/newsfirstlive-kannada/media/post_attachments/wp-content/uploads/2024/08/cm-siddu2.jpg)
2 ವರ್ಷಗಳ ಬಳಿಕ ಭರ್ತಿಯಾಗಿದ್ದ ತುಂಗಭದ್ರಾ ಜಲಾಶಯಕ್ಕೆ ನಿಗದಿಯಂತೆ ಇಂದು ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ದುರಂತ ಎಂದರೆ ಸಿಎಂ ಸಿದ್ದರಾಮಯ್ಯ ಚೈನ್ ಲಿಂಕ್ ಕಟ್ ಆಗಿ ಕ್ರಸ್ಟ್ ಗೇಟ್ ಪರಿಶೀಲನೆಗೆ ಆಗಮಿಸ್ತಿರುವ ಪರಿಸ್ಥಿತಿಯ ವ್ಯಂಗ್ಯ. ಎಲ್ಲವೂ ಅಂದ್ಕೊಂಡಿದ್ರೆ ತುಂಗಭದ್ರಾ ಸಂಭ್ರಮದಲ್ಲಿ ಮೇಳೈಸಬೇಕಿತ್ತು.
/newsfirstlive-kannada/media/post_attachments/wp-content/uploads/2024/08/TUNGABHADRA-DAM-HISTORY.jpg)
ಇಂದು ಹಸಿರು ತೋರಣದಿಂದ ಸಿಂಗಾರಗೊಂಡು ನಳನಳಿಸಬೇಕಿತ್ತು. ಸಿಎಂ, ಡಿಸಿಎಂ ಸಚಿವರು, ಶಾಸಕರು ದಂಡು ಕಟ್ಟಿಕೊಂಡು ಉತ್ತರದ ಜನಗಳ ಬದುಕು ಹಸಿನಾಗಿಸುವ ಈ ಭಾಗೀರಥಿಗೆ ಬಾಗಿನ ಸಲ್ಲಿಸಬೇಕಿತ್ತು. ಈ ಪುಣ್ಯವತಿ, ಅದೇ ಹರ್ಷದ ಹೊನಲಿನಲ್ಲಿ ಕಾಯ್ತಿದ್ದಾಗ ಆಗಿದ್ದೇನು ಹೇಳಿ? ತುಂಬಿ ತುಳುಕಿದ್ದ ಜಲಾಶಯ, ಅಧಿಕಾರಿಗಳ ಯಡವಟ್ಟಿಗೆ ಈಗ ಬರಿದಾಗಿ ಕುಳಿತಿದೆ.
ಇದನ್ನೂ ಓದಿ: ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!
ಇದು ಮೂರು ರಾಜ್ಯಗಳ ಜನರ ಜೀವನಾಡಿ. ಕಲ್ಯಾಣ ಕರ್ನಾಟಕದ ಪಂಚ ಜಿಲ್ಲೆಗಳ ಜನರ ದಾಹದ ಜೊತೆ ಸಕಲ ಜೀವಚರಗಳನ್ನ ಪೋಷಿಸುವ ಜಲಾಶಯ. ಈಗ ಅದೇ ಜಲಾಶಯಕ್ಕೆ ಡ್ಯಾಂನ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಜಲಕಂಟಕ ಎದುರಾಗಿದೆ. ಕಳೆದ ಮೂರು ದಿನಗಳ ಹಿಂದೆಷ್ಟೇ ಜಲಾಶಯದ ಚೈನ್ ಲಿಂಕ್ ಕಟ್ ಆಗಿ ಕ್ರಸ್ಟ್ ಗೇಟ್ ಮುರಿದು ಹೋಗಿ, ಬದುಕು ಮುರಾಬಟ್ಟೆ ಆಗಿದೆ.
/newsfirstlive-kannada/media/post_attachments/wp-content/uploads/2024/08/Tungabadra-dam-8.jpg)
ಇದೇ ದಿನ ಸಿಎಂ ಬಾಗಿನ ಅರ್ಪಣೆಗೆ ಬರಬೇಕಿತ್ತು. ಆದ್ರೆ, ಇವತ್ತು ಸಿಎಂ ಕ್ರಸ್ಟ್ ಗೇಟ್​ಗಳ ಪರಿಶೀಲನೆಗೆ ಆಗಮಿಸ್ತಿರೋದು ವಿಪರ್ಯಾಸ. ಡ್ಯಾಂ ಸಿಂಗಾರಕ್ಕೆ ತರಿಸಲಾಗಿದ್ದ ಶಾಮಿಯಾನ ಸಾಮಾನುಗಳು, ಪ್ಲಾಸ್ಟಿಕ್ ಆನೆ ಮೂರ್ತಿಗಳು, ಶಿಲ್ಪಕಲಾ ರೀತಿಯ ಕಂಬಗಳು ಮೂಲೆ ಸೇರಿವೆ. ಘಟನೆ ನಡೆದ ತಕ್ಷಣ ಬರಬೇಕಿದ್ದ ನಾಡ ದೊರೆ ಸಿದ್ದರಾಮಯ್ಯ, ಮೂರು ದಿನಗಳ ಬಳಿಕ ಟ್ರಿಪ್​​ಗೆ ಬರ್ತಿದ್ದಾರೆ. ಜಲಾಶಯದ ಗೇಟ್​ಗಳ ಪರಿಶೀಲನೆಗಾಗಿ ಆಗಮಿಸುತ್ತಿದ್ದಾರೆ.
ಘಟನೆ ನಡೆದ ಮೂರು ದಿನಗಳ ಬಳಿಕ ಸಿಎಂ ಸಿದ್ದರಾಮಯ್ಯ ಇವತ್ತು ಮಧ್ಯಾಹ್ನ 12 ಗಂಟೆಗೆ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಸ್ಥಳ ವೀಕ್ಷಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಗೇಟ್ ಹಾನಿಗೆ ಪ್ರಮುಖ ಕಾರಣವೇನು ಅಂತಾ ತಿಳಿಯಲಿದ್ದಾರೆ. ಇತ್ತ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಡ್ಯಾಂಗೆ ಭೇಟಿ ನೀಡ್ತಿದ್ದಾರೆ. ಈಗಾಗಲೇ ತುಂಗಭದ್ರಾ ಜಲಾಶಯ ರಾಜಕಾರಣಿಗಳ ಟೂರಿಂಗ್​​ ಸ್ಪಾಟ್​​ ಆಗ್ತಿದೆ. ಈ ಘಟನೆ ನಡೆದ ದಿನವೇ ದಾವಿಸಿದ ಡಿಸಿಎಂ ಡಿಕೆಶಿ, ಅವಘಡಕ್ಕೆ ಯಾರು ಹೊಣೆಯಲ್ಲ ಅಂತ ಕ್ಲೀನ್​ಚಿಟ್​​ ಕೊಟ್ಟು ರಿಟರ್ನ್​ ಆಗಿದ್ರು. ಇದೇ ಮಾತಿಗೆ ನಿನ್ನೆ ಡ್ಯಾಂಗೆ ಭೇಟಿ ನೀಡಿದ್ದ ವಿಜಯೇಂದ್ರ, ಅಶೋಕ್​, ಬಸವರಾಜ ಬೊಮ್ಮಾಯಿ, ಘಟನೆಗೆ ರಾಜ್ಯ ಸರ್ಕಾರವೇ ಹೊಣೆ ಅಂತಾ ಕಿಡಿಕಾರಿದ್ರು.
ಇದನ್ನೂ ಓದಿ:ನೈಟ್ ಡ್ಯೂಟಿ ವೈದ್ಯೆಗೆ ರೇಪ್ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/08/TB-Dam-Gate-Cut.jpg)
ಇನ್ನೊಂದೆಡೆ ಡ್ಯಾಂ ಮೇಲೆ ಕಳೆದ ಮೂರು ದಿನಗಳಿಂದ ಸಾವಿರಾರು ವಾಹನಗಳ ಓಡಾಟ ಆಗಿದೆ. ರಾಜಕಾರಣಿಗಳು, ವಿಐಪಿಗಳ ಹಿಂದೆ ನೂರಾರು ವಾಹನ ಬರ್ತಿದ್ದು ಜಲಾಶಯದ ಬ್ರಿಡ್ಜ್​ಗೆ ಅಭದ್ರತೆ ಆತಂಕ ಸೃಷ್ಟಿಸಿದೆ. ಘಟನೆ ನಡೆದು ಮೂರು ದಿನಗಳಾಯ್ತು. ಬೇಸಿಗೆಯಲ್ಲಿ ಖಾಲಿಯಾಗಿದ್ದ ಡ್ಯಾಂನ ಗೇಟ್​​ಗಳ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಇದೀಗ ಸಿಎಂ ಭೇಟಿ ನೀಡ್ತಿದ್ದು, ಕ್ರಮ ತೆಗೆದುಕೊಳ್ತಾರಾ ಅಂತಾ ಕಾದು ನೋಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us