ಸಂಬಂಧಿಕರ ಜೊತೆಯಲ್ಲಿ ಕಿತ್ತಾಟ ಮಾಡುವ ಸಾಧ್ಯತೆ ಇದೆ
ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
ಅಪರಿಚಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3:00 ರವರೆಗೆ ಇರಲಿದೆ.
ಮೇಷ ರಾಶಿ

- ಉದ್ಯೋಗದಲ್ಲಿ ಗಣನೀಯವಾದ ಬದಲಾವಣೆ
- ಧರ್ಮಶ್ರದ್ಧೆ ಈ ದಿನ ಹೆಚ್ಚಾಗಬಹುದು
- ಶತ್ರುಗಳಿಗೆ ಹೆದರಿಕೆಯನ್ನು ಹುಟ್ಟಿಸಬಹುದು
- ಹಿರಿಯರ ಮಾತಿಗೆ ಬೆಲೆ ಕೊಡಬೇಕು
- ಹೊಸ ಆಲೋಚನೆಗಳಿಗೆ ಪುಷ್ಠಿ ಸಿಗಬಹುದು
- ಅಪರಿಚಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ
- ಪ್ರತ್ಯಾಂಗಿರಾ ದೇವಿಯ ಆರಾಧನೆ ಮಾಡಿ
ವೃಷಭ

- ವೃತ್ತಿಯಲ್ಲಿ ತುಂಬಾ ಶ್ರಮ ಪಡುತ್ತೀರಿ
- ರಾಜಕೀಯದವರು ಜಾಗ್ರತೆಯಿಂದ ಇರಬೇಕು
- ಸಂಬಂಧಿಕರ ಜೊತೆಯಲ್ಲಿ ಕಿತ್ತಾಟ ಮಾಡುವ ಸಾಧ್ಯತೆ ಇದೆ
- ಹಣದ ವಿಚಾರದಲ್ಲಿ ಗೊಂದಲವಿದೆ
- ಉದ್ವೇಗಕ್ಕೆ ಒಳಗಾಗುವುದು ಬೇಡ
- ಶಾಂತ ಮನಸ್ಸಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
- ನವಗ್ರಹರ ಆರಾಧನೆ ಮಾಡಿ
ಮಿಥುನ

- ಅನಿರೀಕ್ಷಿತ ವ್ಯಾಪಾರ ಅಥವಾ ವ್ಯವಹಾರದಲ್ಲಿ ಬೆಳವಣಿಗೆ ಕಾಣುತ್ತೀರಿ
- ಸಂಬಂಧಿಕರ ಭೇಟಿಯಿಂದ ಬೇಸರ ಆಗಲಿದೆ
- ಮನೋಬಲ ಹೆಚ್ಚು ಮಾಡಿಕೊಳ್ಳಬೇಕು
- ಸಮಾಜದಲ್ಲಿ ಮಾತನಾಡುವಾಗ ಎಚ್ಚರಿಕೆವಹಿಸಿ
- ಧಾರ್ಮಿಕ ನಿಯಮಗಳ್ನು ಪಾಲಿಸಿ
- ಜನರಿಗೆ ಸಹಾಯ ಮಾಡುವುದನ್ನ ಮರೆಯಬೇಡಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ

- ನಿಮ್ಮ ಶಕ್ತಿ ಮೀರಿ ಮಾಡಿದ ಕೆಲಸಗಳಿಂದ ಲಾಭ
- ಅನುಪಯುಕ್ತ ವಿಷಯಗಳಿಂದ ಸಮಯ ವ್ಯರ್ಥ ಆಗಲಿದೆ
- ವಿದ್ಯಾರ್ಥಿಗಳಿಗೆ ತುಂಬಾ ಆತಂಕದ ಸಮಯ
- ನಿಮ್ಮ ರಹಸ್ಯ ವಿಚಾರಗಳು ಬೇರೆಯವರಿಗೆ ಗೊತ್ತಾಗೋದು ಬೇಡ
- ಮನೆಯಲ್ಲಿ ಅತಿಯಾದ ಶಿಸ್ತು ಬೇಡ
- ನಿಮ್ಮ ಕರ್ತವ್ಯದ ಬಗ್ಗೆ ಒಲವಿರಲಿ
- ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ
ಸಿಂಹ

- ಬಂಧುಗಳಿಂದ ಉತ್ತಮವಾದ ಸುದ್ದಿ ಸಿಗಲಿದೆ
- ಸ್ನೇಹಿತರ ಬೆಂಬಲ ನಿಮಗೆ ಪೂರ್ಣವಾಗಿರಲಿದೆ
- ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿ ಇರಲಿದೆ
- ಹಿರಿಯರ ಸಂತೋಷಕ್ಕೆ ಕಾರಣರಾಗುತ್ತೀರಿ
- ಸರ್ಕಾರಿ ಉದ್ಯೋಗದಲ್ಲಿ ನಿಧಾನಗತಿ ಅದರಿಂದ ಬೇಸರ
- ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ
- ಈಶ್ವರನ ಆರಾಧನೆ ಮಾಡಿ
ಕನ್ಯಾ

- ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆಯಿರಿ
- ಆರೋಗ್ಯದ ಬಗ್ಗೆ ಚಿಂತನೆಯನ್ನು ಮಾಡಿ
- ಕೋಪದಿಂದ ದಿನಚರಿ ಹಾಳಾಗಬಹುದು
- ನರಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು
- ಜನರ ಮೇಲೆ ನಿಮಗೆ ದ್ವೇಷ ಒಳ್ಳೆಯದಲ್ಲ
- ಮನೆಯಲ್ಲಿ ಉತ್ತಮವಾದ ವಾತಾವರಣವನ್ನು ಕಾಪಾಡಬೇಕು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ತುಲಾ

- ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸದ ಬಗ್ಗೆ ಚರ್ಚೆ ನಡೆಯಲಿದೆ
- ಸಮಾಜ ಕಲ್ಯಾಣದ ಕಾರ್ಯದಲ್ಲಿ ನೀವು ತೊಡಗುತ್ತೀರಿ
- ಕುಟುಂಬದಲ್ಲಿ ಸಾಮರಸ್ಯವನ್ನು ಹೊಂದುತ್ತೀರಿ ಅದು ಸಂತೋಷ ಕೊಡಲಿದೆ
- ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಬೇಡ
- ಮಕ್ಕಳಿಗೆ ಅನುಕೂಲವಾಗುವ ಸಮಯ
- ಆದಾಯದ ಮೂಲ ಹೆಚ್ಚಾಗುವುದರಿಂದ ತೃಪ್ತಿ ಕೊಡಲಿದೆ
- ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ನಿಮ್ಮ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿಕೊಳ್ಳಿ
- ಇಂದು ದುಡ್ಡಿನ ವ್ಯವಹಾರ ಬೇಡ
- ಮನೆಯಲ್ಲಿ ಕುಳಿತು ವ್ಯವಹಾರದ ಚಿಂತನೆಯನ್ನು ಮಾಡಿ
- ಪ್ರೀತಿ ಪ್ರೇಮದಿಂದ ದೂರ ಉಳಿಯುವುದು ಒಳ್ಳೆಯದು
- ತಲೆಗೆ ಸಂಬಂಧಿಸಿದ ಅಥವಾ ಕಣ್ಣಿಗೆ ಸಂಬಂಧಿಸಿದ ತೊಂದರೆ ಕಾಡಬಹುದು
- ಬಂಧುಗಳಿಂದ ವಿರಸ ಬೇಸರ ಆಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ ಅದಕ್ಕೆ ಕಾರಣ ನೀವೆ
- ಕೋಪದಿಂದ ಯಾವುದಕ್ಕೂ ಪ್ರತಿಕ್ರಿಯಿಸಬೇಡಿ
- ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯನ್ನು ಮಾಡಿ
- ನಿಮ್ಮ ಬಗ್ಗೆ ನೀವೇ ಪರೀಕ್ಷಿಸಿಕೊಳ್ಳಿ
- ಕುಟುಂಬದ ಸಹಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
- ಒತ್ತಡ ಇರುವುದಿಲ್ಲ ಆಲಸ್ಯ ಬೇಡ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ

- ಕೆಲಸಕ್ಕಾಗಿ ಅತಿಯಾದ ಶ್ರಮ ವಹಿಸುತ್ತೀರಿ ಅತಂಕ ಪಡುತ್ತೀರಿ ಅದರ ಅಗತ್ಯವಿಲ್ಲ
- ನಿಮ್ಮ ಆಂತರಿಕ ಕೋಪದಿಂದ ಹಿನ್ನಡೆ
- ನಿಂತು ಹೋದ ಕೆಲಸಗಳಿಗೆ ಚಾಲನೆ ಕೊಡಿ ಯಶಸ್ಸಿದೆ
- ಆರೋಗ್ಯ ಬಹಳ ಮುಖ್ಯ ಗಮನಿಸಿಕೊಳ್ಳಿ
- ಮಾಂತ್ರಿಕ ದೋಷ ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ತೊಂದರೆ ಮಾಡಬಹುದು
- ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಇರಲಿ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕುಂಭ

- ಉತ್ತಮವಾದ ಬುದ್ಧಿ ಇರುವವರ ಒಡನಾಟವಿರಲಿ
- ಸಕಾಲಕ್ಕೆ ಕೆಲಸ ಪೂರ್ಣ ಮಾಡದೆ ಅವಮಾನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಲಿದೆ
- ಹಿರಿಯರ ತಪ್ಪು ಜೀವನಕ್ಕೆ ದಾರಿ ಮಾಡಿಕೊಡಲಿದೆ
- ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಜಯವನ್ನು ಕೊಡಲಿದೆ
- ಅವಿವಾಹಿತರಿಗೆ ಬೇಸರದ ಸಂಗತಿ
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ನಿಮ್ಮ ದಿನಚರಿ ಬದಲಾಯಿಸಬೇಡಿ
- ಆಪ್ತರಿಂದ ಅಥವಾ ಮಿತ್ರರಿಂದ ವಿರಹದ ಚಿಂತೆ
- ಅತಿಯಾದ ಆಲೋಚನೆಯಿಂದ ಅವಕಾಶ ವಂಚಿತರಾಗುತ್ತೀರಿ
- ಮಕ್ಕಳ ಸಮಸ್ಯೆಗಳ ಬಗ್ಗೆ ಗಮನಹರಿಸಿ
- ಸಾಲದ ಒತ್ತಡಗಳಿಂದ ಮುಕ್ತಿ ಇದೆ
- ಎಲ್ಲಾ ಜವಾಬ್ದಾರಿಯಿಂದ ವರ್ತಿಸಬೇಕು
- ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ