ದೀರ್ಘಕಾಲದ ಖಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು
ಸಾಂಸಾರಿಕವಾಗಿ ಘರ್ಷಣೆ ಮಾಡಿಕೊಳ್ಳಬೇಡಿ ತೊಂದರೆ ಇದೆ..!
ಭಾವನೆಗಳಿಗೆ ಬೆಲೆಯಿಲ್ವಾ ಎಂಬುದು ನಿಮ್ಮ ಮನಸಿನಲ್ಲಿ ಬರಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ

- ಹಿರಿಯರ ಆಶೀರ್ವಾದ, ಮಾರ್ಗದರ್ಶನ ಸಿಗುವ ದಿನ
- ಸಂಶೋಧನ ನಿರತರರಿಗೆ ಅನುಕೂಲವಿದೆ
- ವಿದ್ಯಾರ್ಥಿಗಳಿಗೆ ಸರಿಯಾದ ಸಮಯ ನಿರಂತರ ಅಧ್ಯಯನ ಇದ್ದರೆ ಒಳ್ಳೆಯದು
- ವ್ಯವಹಾರಕ್ಕೆ ವಿಶೇಷವಾದ ಆಸಕ್ತಿ ತೋರಿಸುತ್ತೀರಿ
- ಜೀವನ ಶೈಲಿಯಲ್ಲಿ ಬದಲಾವಣೆ ಕಾಣುತ್ತೀರಿ
- ನಿಮ್ಮ ಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತೀರಿ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಷಭ

- ಸ್ವಲ್ಪ ಒತ್ತಡವನ್ನು ದೂರ ಮಾಡಿಕೊಳ್ಳಿ
- ಅಸೂಯಾ ಪರರನ್ನು ದೂರಮಾಡಿಕೊಳ್ಳಿ
- ಕುಟುಂಬದಲ್ಲಿ ಸಾಮರಸ್ಯ ಹಾಳು ಮಾಡುವ ಜನರ ಬಗ್ಗೆ ಗಮನವಿರಲಿ
- ಮಾನಸಿಕ ಗಟ್ಟಿತನ ನಿಮ್ಮನ್ನು ಕಾಯಲಿದೆ
- ದೊಡ್ಡವರ ಜೊತೆ ಉತ್ತಮವಾದ ವಿಚಾರವನ್ನು ಚರ್ಚಿಸುತ್ತೀರಿ
- ಆರ್ಥಿಕವಾದ ಸಮಾಧಾನವನ್ನು ಇಟ್ಟುಕೊಳ್ಳುತ್ತೀರಿ
- ನವಗ್ರಹರ ಆರಾಧನೆ ಮಾಡಿ
ಮಿಥುನ

- ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ಸಂತೋಷ ಪಡುತ್ತೀರಿ
- ರಾಜಕೀಯ ವಿಚಾರದಲ್ಲಿ ಎಚ್ಚರಿಕೆವಹಿಸಿ
- ಸ್ನೇಹಿತರ ಜೊತೆಯಲ್ಲಿ ಸಮಯ ವ್ಯರ್ಥ ಮಾಡಬಹುದು
- ದೀರ್ಘಕಾಲದ ಖಾಯಿಲೆ ಇರುವವರಿಗೆ ಸಮಸ್ಯೆಯಾಗಬಹುದು
- ಮನೆಯ ಒಟ್ಟು ಸುಧಾರಣೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ
- ಉದ್ಯೋಗ ಆಕಾಂಕ್ಷಿಗಳಿಗೆ ಸ್ವಲ್ಪ ನಿರೀಕ್ಷೆಯ ಸಮಯ
- ಕುಲದೇವತಾ ಆರಾಧನೆ ಮಾಡಿ
ಕಟಕ

- ನಿಮ್ಮ ವ್ಯಕ್ತಿತ್ವಕ್ಕೆ ಸಮಾಜದಲ್ಲಿ ಮನ್ನಣೆ ಇದೆಯಾ
- ಇಂದು ಪ್ರೇಮಿಗಳಿಗೆ ತುಂಬಾ ಅನುಕೂಲವಿದೆ
- ಉದ್ಯೋಗದಲ್ಲಿ ಸ್ವಲ್ಪ ಮಟ್ಟಿನ ಸಾಧನೆಗೆ ಅವಕಾಶವಿದೆ
- ಬಂಧುಗಳ ಬಗ್ಗೆ ನಿಮಗೆ ಮೆಚ್ಚುಗೆ ಇರಲಿದೆ
- ಹಿರಿಯರ ಸಹಾಯದಿಂದ ಕೆಲವು ಕೆಲಸಗಳು ಆಗಲಿದೆ
- ಮಕ್ಕಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಸಾಂಸಾರಿಕವಾಗಿ ಘರ್ಷಣೆ ಮಾಡಿಕೊಳ್ಳಬೇಡಿ ತೊಂದರೆ ಇದೆ
- ಹೊಟ್ಟೆಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆ ಕಾಣಬಹುದು
- ನಿಮ್ಮ ಕರ್ತವ್ಯದಿಂದ ನಿಮಗೆ ಗೌರವ ಲಭಿಸಲಿದೆ
- ಬೇರೆಯವರ ಎಲ್ಲಾ ವಿಚಾರಗಳಿಗೂ ಮಾದರಿಯಾಗುತ್ತೀರಿ
- ಸಾಲದ ವಿಚಾರ ಈ ದಿನ ಬೇಡ
- ದೂರದ ಪ್ರಯಾಣದ ಸಾಧ್ಯತೆ ಒಳ್ಳೆಯದಾಗಲಿದೆ
- ನವಗ್ರಹರ ಆರಾಧನೆ ಮಾಡಿ
ಕನ್ಯಾ

- ಇಂದು ಹೆಚ್ಚು ಶ್ರಮದ ದಿನ
- ಈ ದಿನ ಮನಸ್ಸು ಶಾಂತವಾಗಿರಲಿ
- ಪ್ರಮುಖ ಕೆಲಸಗಳು ನೆರವೇರಬಹುದು
- ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ
- ಅಪರಿಚಿತರು ನಿಮಗೆ ತೊಂದರೆ ಕೊಡಬಹುದು
- ಸಂಬಂಧದಲ್ಲಿ ಅಪೂರ್ಣತೆಯ ಭಾವನೆ ನಿಮ್ಮ ಮನಸ್ಸಿನಲ್ಲಿರಲಿದೆ
- ಲಕ್ಷ್ಮಿ ನಾರಾಯಣ ಸ್ತೋತ್ರವನ್ನು ಶ್ರವಣ ಮಾಡಿ
ತುಲಾ

- ಮಹತ್ವಾಕಾಂಕ್ಷೆಗಳು ಈಡೇರುವ ದಿನ
- ಕುಟುಂಬದಲ್ಲಿ ಎಲ್ಲಾ ಸದಸ್ಯರು ಸಂತೋಷವಾಗಿರುತ್ತಾರೆ
- ಹೊಸ ವ್ಯಾಪಾರ,ವ್ಯವಹಾರ ಆರಂಭಿಸಲು ಸುಸಮಯ
- ಉತ್ತಮವಾದ ಸಂಪರ್ಕದಿಂದ ಅನುಕೂಲವಿದೆ
- ಹೆಚ್ಚಿನ ಅಭ್ಯಾಸಕ್ಕೆ ಅವಕಾಶವಿದೆ ಉಪಯೋಗಿಸಿಕೊಳ್ಳಿ
- ನಿಮ್ಮ ಕನಸಿನ ಕಾರ್ಯಕ್ಕೆ ಶುಭವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
- ಸ್ವಾರ್ಥಕ್ಕಾಗಿ ಜನರು ನಿಮ್ಮ ಹಿಂದೆ ಇರುತ್ತಾರೆ
- ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯರಾಗುತ್ತೀರಿ
- ಭಾವನೆಗಳ ಬೆಲೆ ಇಲ್ಲವಾ ಎಂಬ ಮಾತು ನಿಮ್ಮ ಮನಸ್ಸಲ್ಲಿ ಬರಲಿದೆ
- ಯಾವುದೇ ದೃಢವಾದ ನಿರ್ಧಾರ ಮಾಡಲು ಸಮಯವಲ್ಲ
- ಸ್ನೇಹಿತರಿಂದ ಅವಮಾನ ಆಗುವ ಸಾಧ್ಯತೆ ಇದೆ
- ಅಯ್ಯಪ್ಪ ಸ್ವಾಮಿಯನ್ನು ಆರಾಧನೆ ಮಾಡಿ
ಧನುಸ್ಸು

- ಕೆಲಸ ಕಾರ್ಯಗಳಲ್ಲಿ ಬದಲಾವಣೆಗೆ ಮುಂದಾಗುತ್ತೀರಿ
- ಅನುಮಾನದಿಂದ ಕೆಲವು ಹಿನ್ನಡೆಯಾಗಬಹುದು
- ಸಾರ್ವಜನಿಕ ಕ್ಷೇತ್ರದಲ್ಲಿ ನೀವು ಗುರುತಿಸಿಕೊಳ್ಳಬೇಡಿ
- ಸಾಂಸಾರಿಕವಾಗಿ ಬೆಂಬಲವಿದೆ ಉಪಯೋಗಿಸಿಕೊಳ್ಳಿ
- ಖರ್ಚನ್ನು ನಿಯಂತ್ರಿಸಲು ಪ್ರಯತ್ನಿಸಿ
- ಆಲಸ್ಯವನ್ನು ದೂರ ಮಾಡಿ ಆರೋಗ್ಯದ ಬಗ್ಗೆ ಚಿಂತನೆ ಮಾಡಿ
- ಈಶ್ವರನ ಆರಾಧನೆ ಮಾಡಿ
ಮಕರ

- ಕುಟುಂಬದ ಎಲ್ಲಾ ಸದ್ಯಸರು ಬಹಳ ಸಂತಸದಿಂದಿರುತ್ತಾರೆ
- ನಿಮ್ಮದಲ್ಲದ ಕೆಲಸದಲ್ಲಿ ತೊಡಗುತ್ತೀರಿ ಅದರಿಂದ ತೊಂದರೆಯಾಗಬಹುದು
- ರಾಜಕೀಯ ಜನರ ಪ್ರಾಬಲ್ಯ ಹೆಚ್ಚಾಗಬಹುದು
- ಉದ್ಯೋಗದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತೀರಿ
- ವಿದ್ಯಾರ್ಥಿಗಳು ಸ್ವಲ್ಪ ಮನಸ್ಸನ್ನು ಕೇಂದ್ರೀಕರಿಸಬೇಕು
- ನಿಮ್ಮ ನಿರ್ಧಾರಗಳನ್ನು ಅಂತಿಮಗೊಳಿಸಬೇಡಿ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಕುಂಭ

- ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು, ಆತ್ಮೀಯರ ಭೇಟಿಯಿಂದ ಸಂತೋಷ ಆಗಲಿದೆ
- ಶ್ರಮದ ಪ್ರತಿಫಲವನ್ನು ಅನುಭವಿಸುತ್ತೀರಿ
- ಆಸಕ್ತಿಗೆ ತಕ್ಕದಾದ ಕೆಲಸ ಮಾಡಿ ಶುಭವಿದೆ
- ಮನಸ್ಸಿನ ಆಸೆ ಈಡೇರಬಹುದು
- ನಿಮ್ಮ ಆಲೋಚನೆ ದೂರದ ದೃಷ್ಟಿಯಿಂದ ಕೂಡಿರಲಿ
- ಬೇರೆಯವರ ಕಾರ್ಯವೈಖರಿ ನಿಮಗೆ ಮಾರ್ಗದರ್ಶಿಯಾಗಲಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ಪ್ರೇಮಿಗಳಲ್ಲಿ ಕಿತ್ತಾಟ ಆಗುವುದರಿಂದ ರಾಜಿ ಸೂತ್ರವನ್ನು ಅನುಸರಿಸಬೇಕಾಗುತ್ತದೆ
- ಕುಟುಂಬದ ಅಗತ್ಯ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ
- ಇಂದು ತಲೆನೋವು, ಜ್ವರ ನಿಮಗೆ ಬಾಧಿಸಬಹುದು
- ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ
- ಸವಾಲುಗಳನ್ನು ಸ್ವೀಕಾರ ಮಾಡಿ ಉತ್ಸುಕರಾಗಿರುತ್ತೀರಿ
- ಕೆಲವು ಕಠಿಣ ಸಮಸ್ಯೆಗಳು ಎದುರಾಗಬಹುದು
- ಇಷ್ಟದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ