಸಂಗ್ರಹ ಸವಾಲಾಗಲಿದೆ. ಜಾರಿ ಮಾಡದಿದ್ರೆ ಜನಪ್ರತಿನಿಧಿಗಳ ಒತ್ತಡ ಎದುರಿಸೋ ಅನಿವಾರ್ಯತೆ ಎದುರಾಗುತ್ತದೆ. ಒಟ್ಟಾರೆ ಒಂದ್ಕಡೆ ಇಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದು ಪಕ್ಕಾ ಅಂತಾನೇ ಹೇಳಲಾಗ್ತಿದೆ. ಸಚಿವರು ಅದನ್ನೇ ಪುನರುಚ್ಚರಿಸ್ತಿದ್ದಾರೆ. ಆದ್ರೆ ಗ್ಯಾರಂಟಿಗಳ ಜಾರಿಗೆ ಹಣ ಹೇಗೆ ಹೊಂದಿಸೋದು ಅನ್ನೋದೇ ದೊಡ್ಡ ಸವಾಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ