newsfirstkannada.com

ಜೋಡೆತ್ತು ನೇತೃತ್ವದಲ್ಲಿ ಕಾಂಗ್ರೆಸ್​​ ಸರ್ವ ಸದಸ್ಯರ ಸಭೆ; ‘ಲೋಕ’ ಗೆಲ್ಲಲು ಇವತ್ತಿನಿಂದಲೇ ಶಸ್ತ್ರಾಭ್ಯಾಸ..!

Share :

14-08-2023

    ಚುನಾವಣೆಗೆ ‘ಗ್ಯಾರಂಟಿ’ ಅಸ್ತ್ರ ಬಳಸುವುದು ಪಕ್ಕಾನಾ?

    ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ಲಾನ್

    ಇವತ್ತಿನ ಕಾಂಗ್ರೆಸ್​ ಸಭೆಯಲ್ಲಿ ಏನೆಲ್ಲ ಚರ್ಚೆ ಆಗ್ತದೆ?

ವಿಧಾನಸಭೆ ಸಮರದಲ್ಲಿ ಅಮೋಘ ಗೆಲುವು ದಾಖಲಿಸಿ ಗದ್ದುಗೆ ಏರಿದ್ದ ಕಾಂಗ್ರೆಸ್ ಈಗ ಮತ್ತೊಂದು ಸಮರಕ್ಕೆ ಸಜ್ಜಾಗ್ತಿದೆ. ಜೋಡೆತ್ತುಗಳ ಮಾರ್ಗದರ್ಶನದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಇಂದು ಕಾಂಗ್ರೆಸ್ ಕೋಟೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಲಿದೆ.

ವಿಧಾನಸಭಾ ರಣರಂಗದಲ್ಲಿ ಸೆಣಸಾಡಿ ವಿಜಯಲಕ್ಷ್ಮಿಯನ್ನ ಒಲಿಸಿಕೊಂಡಿದ್ದ ರಾಜ್ಯ ಕಾಂಗ್ರೆಸ್ ಪಡೆ ಮತ್ತೊಂದು ಮಹಾಯುದ್ದಕ್ಕೆ ಸಜ್ಜಾಗ್ತಿದೆ. 34 ವರ್ಷಗಳಲ್ಲೇ ಅತೀಹೆಚ್ಚು ಸ್ಥಾನ ಪಡೆದು, 135 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಭರ್ಜರಿ ಮೊತ್ತ ದಾಖಲಿಸಿದ್ದ ಕಾಂಗ್ರೆಸ್ ನಾಯಕರು ಈಗ ಮತ್ತೊಂದು ಪಂದ್ಯಕ್ಕೆ ಪಿಚ್ ಅಣಿಗೊಳಿಸುತ್ತಿದ್ದಾರೆ. ಲೋಕ ಸಮರದ ಶಸ್ತ್ರಾಭ್ಯಾಸಕ್ಕೆ ಸಜ್ಜಾಗಿರೋ ಕೈ ನಾಯಕರು ಗೆಲ್ಲುವ ಕುದುರೆಗಳಿಗೆ ಟೊಂಕ ಕಟ್ಟಲು ಸಿದ್ಧತೆ ನಡೆಸಿದ್ದಾರೆ.

‘ಲೋಕ‘ ಸಮರಕ್ಕೆ ಕಾಂಗ್ರೆಸ್ ಕೋಟೆಯಲ್ಲಿ ಶಸ್ತ್ರಾಭ್ಯಾಸ..!

1989ರ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಲಭಿಸಿದ ಅತಿ ದೊಡ್ಡ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ. ಈ ಗೆಲುವು ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರಿಗೆ ಹೊಸ ಬೂಸ್ಟ್ ನೀಡಿದೆ. ಇದೇ ಗೆಲುವಿನ ಓಟವನ್ನ ಮುಂದುವರೆಸಲು ಕೈ ಪಡೆ ಎಲ್ಲಾ ಚುನಾವಣೆಗಳ ಮೇಲೆ ದೃಷ್ಟಿ ನೆಟ್ಟಿದೆ.. ಸದ್ಯ 2024ರಲ್ಲಿ ನಡೆಯಲಿರುವ ಲೋಕಸಭಾ ಸಮರಕ್ಕೂ ಸಜ್ಜಾಗ್ತಿರೋ ನಾಯಕರು, ಮತ್ತೊಂದು ಗೆಲುವಿಗೆ ನೀಲಿ ನಕ್ಷೆ ರಚಿಸಿ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.
ಲೋಕ ಸಮರ ಗೆಲ್ಲುವ ಉತ್ಸಾಹದಲ್ಲಿರೋ ರಾಜ್ಯ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಇಂದು ಪಕ್ಷದ ಸರ್ವ ಸದಸ್ಯರನ್ನ ಒಟ್ಟುಗೂಡಿಸಿ ಲೋಕಸಭಾ ಸಮರದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಕಾಂಗ್ರೆಸ್ ಗದ್ದುಗೆ ಏರಿದ ಬಳಿಕ ಮೊದಲ ಸಭೆ..!

135 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್ ಅಮೋಘ ಗೆಲವು ಸಾಧಿಸಿ ಅಧಿಕಾರ ಗದ್ದುಗೆ ಏರಿದ ಬಳಿಕ ಮೊದಲ ಬಾರಿಗೆ ಸರ್ವ ಸದಸ್ಯರ ಸಭೆ ನಡೆಸಲು ಮುಂದಾಗಿದೆ. ಲೋಕಸಭಾ ಚುನಾವಣೆಯನ್ನ ಟಾರ್ಗೆಟ್ ಮಾಡಿ ಇಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಚುನಾವಣೆ ಸಿದ್ಧತೆ ಬಗ್ಗೆ ಪ್ರಮುಖ ಚರ್ಚಗೆಗಳು ನಡೆಯಲಿವೆ ಎನ್ನಲಾಗ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.

‘ಲೋಕ’ ಗೆಲ್ಲಲು ‘ಕೈ’ ಸಿದ್ಧತೆ!

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಇಂದಿರಾಗಾಂಧಿ ಭವನದಲ್ಲಿ ಕಾಂಗ್ರೆಸ್ ಸರ್ವ ಸದಸ್ಯರ ಸಭೆ ನಡೆಯಲಿದೆ.. ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಎಐಸಿಸಿ ಸದಸ್ಯರು, ಎಲ್ಲಾ ಶಾಸಕರು, ಮಾಜಿ ಸಂಸದರು, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿಗಳು.. ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಸರ್ವ ಸದಸ್ಯರ ಸಭೆಯಲ್ಲಿ ಕೆಲವೊಂದಷ್ಟು ಮಹತ್ವದ ಚರ್ಚೆಗಳು ಸಹ ನಡಯಲಿವೆ.

‘ಲೋಕ’ ಗೆಲ್ಲಲು ಶಸ್ತ್ರಾಭ್ಯಾಸ!

  • ಲೋಕಸಭಾ ಚುನಾವಣೆ ಗೆಲ್ಲಲು ಪಕ್ಷ ಸಂಘಟನೆ
  • ಚುನಾವಣೆಗೆ ‘ಗ್ಯಾರಂಟಿ’ ಅಸ್ತ್ರ ಬಳಸುವುದು
  • ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಸಿದ್ಧತೆ
  • ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ಲಾನ್
  • ಬಿಜೆಪಿ-ಜೆಡಿಎಸ್‌ನ ನಾಯಕರ ಟೀಕೆಗೆ ತಕ್ಕ ಪ್ರತಿಕ್ರಿಯೆ

ಒಟ್ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಲನ ನಡೆಸಿ ಗೆಲುವಿನ ಗದ್ದುಗೆ ಏರಿದ್ದ ಕಾಂಗ್ರೆಸ್ ನಾಯಕರು ಸದ್ಯ ಲೋಕಸಭೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಜೋಡೆತ್ತುಗಳ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ನಾಯಕರ ಈ ರಣತಂತ್ರ ಮುಂಬರುವ ಚುನಾವಣೆಯಲ್ಲಿ ವರ್ಕೌಟ್ ಆಗುತ್ತಾ ಅಂತ ಕಾದುನೋಡ್ಬೇಕಿದೆ.

ವಿಶೇಷ ವರದಿ: ಹರೀಶ್ ಕಾಕೋಳ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೋಡೆತ್ತು ನೇತೃತ್ವದಲ್ಲಿ ಕಾಂಗ್ರೆಸ್​​ ಸರ್ವ ಸದಸ್ಯರ ಸಭೆ; ‘ಲೋಕ’ ಗೆಲ್ಲಲು ಇವತ್ತಿನಿಂದಲೇ ಶಸ್ತ್ರಾಭ್ಯಾಸ..!

https://newsfirstlive.com/wp-content/uploads/2023/08/DKS_SIDDU.jpg

Load More