newsfirstkannada.com

ಉದ್ಯೋಗದಲ್ಲಿ ಕಿರಿಕಿರಿ, ಅತಿ ಹೆಚ್ಚು ಶತ್ರುಗಳ ಕಾಟ; ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ?

Share :

20-07-2023

    ಕೆಲಸದ ಬದಲಾವಣೆಗೆ ಚಿಂತನೆ ನಡೆಸಬಹುದು

    ಮನೆಯವರಿಗೆ ಆತಂಕ ಉಂಟಾಗಬಹುದು

    ಹೊಸ ವ್ಯವಹಾರಗಳ ಆರಂಭದಿಂದ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

  • ತಾಂತ್ರಿಕ ವೃತ್ತಿಯವರಿಗೆ ಲಾಭದ ದಿನ
  • ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು ತಾತ್ಸಾರ ಬೇಡ
  • ವೈದ್ಯರಿಗೆ ಸವಾಲುಗಳು ಎದುರಾಗಬಹುದು
  • ವಿನಾಕಾರಣ ಹೆಚ್ಚು ಖರ್ಚಾಗಬಹುದು
  • ಮನೆಯವರಿಗೆ ಆತಂಕ ಉಂಟಾಗಬಹುದು
  • ಮಕ್ಕಳು ಮತ್ತು ಸ್ನೇಹಿತರು ಇಂದು ಸಹಕರಿಸುವುದಿಲ್ಲ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ಆಕಸ್ಮಿಕವಾಗಿ ಧನ ಲಾಭವಾಗಬಹುದು
  • ಬೇರೆಯವರ ಕಣ್ಣಿನ ದೃಷ್ಟಿಯಾಗದಂತೆ ಗಮನಿಸಿಕೊಳ್ಳಿ
  • ಕೆಲಸದ ಬದಲಾವಣೆ ಚಿಂತನೆ ನಡೆಸಬಹುದು
  • ಕೆಲಸದ ಜಾಗದಲ್ಲಿ ಬಡ್ತಿಯ ಸೂಚನೆ ಸಿಗಬಹುದು
  • ವಾಹನದಿಂದ ಲಾಭ ಉಂಟಾಗಬಹುದು
  • ಜವಾಬ್ದಾರಿ, ಒತ್ತಡ ಹೆಚ್ಚಾಗಿರುವ ದಿನ
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

  • ಸ್ವಂತ ಉದ್ಯಮಿಗಳಿಗೆ ಅನುಕೂಲಕರ ದಿನ
  • ಭವಿಷ್ಯದ ಬಗ್ಗೆ ಚಿಂತೆ ಕಾಡಬಹುದು
  • ತಂದೆಯವರಿಗೆ ತೊಂದರೆಯಿದೆ ಗಮನಿಸಿಕೊಳ್ಳಿ
  • ವಾಹನ ಚಾಲನೆಯಲ್ಲಿ ಸ್ವಲ್ಪ ಎಚ್ಚರಿಕೆಯಿರಲಿ
  • ಮನೆಯಲ್ಲಿ ಉತ್ತಮ ವಾತಾವರಣ ಇರುವುದಿಲ್ಲ
  • ಸಾಲದ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ

ಕಟಕ

  • ವ್ಯವಹಾರದಲ್ಲಿ ನಷ್ಟ, ನಿರಾಶೆಯಾಗಬಹುದು
  • ಇಲ್ಲಸಲ್ಲದ ಅಪಮಾನಕ್ಕೆ, ಮಾತಿಗೆ ಕಾರಣವಾಗಬಹುದು
  • ಇಂದು ಗೌರವಕ್ಕೆ ಧಕ್ಕೆ ಉಂಟಾಗಬಹುದು
  • ಹೊಸ ವ್ಯವಹಾರಗಳ ಆರಂಭದಿಂದ ಲಾಭವಿದೆ
  • ಮಕ್ಕಳಿಂದ ಸಂಪೂರ್ಣ ಸಹಕಾರ ಸಿಗಬಹುದು
  • ಚಿಂತಿತ ಕೆಲಸಗಳಿಗೆ ನಿಧಾನಗತಿಯ ಚಾಲನೆ
  • ಕುಲದೇವತಾ ಆರಾಧನೆ ಮಾಡಿ

ಸಿಂಹ

  • ರಿಯಲ್ ಎಸ್ಟೇಟ್ ಏಜೆಂಟ್ಸ್​ಗಳಿಗೆ ಲಾಭದ ದಿನ
  • ವೈದ್ಯಕೀಯ ವೃತ್ತಿಯವರಿಗೆ ಅನುಕೂಲಕರ ದಿನ
  • ದೂರ ದೇಶದಲ್ಲಿ ಅಧ್ಯಯನದ ಚಿಂತನೆ ಮಾಡಬಹುದು
  • ಇಂದು ಹಣಕಾಸಿನ ಅನುಕೂಲವಿದೆ
  • ಓದಿನ ಬಗ್ಗೆ ಸ್ವಲ್ಪ ಗಮನಹರಿಸಿ
  • ಇಂದು ಹಣದ ದುರ್ಬಳಕೆ ಬೇಡ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  • ಶತ್ರುಗಳ ಕಾಟ ಹೆಚ್ಚಾಗಬಹುದು
  • ಅನಾರೋಗ್ಯ ಸಮಸ್ಯೆ ಕಾಡಬಹುದು
  • ಮಕ್ಕಳ ಅಸಹಕಾರದಿಂದ ಬೇಸರ ಉಂಟಾಗಬಹುದು
  • ಹೊರಗಿನವರ ಅಪಹಾಸ್ಯಕ್ಕೆ ಗುರಿಯಾಗಬಹುದು
  • ಪ್ರತ್ಯಂಗಿರಾ ದೇವಿಯನ್ನ ಆರಾಧನೆ ಮಾಡಿ

ತುಲಾ

  • ಹಣದ ನಷ್ಟಕ್ಕೆ ಅವಕಾಶ ಮಾಡಿ ಕೊಡಬೇಡಿ
  • ಮಕ್ಕಳಿಂದ ಸಂತೋಷ ಉಂಟಾಗಬಹುದು
  • ಮನೆಯಲ್ಲಿ ಅಭಿವೃದ್ಧಿಯ ಸೂಚನೆ ಕಾಣಬಹುದು
  • ಪ್ರವಾಸಕ್ಕೆ ದೊಡ್ಡ ಯೋಜನೆ ಮಾಡಬಹುದು
  • ನಿದ್ರಾಭಂಗವಾಗದಂತೆ ಗಮನಿಸಿಕೊಳ್ಳಿ
  • ಮನೆಗೆ ಬೆಲೆ ಬಾಳುವ ವಸ್ತು ಖರೀದಿಯ ಚಿಂತನೆ ನಡೆಸಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ವೃಶ್ಚಿಕ

  • ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಶತ್ರು ಭೀತಿಯ ನೋವು ಕಾಡಬಹುದು
  • ಮಿತ್ರರಿಂದ ಧನಾಗಮವಾಗಬಹುದು
  • ನಿಮ್ಮ ಕರ್ತವ್ಯದ ಬಗ್ಗೆ ಗಮನಕೊಡಿ
  • ವೈರಾಗ್ಯದ ಮಾತುಗಳು ಬೇರೆಯವರಿಗೆ ಬೇಸರ ಉಂಟುಮಾಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಸ್ಥಳ ಅಥವಾ ಉದ್ಯೋಗ ಬದಲಾವಣೆಯ ಚಿಂತನೆ ನಡೆಸಬಹುದು
  • ಇಂದು ಅಕ್ಕಪಕ್ಕದವರಿಂದ ಕಿರಿಕಿರಿಯಾಗಬಹುದು
  • ಆತ್ಮಗೌರವಕ್ಕೆ ಧಕ್ಕೆ ಉಂಟಾಗಬಹುದು
  • ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು
  • ಯಾವುದೇ ವಿಚಾರದಲ್ಲಿಯೂ ನೀವು ಅನುಮಾನ ಪಡಬಾರದು
  • ವೆಂಕಟರಮಣ ಪ್ರಾರ್ಥನೆ ಮಾಡಿ

ಮಕರ

  • ನಿಮ್ಮನ್ನ ನಂಬಿ ಬಂದವರಿಗೆ ತೊಂದರೆಯಿದೆ
  • ಇಂದು ಸಾಲಭಾದೆ ಕಾಡಬಹುದು
  • ಆರ್ಥಿಕ ಸಮಸ್ಯೆಯಿಂದ ಹೊರಬರಲು ಕಷ್ಟವಿರುವ ದಿನ
  • ಆರೋಗ್ಯದಲ್ಲಿ ಏರುಪೇರಾಗಬಹುದು
  • ನಿಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆಯಿರಲಿ
  • ಹಣದ ವಿಚಾರದಲ್ಲಿ ಕೇಳಿದವರಿಗೆ ಲೆಕ್ಕ ಕೊಡಬೇಕಾಗಬಹುದು
  • ಋಣಮೋಚನ ಮಂಗಳ ಸ್ತೋತ್ರ ಪಠನೆ ಮಾಡಿ

ಕುಂಭ

  • ಮಕ್ಕಳಿಂದ ಅನುಕೂಲವಾಗುವ ದಿನ
  • ಅನಗತ್ಯ ಮಾತಿನಿಂದ ಶತ್ರುತ್ವ ಉಂಟಾಗಬಹುದು
  • ಇಂದು ಮಿತ್ರರಿಂದ ನೋವು ಉಂಟಾಗಬಹುದು
  • ಗೌರವ, ಸನ್ಮಾನಗಳಿಗೆ ಅಡೆತಡೆಯಾಗಬಹುದು
  • ಮನೆಯಲ್ಲಿ ಅಶಾಂತಿ ವಾತಾವರಣ
  • ಹಳೆಯ ನೆನಪುಗಳಿಂದ ಬೇಸರ ಉಂಟಾಗಬಹುದು
  • ಸುಬ್ರಮಣ್ಯನ ಆರಾಧನೆ ಮಾಡಿ

ಮೀನಾ

  • ಸ್ಥಿರಾಸ್ತಿ ಖರೀದಿ, ಮಾರಾಟಕ್ಕೆ ಒಳ್ಳೆಯ ದಿನ
  • ಇಂದು ಉದ್ಯೋಗದಲ್ಲಿ ನಷ್ಟವಿದೆ
  • ದುಶ್ಚಟಗಳಿಂದ ದೂರವಿದ್ದರೆ ಒಳ್ಳೆಯದು ಇಲ್ಲದಿದ್ದರೆ ಅನಾಹುತವಾಗಬಹುದು
  • ನಿರಾಸೆಗಿಂತ ಕರ್ತವ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಇಂದು ಬೇರೆಯವರ ಸಹಾಯ ನಿರೀಕ್ಷಿಸಬೇಡಿ
  • ದೂರದೂರಿನಿಂದ ಅಹಿತ ಸಂದೇಶ ಬರಬಹುದು
  • ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಕಿರಿಕಿರಿ, ಅತಿ ಹೆಚ್ಚು ಶತ್ರುಗಳ ಕಾಟ; ಏನ್​​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More